ಡಿಸೆಂಬರ್ 13ರಂದು ಸಂಸತ್​ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು

|

Updated on: Dec 13, 2023 | 2:45 PM

ಖಲಿಸ್ತಾನಿ ಉಗ್ರ ಗುರುಪತ್ವಂತ್​ ಸಿಂಗ್ ಪನ್ನು(Gurupatwant Singh Pannun) ಡಿಸೆಂಬರ್ 13ರಂದು ಸಂಸತ್​ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ. 13 ಡಿಸೆಂಬರ್ 2001 ರಂದು, ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕರು ಭಾರತದ ಸಂಸತ್ತಿನ ಮೇಲೆ ದಾಳಿ ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಪನ್ನು 2013ರಲ್ಲಿ ನೇಣಿಗೇರಿದ ಅಫ್ಜಲ್ ಗುರುವಿನ ಫೋಟೋ ತೆಗೆದು ವಿಡಿಯೋ ಮಾಡಿದ್ದ. ‘ದೆಹಲಿ ಬನೇಗಾ ಖಲಿಸ್ತಾನ್’ ಎಂದು ಬರೆದಿರುವ ಕ್ಯಾಪ್ ಕೂಡ ಧರಿಸಿದ್ದರು. ಅಮೆರಿಕ ಹಾಗೂ ಕೆನಡಾ ಪೌರತ್ವ ಹೊಂದಿರುವ ಪನ್ನು ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು […]

ಡಿಸೆಂಬರ್ 13ರಂದು ಸಂಸತ್​ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು
ಗುರುಪತ್ವಂತ್ ಸಿಂಗ್
Image Credit source: Navbharat Times
Follow us on

ಖಲಿಸ್ತಾನಿ ಉಗ್ರ ಗುರುಪತ್ವಂತ್​ ಸಿಂಗ್ ಪನ್ನು(Gurupatwant Singh Pannun) ಡಿಸೆಂಬರ್ 13ರಂದು ಸಂಸತ್​ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ. 13 ಡಿಸೆಂಬರ್ 2001 ರಂದು, ಪಾಕಿಸ್ತಾನದ ಬೆಂಬಲಿತ ಭಯೋತ್ಪಾದಕರು ಭಾರತದ ಸಂಸತ್ತಿನ ಮೇಲೆ ದಾಳಿ ಮಾಡಿದರು. ಅದಕ್ಕೆ ಸಂಬಂಧಿಸಿದಂತೆ ಪನ್ನು 2013ರಲ್ಲಿ ನೇಣಿಗೇರಿದ ಅಫ್ಜಲ್ ಗುರುವಿನ ಫೋಟೋ ತೆಗೆದು ವಿಡಿಯೋ ಮಾಡಿದ್ದ.

‘ದೆಹಲಿ ಬನೇಗಾ ಖಲಿಸ್ತಾನ್’ ಎಂದು ಬರೆದಿರುವ ಕ್ಯಾಪ್ ಕೂಡ ಧರಿಸಿದ್ದರು. ಅಮೆರಿಕ ಹಾಗೂ ಕೆನಡಾ ಪೌರತ್ವ ಹೊಂದಿರುವ ಪನ್ನು ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಅಮೇರಿಕಾ ಸರ್ಕಾರದ ಆದೇಶದ ಮೇರೆಗೆ ಭಾರತೀಯ ಮೂಲದ ನಿಖಿಲ್ ಗುಪ್ತಾ ಎಂಬ ಮಾದಕವಸ್ತು ಕಳ್ಳಸಾಗಣೆದಾರನನ್ನು ಜೆಕ್ ಅಧಿಕಾರಿಗಳು ಜೂನ್ 30 ರಂದು ಪ್ರೇಗ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಇದೀಗ ಸಂಸತ್​ನಲ್ಲಿ ನಡೆದ ಘಟನೆ ಹಿಂದೆ ಹಾಗೂ ಗುರುಪತ್ವಂತ್​ ಸಿಂಗ್​ಗೆ ಏನಾದರೂ ಸಂಬಂಧವಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಪನ್ನು ಕಳೆದ ಎರಡು ವರ್ಷಗಳಿಂದ ವಿಶ್ವದಾದ್ಯಂತ ಭಾರತದ ವಿರುದ್ಧ ಆಕ್ರಮಣಕಾರಿ ನಿಲುವು ತಳೆಯುತ್ತಿದ್ದಾರೆ. 2001ರಲ್ಲಿ ಎರಡು ಭಯೋತ್ಪಾದಕ ಸಂಘಟನೆಯ ಉಗ್ರರು ನಡೆಸಿದ್ದ ದಾಳಿಯಲ್ಲಿ ದೆಹಲಿ ಪೊಲೀಸರು ಸೇರಿ 9 ಮಂದಿ ಹುತಾತ್ಮರಾಗಿದ್ದರು.

ಇಂದು ಕೂಡ ದೆಹಲಿಯ ಸಂಸತ್​ ಭವನದಲ್ಲಿ ಸಂದರ್ಶಕರ ಗ್ಯಾಲರಿಯಿಂದ ಓರ್ವ ಪುರುಷ ಹಾಗೂ ಮಹಿಳೆ ಭವನದ ಒಳಗೆ ಬಂದು ಅಶ್ರುವಾಯು ಸಿಡಿಸಿದ್ದಾರೆ, ಬಳಿಕ ಅವರನ್ನು ಬಂಧಿಸಲಾಗಿದೆ.

ಮತ್ತಷ್ಟು ಓದಿ:ಪಂಜಾಬ್: ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಆಸ್ತಿಗಳ ಮೇಲೆ ಎನ್​ಐಎ ದಾಳಿ

ಅಮೆರಿಕದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ನಿಖಿಲ್ ಗುಪ್ತಾ ಪನ್ನು ಹತ್ಯೆಗೆ ಯತ್ನಿಸಿದ್ದ ಅಂತ ಅಮೆರಿಕ ಆರೋಪಿಸಿತ್ತು. ಇದೇ ವಿಚಾರಕ್ಕೆ ಸಂಸತ್ ಮೇಲೆ ದಾಳಿ ಮಾಡೋದಾಗಿ ಪನ್ನುನ್ ಬೆದರಿಕೆ ಹಾಕಿದ್ದಾನೆ. ನನ್ನ ಹತ್ಯೆಗೆ ವಿಫಲ ಯತ್ನ ನಡೆಸಿತ್ತು. ಈ ಹತ್ಯೆ ಯತ್ನಕ್ಕೆ ಪ್ರತಿಕಾರವಾಗಿ ಸಂಸತ್ ಭವನದ ಮೇಲೆ ದಾಳಿ ಮಾಡ್ತೀನಿ ಅಂತ ಪನ್ನು ಎಚ್ಚರಿಸಿದ್ದಾನೆ.

ಪನ್ನು ಈ ಹಿಂದೆಯೂ ಹಲವು ಬಾರಿ ಬೆದರಿಕೆ ಬಾಕಿದ್ದ. ಭಾರತ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಬೆದರಿಕೆ ಹಾಕಿದ್ದ. ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ನಡೆಯೋದಕ್ಕೆ ನಾವು ಬಿಡುವುದಿಲ್ಲ, ಮ್ಯಾಚ್ ನಿಲ್ಲಿಸಿಯೇ ನಿಲ್ಲಿಸುತ್ತೇವೆ ಅಂತ ಬೆದರಿಕೆ ಹಾಕಿದ್ದ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:44 pm, Wed, 13 December 23