ದೆಹಲಿಯ ರಸ್ತೆಯಲ್ಲಿ ಚಿರತೆ ಮರಿ ಶವವಾಗಿ ಪತ್ತೆ
ದೆಹಲಿಯ ಅಲಿಪುರ್ ಪ್ರದೇಶದ ರಸ್ತೆಯಲ್ಲಿ ಚಿರತೆ ಮರಿಯೊಂದು ಶವವಾಗಿ ಪತ್ತೆಯಾಗಿದೆ. ಖತುಶ್ಯಾಮ್ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಚಿರತೆ ಮರಿ ಸಾವನ್ನಪ್ಪಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ಕುರಿತು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಚಿರತೆ ಮರಿಯ ಶವವನ್ನು ಪತ್ತೆ ಮಾಡಿದೆ. ಇದು ರಸ್ತೆ ಅಪಘಾತದ ಪ್ರಕರಣ ಎಂದು ಅವರು ಶಂಕಿಸಿದ್ದಾರೆ.
ದೆಹಲಿಯ ಅಲಿಪುರ್ ಪ್ರದೇಶದ ರಸ್ತೆಯಲ್ಲಿ ಚಿರತೆ(Leopard) ಮರಿಯೊಂದು ಶವವಾಗಿ ಪತ್ತೆಯಾಗಿದೆ. ಖತುಶ್ಯಾಮ್ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಚಿರತೆ ಮರಿ ಸಾವನ್ನಪ್ಪಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ಕುರಿತು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಚಿರತೆ ಮರಿಯ ಶವವನ್ನು ಪತ್ತೆ ಮಾಡಿದೆ. ಇದು ರಸ್ತೆ ಅಪಘಾತದ ಪ್ರಕರಣ ಎಂದು ಅವರು ಶಂಕಿಸಿದ್ದಾರೆ.
ಮೃತದೇಹವನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಕೆಲ ದಿನಗಳ ಹಿಂದೆ ದಕ್ಷಿಣ ದೆಹಲಿಯ ಸೈನಿಕ್ ಫಾರ್ಮ್ ಪ್ರದೇಶದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ದೊಡ್ಡ ಬೆಕ್ಕನ್ನು ಹಿಡಿಯಲು ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರಿಂದ ಸಮೀಪದ ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಸೂಚಿಸಲಾಯಿತು.
ಮತ್ತಷ್ಟು ಓದಿ: ಬೆಂಗಳೂರು ಚಿರತೆ ಸಾವು ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ, ಪ್ರಶ್ನೆಗಳ ಸುರಿಮಳೆ
ಸುಮಾರು 80 ರಿಂದ 90 ಕೆ.ಜಿ ತೂಕದ ಪೂರ್ಣವಾಗಿ ಬೆಳೆದ ಚಿರತೆ ಪ್ರಾಣಿಯನ್ನು ಹಿಡಿಯಲು ಸ್ಥಳದಲ್ಲಿ ಎರಡು ಬೋನುಗಳನ್ನು ಸ್ಥಾಪಿಸಲಾಗಿದೆ. ಚಿರತೆ ಸಮೀಪದ ಅಸೋಲಾ ಭಟ್ಟಿ ವನ್ಯಜೀವಿ ಅಭಯಾರಣ್ಯದಿಂದ ಬಂದಿದೆ ಎಂದು ನಂಬಲಾಗಿದೆ.
ಮಹಾರಾಷ್ಟ್ರದ ನಾಸಿಕ್‌ನ ನಂದೂರ್‌ಬಾರ್ ತಾಲೂಕಿನಲ್ಲಿ ಮಂಗಳವಾರ ಚಿರತೆಯೊಂದು ಸ್ಥಳೀಯ ಆಸ್ಪತ್ರೆಗೆ ನುಗ್ಗಿ ಉದ್ವಿಗ್ನತೆ ಉಂಟಾಗಿತ್ತು. ಅರಣ್ಯ ಇಲಾಖೆ ತಕ್ಷಣ ಪರಿಸ್ಥಿತಿಗೆ ಸ್ಪಂದಿಸಿ ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಜೂನ್‌ನಲ್ಲಿ ನಂದೂರ್‌ಬಾರ್ ಜಿಲ್ಲೆಯ ದೂರದ ಪ್ರದೇಶದಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿಯಾಗಿದ್ದರು. ನಂದೂರ್ಬಾರ್ ಜಿಲ್ಲೆಯ ತಲೋಡಾ ತಾಲೂಕಿನ ನಯಮಾಲ್‌ನಲ್ಲಿರುವ ತನ್ನ ಮನೆಯಿಂದ ಅವರನ್ನು ಎಳೆದುಕೊಂಡು ಹೋಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ