Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಸಭೆಯೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳನ್ನು ಹಿಡಿದಿದ್ದು ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ

ಬುಧವಾರ ಮಧ್ಯಾಹ್ನ 1.02 ಗಂಟೆಗೆ ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಇಬ್ಬರು ಅಪರಿಚಿತರ ಹಳದಿ ಹೊಗೆಯನ್ನು ಹೊರಸೂಸುವ ಹೊಗೆ ಡಬ್ಬಿಗಳನ್ನು ಹೊತ್ತೊಯ್ದು ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಲೋಕಸಭೆಯ ಸಭಾಂಗಣಕ್ಕೆ ನುಗ್ಗಿದ್ದು ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಈ ವೇಳೆ ಆಗಂತುಕರನ್ನು ಹಿಡಿದು ಅವರ ಕೈಯಿಂದ ಸ್ಮೋಕ್ ಬಾಂಬ್ ಕಿತ್ತುಕೊಂಡಿದ್ದು ಕಾಂಗ್ರೆಸ್ ಸಂಸದ.

ಲೋಕಸಭೆಯೊಳಗೆ ನುಗ್ಗಿದ ಇಬ್ಬರು ವ್ಯಕ್ತಿಗಳನ್ನು ಹಿಡಿದಿದ್ದು ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ
ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ
Follow us
ರಶ್ಮಿ ಕಲ್ಲಕಟ್ಟ
|

Updated on:Dec 13, 2023 | 3:26 PM

ದೆಹಲಿ ಡಿಸೆಂಬರ್ 13: ಲೋಕಸಭೆಯಲ್ಲಿ (Lok sabha) ಕಲಾಪ ನಡೆಯುತ್ತಿದ್ದಂತೆ ಭದ್ರತೆಯನ್ನು ಉಲ್ಲಂಘಿಸಿದ (security breach) ಇಬ್ಬರು ವ್ಯಕ್ತಿಗಳು ತಮ್ಮ ಕೈಯಲ್ಲಿ ಹೊಗೆಸೂಸುವ ಡಬ್ಬಿಗಳೊಂದಿಗೆ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದಿದ್ದಾರೆ. ತಕ್ಷಣವೇ ಸದನದಲ್ಲಿ ಹಳದಿ ಹೊಗೆ ಕಾಣಿಸಿಕೊಂಡಿದ್ದು ರಾಜಕಾರಣಿಗಳು ಸದನದಿಂದ ಓಡಿ ಹೋಗಿದ್ದಾರೆ. ಸದನದೊಳಗೆ ನುಗ್ಗಿದ ಆ ಇಬ್ಬರು ವ್ಯಕ್ತಿಗಳು ಘೋಷಣೆಗಳನ್ನು ಕೂಗುತ್ತಿದ್ದು,  ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸಿದರು ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ(Karti Chidambaram) ಹೇಳಿದ್ದಾರೆ.

“ಇಬ್ಬರು 20 ವರ್ಷ ವಯಸ್ಸಿನ ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದರು ಅವರ ಕೈಯಲ್ಲಿ ಡಬ್ಬಿ ಇತ್ತು. ಈ ಡಬ್ಬಿಗಳು ಹಳದಿ ಹೊಗೆಯನ್ನು ಹೊರಸೂಸುವಂಥದ್ದು. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದರು. ಅವರು ಕೆಲವು ಘೋಷಣೆಗಳನ್ನು ಕೂಗುತ್ತಿದ್ದರು. ಹೊಗೆ ವಿಷಕಾರಿಯಾಗಿರಬಹುದು ಎಂದಿದ್ದಾರೆ ಕಾರ್ತಿ ಚಿದಂಬರಂ. ಕೆಲವು ಸಂಸದರು ಸದನದಿಂದ ಹೊರಗೆ ಓಡಿದರೆ ಇನ್ನು ಕೆಲವರು ದಾಳಿಕೋರರ ಕಡೆಗೆ ಓಡಿ ಅವರನ್ನು ಹಿಡಿದಿದ್ದಾರೆ.

ಇಬ್ಬರು ವ್ಯಕ್ತಿಗಳನ್ನು ಹಿಡಿದ ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ, ಅವರ ಕೈಯಲ್ಲಿ ಹಳದಿ ಬಣ್ಣದ ಹೊಗೆ ಹೊರಸೂಸುವ ಏನೋ ಇತ್ತು. ನಾನು ಅದನ್ನು ಕಿತ್ತು ಹೊರಗೆ ಎಸೆದೆ. ಇದು ಪ್ರಮುಖ ಭದ್ರತಾ ಲೋಪವಾಗಿದೆ ಎಂದಿದ್ದಾರೆ.

ಬುಧವಾರ ಮಧ್ಯಾಹ್ನ 1.02 ಗಂಟೆಗೆ ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಇಬ್ಬರು ಅಪರಿಚಿತರ ಹಳದಿ ಹೊಗೆಯನ್ನು ಹೊರಸೂಸುವ ಹೊಗೆ ಡಬ್ಬಿಗಳನ್ನು ಹೊತ್ತೊಯ್ದು ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಲೋಕಸಭೆಯ ಸಭಾಂಗಣಕ್ಕೆ ನುಗ್ಗಿದ್ದು ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ದೃಶ್ಯಗಳನ್ನು ನೋಡಿದರೆ ಒಬ್ಬ ವ್ಯಕ್ತಿ, ಕಡು ನೀಲಿ ಬಣ್ಣದ ಶರ್ಟ್ ಧರಿಸಿದ್ದು ಡೆಸ್ಕ್‌ಗಳ ಮೇಲೆ ಜಿಗಿಯುತ್ತಿರುವುದು ಮತ್ತು ಆದರೆ ಎರಡನೆಯವ ಸಂದರ್ಶಕರ ಗ್ಯಾಲರಿಯಲ್ಲಿ ಹೊಗೆಯನ್ನು ಸಿಂಪಡಿಸುತ್ತಿರುವುದು ಕಾಣುತ್ತದೆ. ಇಬ್ಬರನ್ನೂ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಹಿಡಿದಿದ್ದಾರೆ.

ಇದನ್ನೂ ಓದಿ: ಲೋಕಸಭಾ ಕಲಾಪ ವೇಳೆ ಭದ್ರತಾ ಲೋಪ: ವೀಕ್ಷಕರ ಪಾಸ್​ ನಿಷೇಧಿಸಿದ ಸ್ಪೀಕರ್ ಓಂ ಬಿರ್ಲಾ 

ಲೋಕಸಭೆಯು ಮಧ್ಯಾಹ್ನ 2 ಗಂಟೆಗೆ ಪುನರಾರಂಭವಾಗಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಸಂಕ್ಷಿಪ್ತ ಹೇಳಿಕೆ ನೀಡಿದ್ದು,ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ವಿಚಾರಣೆಗೆ ಸೇರಲು ದೆಹಲಿ ಪೊಲೀಸರನ್ನು ಕೇಳಿದ್ದೇವೆ ಎಂದಿದ್ದಾರೆ. ಭದ್ರತಾ ಲೋಪ ಸಂಭವಿಸಿದ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಅನುಪ್ರಿಯಾ ಪಟೇಲ್ ಉಪಸ್ಥಿತರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Wed, 13 December 23