ಮನೆಯ ತಾರಸಿಯಲ್ಲಿ ನಿಂತು ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಎಂಜಿಲು ಉಗುಳಿದ್ದ ಮುಸ್ಲಿಂ ಯುವಕ ಈಗ ಮನೆಯನ್ನೂ ಕಳೆದುಕೊಂಡಿದ್ದಾನೆ. ಉಜ್ಜಿಯಿನಿಯಲ್ಲಿ ನಡೆಯುತ್ತಿದ್ದ ಹಿಂದೂ ಮೆರವಣಿಗೆಯ ಮೇಲೆ ಯುವಕ ಅದ್ನಾನ್ ಮನ್ಸೂರಿ ಉಗುಳಿದ್ದ.
ಆತನನ್ನು 151 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು, ಘಟನೆಯ ಬಳಿಕ ಅವರ ಮನೆಯನ್ನು ಅತಿಕ್ರಮಣ ಎಂದು ಉಲ್ಲೇಖಿಸಿ ಕೆಡವಲಾಗಿದ್ದು, ಕುಟುಂಬವು ಉಳಿದುಕೊಳ್ಳಲು ಬಾಡಿಗೆ ಮನೆಯನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಐದು ತಿಂಗಳ ಜೈಲು ವಾಸ ಅನುಭವಿಸಿರುವ ಯುವಕ ಜಾಮೀನಿನ ಮೇಲೆ ಹೊರಗಿದ್ದಾನೆ. ಆತನ ಸಹೋದರ ಸೇರಿದಂತೆ ಇತರೆ ಇಬ್ಬರು ಆರೋಪಿಗಳಿಗೆ ಈ ಮೊದಲೇ ಜಾಮೀನು ನೀಡಲಾಗಿತ್ತು.
ಜುಲೈ 17 ರಂದು ಅದ್ನಾನ್ ಹಾಗೂ ಅವರ ಇಬ್ಬರು ಸಹೋದರರು ತಾರಸಿ ಮೇಲಿದ್ದರು, ಭಗವಾನ್ ಮಹಾಕಾಲ್ ಅಂದರೆ ಶಿವ ಮೆರವಣಿಗೆಯು ಅವರ ಮನೆಯ ಮುಂದೆ ಸಾಗುತ್ತಿತ್ತು. ಆದರೆ ಮೂವರು ಮೆರವಣಿಗೆಯ ಮೇಲೆ ಎಂಜಿಲು ಉಗುಳಿದ್ದರು. ಬಳಿಕ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.
ಮತ್ತಷ್ಟು ಓದಿ: ಸಹಸ್ರಾರು ಜನರ ಮಧ್ಯೆ ಹಿಂದೂ ಮಹಾಗಣಪತಿ ಶೋಭಾ ಯಾತ್ರೆ: ಡಿಜೆ ಸೌಂಡಿಗೆ ಮೈಮರೆತು ಹೆಜ್ಜೆ ಹಾಕಿದ ಯುವಸಮೂಹ
ಇದೀಗ ಅವರ ಮನೆಯನ್ನು ಕೆಡವಲಾಗಿದೆ, ಸ್ಥಳೀಯ ಆಡಳಿತ ಅತಿಕ್ರಮಣ ಮಾಡಿದೆ ಎಂದು ಹೇಳಿದೆ. ಬುಲ್ಡೋಜರ್ ತೆರಳಿ ಮನೆಯನ್ನು ಕೆಡವಿತ್ತು, ಬಳಿಕ ಧ್ವನಿ ವರ್ಧಕಗಳು ಮೊಳಗಿದವು, ಡೋಲುಗಳನ್ನು ಬಾರಿಸಲಾಯಿತು, ಈ ಕುರಿತು ಬಿಜೆಪಿ ವಕ್ತಾರ ಆಶಿಶ್ ಅಗರ್ವಾಲ್ ಮಾತನಾಡಿ, ಶಿವನನ್ನು ಅವಮಾನಿಸುವವರು ಶಿವತಾಂಡವವನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.
ಸೋಮವಾರ, ಇಂದೋರ್‌ನ ಮಧ್ಯಪ್ರದೇಶ ಹೈಕೋರ್ಟ್‌ನ ಏಕಸದಸ್ಯ ಪೀಠವು ಅದ್ನಾನ್‌ಗೆ ಜಾಮೀನು ನೀಡಿತು.
ಅದ್ನಾನ್ ತಂದೆ ಮಾತನಾಡಿ, ಮಕ್ಕಳು ಹಿಂದಿರುಗಿರುವುದಕ್ಕೆ ಸಂತೋಷವಿದೆ, ನನಗೆ ಯಾರಿಂದಲೂ ಏನೂ ಬೇಡ, ಮಕ್ಕಳನ್ನು ದೋಷಮುಕ್ತಗೊಳಿಸಬೇಕು, ಏನಾಗಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಲುವುದಿಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ