ಸಂಸತ್ತಿನಲ್ಲಿ ಭದ್ರತಾಲೋಪ: ಕಲಾಪದೊಳಗೆ ನುಗ್ಗಿದ್ದವರ ಗುರುತು ಪತ್ತೆ, ಪ್ರತಾಪ್ ಸಿಂಹ ಪಿಎ ಕಡೆಯಿಂದ ಪಾಸ್
ಸಂಸತ್ ಒಳಗೆ ಅಶ್ರುವಾಯು ಸಿಡಿಸಿದ ವ್ಯಕ್ತಿಗಳ ಗುರುತು ಪತ್ತೆ ಮಾಡಲಾಗಿದೆ. ಕೆಲವೊಂದು ವರದಿಗಳ ಪ್ರಕಾರ ಮೈಸೂರು ಸಂಸದ ಪ್ರತಾಪ್ ಸಿಂಹ ಪಿಎ ಈ ಇಬ್ಬರಿಗೆ ಎಂಟ್ರಿ ಪಾಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಸದರ ಪಿಎ ನೀಡಿರುವ ಪಾಸ್ ಫೋಟೋ ಎಲ್ಲ ಕಡೆ ವೈರಲ್ ಆಗಿದೆ.
ದೆಹಲಿ. ಡಿ.13: ದೆಹಲಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ವೇಳೆ ಇಬ್ಬರು ವ್ಯಕ್ತಿಗಳು ಸಂಸತ್ ಒಳಗೆ ಅಶ್ರುವಾಯು ಸಿಡಿಸಿದ್ದಾರೆ. ಈ ವೇಳೆ ಸಂಸತ್ನಲ್ಲಿ (Parliament) ಕೆಲಕಾಲ ಗೊಂದಲ ಸೃಷ್ಟಿಯಾಗಿದೆ. ಇನ್ನು ಈ ವ್ಯಕ್ತಿಗಳು ಕಲಾಪ ನಡೆಯುತ್ತಿರುವಲ್ಲಿಗೆ ಹೇಗೆ ಬಂದಿದ್ದಾರೆ ಎಂದು ಪತ್ತೆ ಮಾಡಲಾಗುತ್ತಿದೆ. ಕೆಲವೊಂದು ವರದಿಗಳ ಪ್ರಕಾರ ಮೈಸೂರು ಸಂಸದ ಪ್ರತಾಪ್ ಸಿಂಹ ಪಿಎ ಈ ಇಬ್ಬರಿಗೆ ಎಂಟ್ರಿ ಪಾಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಸದರ ಪಿಎ ನೀಡಿರುವ ಪಾಸ್ ಫೋಟೋ ಎಲ್ಲ ಕಡೆ ವೈರಲ್ ಆಗಿದೆ.
ಸಂದರ್ಶಕರ ಗ್ಯಾಲರಿಯಿಂದ ಭಾರತೀಯ ಸಂಸತ್ತಿನ ಒಳಗೆ ಜಿಗಿದು ಹೊಗೆ ಡಬ್ಬಿ ಎಸೆದ ವ್ಯಕ್ತಿಯನ್ನು ಸಾಗರ್ ಶರ್ಮಾ ಮತ್ತು ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ಪಾರ್ಲಿಮೆಂಟ್ ಪಾಸ್ ಪ್ರಕಾರ, ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಪಿಎ ಸಂಸತ್ ಪ್ರವೇಶಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಹೇಳಲಾಗಿದೆ.ಇದುವರೆಗೆ 4 ಮಂದಿಯನ್ನು ಬಂಧಿಸಲಾಗಿದೆ ಎಂದು ಪಾಸ್ ಫೋಟೋವನ್ನು ಆದಿತ್ಯ ರಾಜ್ ಕೌಲ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ
#BREAKING: The Man who jumped inside the Indian Parliament from Visitor’s Gallery and threw a smoke canister has been identified as Sagar Sharma. As per his Parliament Pass, he was recommended for Parliament entry by MP Pratap Simha from Mysore. 4 people arrested till now. pic.twitter.com/LMRYQuiiUN
— Aditya Raj Kaul (@AdityaRajKaul) December 13, 2023
ಸಂಸತ್ ಮೇಲೆ ನಡೆದ ಭಯೋತ್ಪಾದನಾ ದಾಳಿಯನ್ನು ನೆನಪಿಸುವಂತಹ ಘಟನೆ
ಎರಡು ದಶಕದ ಹಿಂದೆ ಸಂಸತ್ ಮೇಲೆ ನಡೆದ ಭಯೋತ್ಪಾದನಾ ದಾಳಿಯನ್ನು ನೆನಪಿಸುವಂತಹ ಘಟನೆಯೊಂದು ಇಂದು ನಡೆದಿದೆ. ಮತ್ತೆ ಸಂಸತ್ನಲ್ಲಿ ಭದ್ರತಾ ಲೋಪ ಉಂಟಾಗಿದೆ. ಇಂದು ಲೋಕಸಭೆಯ ಕಲಾಪದಲ್ಲಿ ಇದ್ದಕ್ಕಿದ್ದಂತೆ ಇಬ್ಬರು ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಅಶ್ರುವಾಯು ಸಿಡಿಸಿದ್ದಾರೆ. ಸ್ಮೋಕ್ಗನ್ನಿಂದ ಹಳದಿ ಹೊಗೆ ಬರುತ್ತಿದ್ದು, ಗನ್ ಪೌಡರ್ ವಾಸನೆ ಕೂಡ ಬರುತ್ತಿತ್ತು.ಈ ಘಟನೆಯಿಂದಾಗಿ ಸಂಸತ್ತಿನಲ್ಲಿ ಗದ್ದಲ ಉಂಟಾಯಿತು. ಈ ಘಟನೆಯು ಡಿಸೆಂಬರ್ 13, 2001 ರಂದು ಸಂಸತ್ತಿನ ಮೇಲಿನ ದಾಳಿಯ ನೆನಪುಗಳನ್ನು ಪುನರುಜ್ಜೀವನಗೊಳಿಸಿದೆ. 2001ರಲ್ಲಿ ಸಂಸತ್ತಿನ ಮೇಲಿನ ದಾಳಿಯಲ್ಲಿ 9 ಮಂದಿ ಹುತಾತ್ಮರಾಗಿದ್ದರು.
ಈ ಘಟನೆಯ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವಿಚಾರಣೆ ನಡೆಸಲಾಗುತ್ತಿದೆ. ಒಳಗೆ ಜಿಗಿದ ಇಬ್ಬರಿಗೆ ಯಾರೊಂದಿಗಾದರೂ ವೈಯಕ್ತಿಕ ದ್ವೇಷವಿತ್ತೇ? ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಶಿವಸೇನೆ ಸಂಸದ ಅರವಿಂದ್ ಸಾವಂತ್ ಹೇಳಿದ್ದಾರೆ. ಅವರು ಕೆಳಗೆ ಹಾರಿದಾಗ, ಲೋಕಸಭೆಯಲ್ಲಿ ಹಿಂದಿನ ಬೆಂಚುಗಳು ಖಾಲಿಯಾಗಿದ್ದವು, ಆದ್ದರಿಂದ ಅವರು ಸಿಕ್ಕಿಬಿದಿದ್ದಾರೆ. ಈ ಘಟನೆ ನಡೆದಾಗ ಇಬ್ಬರು ಸಚಿವರು ಕೂಡ ಸದನದಲ್ಲಿ ಹಾಜರಿದ್ದರು. ಓರ್ವ ಪುರುಷ ಮತ್ತು ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಭದ್ರತಾಲೋಪದ ನಂತರ ಮತ್ತೆ ಸಂಸತ್ ಕಲಾಪ ಪ್ರಾರಂಭ; ತನಿಖೆ ನಡೆಸುವುದಾಗಿ ಓಂ ಬಿರ್ಲಾ ಭರವಸೆ
ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ಲೋಪ ಬಗ್ಗೆ ಪ್ರಾಥಮಿಕ ವರದಿ ಬಂದಿದೆ. ವಿವರವಾದ ತನಿಖಾ ವರದಿಗಳನ್ನು ಸದನದಲ್ಲಿ ಮಂಡಿಸಲಾಗುವುದು. ಒಳಗೆ ಬಂದ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಕಟ್ಟಡದ ಹೊರಗಿದ್ದ ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಪ್ರತ್ಯಕ್ಷದರ್ಶಿ ಮೋಹನ್ ದಾನಪ್ಪ ಟಿವಿ9ಗೆ ಹೇಳಿದ್ದೇನು?
ದೆಹಲಿಯಲ್ಲಿ ಟಿವಿ9ಗೆ ಪ್ರತ್ಯಕ್ಷದರ್ಶಿ ಮೋಹನ್ ದಾನಪ್ಪ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಂಸತ್ ಕಲಾಪದ ನೋಡಲು ನಾವೆಲ್ಲರೂ ಬಂದಿದ್ದೆವು. ನಾವು ಮೊದಲ ಗ್ಯಾಲರಿಯಲ್ಲಿದ್ದೆವು, ಅವನು ಗ್ಯಾಲರಿ 2ರಲ್ಲಿ ಇದ್ದ, ಗ್ಯಾಲರಿಯಿಂದ ಏಕಾಏಕಿ ಸದನಕ್ಕೆ ಜಿಗಿದು ಕಲರ್ ಸ್ಪ್ರೇ ಹರಡಿದ್ದಾನೆ. ಬಲಗಾಲಿನ ಶೂನಿಂದ ತೆಗೆದು ಹಳದಿ ಕಲರ್ ಸ್ಪ್ರೇ ಹರಡಿದ್ದಾನೆ. ಈ ವೇಳೆ ಕೆಲ ಸಂಸದರು ಆ ವ್ಯಕ್ತಿಯನ್ನು ಹಿಡಿದಿದ್ದರೆ. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Wed, 13 December 23