ಲೋಕಸಭೆಯಲ್ಲಿ ಭದ್ರತಾ ಲೋಪ: ಕಲಾಪ ವೇಳೆ ನುಗ್ಗಿ ಅಶ್ರುವಾಯು ಸಿಡಿಸಿದ ಇಬ್ಬರು ವ್ಯಕ್ತಿಗಳು ವಶಕ್ಕೆ
Security breach in Lok Sabha: ಇಂದು ಸಂಸತ್ ಕಲಾಪ ನಡೆಯುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಒಳನುಗ್ಗಿ ಗ್ಯಾಸ್ ಹೊರಸೂಸುವ ವಸ್ತುವೊಂದನ್ನು ಎಸೆದ ಘಟನೆ ನಡೆದಿದೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದರು, ಅವರನ್ನು ಸಂಸದರು ಹಿಡಿದರು.ಆಮೇಲೆ, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ದೆಹಲಿ ಡಿಸೆಂಬರ್ 13: ಇಬ್ಬರು ವ್ಯಕ್ತಿಗಳು ಲೋಕಸಭೆ ಪ್ರವೇಶಿಸಿ (Security breach at Lok Sabha) ಅಶ್ರುವಾಯು ಸಿಡಿಸಿದ ಘಟನೆ ಇಂದು ಲೋಕಸಭೆಯಲ್ಲಿ (Loksabha) ನಡೆದಿದೆ. ಸಂಸತ್ ಮೇಲೆ ಉಗ್ರ ದಾಳಿ ನಡೆದು ಇಂದಿಗೆ 22 ವರ್ಷ. ಇದೇ ದಿನ ಲೋಕಸಭೆಯಲ್ಲಿ ಭದ್ರತಾಲೋಪ ಸಂಭವಿಸಿದ್ದು ದಿಗಿಲು ಹುಟ್ಟಿಸಿದೆ. ಇಬ್ಬರು ಯುವಕರು ಗ್ಯಾಲರಿಯಿಂದ ಜಿಗಿದರು. ಅವರು ಅನಿಲ ಹೊರಸೂಸುವಂಥಾ ಏನೋ ವಸ್ತು ಎಸೆದರು, ಅವರನ್ನು ಸಂಸದರು ಹಿಡಿದಿದ್ದಾರೆ..ಆಮೇಲೆ, ಅವರನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆತಂದರು. ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದು ಖಂಡಿತವಾಗಿಯೂ ಭದ್ರತಾ ಲೋಪವಾಗಿದೆ ಎಂದುಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಅಂದ ಹಾಗೆ ಲೋಕಸಭೆಯ ಒಳಗೆ ಪ್ರವೇಶಿಸಿದ ವ್ಯಕ್ತಿಯ ಹೆಸರು ಸಾಗರ್ ಎಂದು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಮಾಹಿತಿ ನೀಡಿದ್ದಾರೆ. ಈ ವ್ಯಕ್ತಿ ಮೈಸೂರಿನ ಸಂಸದರ ಅತಿಥಿ ಎಂದು ಹೇಳಿ ಸಂಸತ್ ಪ್ರವೇಶಿಸಿದ್ದರು ಎಂದು ಡ್ಯಾನಿಶ್ ಅಲಿ ಹೇಳಿರುವುದಾಗಿ ಟಿವಿ9 ಭಾರತ್ವರ್ಷ್ ವರದಿ ಮಾಡಿದೆ.
#WATCH | An unidentified man jumps from the visitor’s gallery of Lok Sabha after which there was a slight commotion and the House was adjourned. pic.twitter.com/Fas1LQyaO4
— ANI (@ANI) December 13, 2023
ಇಲ್ಲಿಗೆ ಬರುವವರೆಲ್ಲರೂ – ಅದು ಸಂದರ್ಶಕರು ಅಥವಾ ವರದಿಗಾರರೇ ಆಗಿರಲಿ ಅವರು ಟ್ಯಾಗ್‌ಗಳನ್ನು ಹೊಂದಿರುವುದಿಲ್ಲ. ಹಾಗಾಗಿ, ಸರ್ಕಾರವು ಈ ಬಗ್ಗೆ ಗಮನ ಹರಿಸಬೇಕು ಎಂದು ನಾನು ಭಾವಿಸುತ್ತೇನೆ. ಇದು ಸಂಪೂರ್ಣ ಭದ್ರತಾ ಲೋಪ ಎಂದು ನಾನು ಭಾವಿಸುತ್ತೇನೆ. ಲೋಕಸಭೆಯ ಒಳಗೆ ಏನು ಬೇಕಾದರೂ ಆಗುತ್ತಿತ್ತು ಎಂದು ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಡಿಂಪಲ್ ಯಾದವ್ ಹೇಳಿದ್ದಾರೆ.
ಇಬ್ಬರು 20 ವರ್ಷ ವಯಸ್ಸಿನ ಯುವಕರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದರು ಮತ್ತು ಅವರ ಕೈಯಲ್ಲಿ ಡಬ್ಬಿಗಳನ್ನು ಹೊಂದಿದ್ದರು. ಈ ಡಬ್ಬಿಗಳು ಹಳದಿ ಹೊಗೆಯನ್ನು ಹೊರಸೂಸುತ್ತಿವೆ. ಅವರಲ್ಲಿ ಒಬ್ಬರು ಸ್ಪೀಕರ್ ಕುರ್ಚಿಯತ್ತ ಓಡಲು ಪ್ರಯತ್ನಿಸುತ್ತಿದ್ದರು. ಕೆಲವು ಘೋಷಣೆಗಳನ್ನು ಕೂಗಿದರು. ಹೊಗೆಯು ವಿಷಕಾರಿಯಾಗಿರಬಹುದು. ಇದು ವಿಶೇಷವಾಗಿ ಡಿಸೆಂಬರ್ 13 ರಂದು 2001 ರಲ್ಲಿ ಸಂಸತ್ತಿನ ಮೇಲೆ ದಾಳಿಯಾದ ದಿನದಂದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
#WATCH | Delhi: Two protestors, a man and a woman have been detained by Police in front of Transport Bhawan who were protesting with colour smoke. The incident took place outside the Parliament: Delhi Police pic.twitter.com/EZAdULMliz
— ANI (@ANI) December 13, 2023
ಅದೇ ವೇಳೆ ಸಂಸತ್ ನ ಹೊರಗೆ ಸಾರಿಗೆ ಭವನದ ಮುಂದೆ ಬಣ್ಣ ಹೊಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಪ್ರತಿಭಟನಾಕಾರರು, ಓರ್ವ ಪುರುಷ ಮತ್ತು ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಹೊತ್ತುಕೊಂಡು ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಇವರನ್ನು ಬಂಧಿಸಲಾಗಿದೆ. ಇವರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಸಂಸತ್ ದಾಳಿಗೆ 22 ವರ್ಷ: ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ, ಸ್ಪೀಕರ್ ಓಂ ಬಿರ್ಲಾ
ಅಪರಿಚಿತರು ಗ್ಯಾಲರಿಯಿಂದ ಜಿಗಿದರು. ಒಬ್ಬರಿಗಿಂತ ಹೆಚ್ಚು ಜನ ಇದ್ದರು.. ಅವರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ನಂತರ ಗ್ಯಾಸ್ ಸಿಂಪಡಿಸಲು ಪ್ರಾರಂಭಿಸಿದರು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಕಾಕೋಲಿ ದಸ್ತಿದಾರ್ ಹೇಳಿದ್ದಾರೆ. .
ಸಾರ್ವಜನಿಕ ಗ್ಯಾಲರಿಯಿಂದ ಇಬ್ಬರು ಜಿಗಿದಿದ್ದು ಹೊಗೆ ಕಾಣಿಸಿಕೊಂಡಿದೆ. ಸುತ್ತಲೂ ಅವ್ಯವಸ್ಥೆ ಇತ್ತು. ಅವರಿಬ್ಬರನ್ನೂ ಭದ್ರತಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಸಂಸದ ಡ್ಯಾನಿಶ್ ಅಲಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಏನೇನಾಯ್ತು?
ಲೋಕಸಭೆಯ ಕಲಾಪದ ನೇರ ಪ್ರಸಾರ ವಿಡಿಯೊ ನೋಡಿದರೆ, ಒಬ್ಬರು ಬೆಂಚುಗಳ ಮೇಲೆ ಜಿಗಿಯುತ್ತಿರುವುದನ್ನು ಕಾಣಬಹುದು. ಅದೇ ವೇಳೆ ಇನ್ನೊಬ್ಬರು ಸಂದರ್ಶಕರ ಗ್ಯಾಲರಿಯಿಂದ ಹೊಗೆ ಸೂಸುವ ವಸ್ತುವನ್ನು ಬಿಸಾಡಿದ್ದಾರೆ. ಸದನದಲ್ಲಿ ಹಳದಿ ಬಣ್ಣದ ಹೊಗೆ ತುಂಬಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು. ಅಷ್ಟರಲ್ಲಿ ಸಂಸದರು, ಭದ್ರತಾ ಸಿಬ್ಬಂದಿಗಳು ಆ ಇಬ್ಬರು ವ್ಯಕ್ತಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಅಮ್ರೋಹಾ ಸಂಸದ ಕುನ್ವರ್ ಡ್ಯಾನಿಶ್ ಅಲಿ ಈ ರೀತಿ ಸದನಕ್ಕೆ ನುಗ್ಗಿದ ವ್ಯಕ್ತಿಗಳು ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಅವರಿಗೆ ಪಾಸ್ ಪಡೆದಿದ್ದಾರೆ ಎಂದು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಮೊದಲಿಗೆ ನಾನು ಸಂದರ್ಶಕರ ಗ್ಯಾಲರಿಯಿಂದ ಯಾರೋ ಕೆಳಗೆ ಬಿದ್ದಿದ್ದಾರೆ ಎಂದು ಭಾವಿಸಿದೆ.ಎರಡನೇ ವ್ಯಕ್ತಿ ಜಿಗಿದ ನಂತರವೇ ಅದು ಭದ್ರತಾ ಲೋಪ ಎಂದು ನಾನು ಅರಿತುಕೊಂಡೆ .ಅನಿಲವು ವಿಷಕಾರಿಯಾಗಿರಬಹುದು. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Wed, 13 December 23