ಸಹಸ್ರಾರು ಜನರ ಮಧ್ಯೆ ಹಿಂದೂ ಮಹಾಗಣಪತಿ ಶೋಭಾ ಯಾತ್ರೆ: ಡಿಜೆ ಸೌಂಡಿಗೆ ಮೈಮರೆತು ಹೆಜ್ಜೆ ಹಾಕಿದ ಯುವಸಮೂಹ

ಚಿತ್ರದುರ್ಗ ನಗರ ಇವತ್ತು ಭರ್ತಿ ಜನರಿಂದಲೇ ತುಂಬಿ ತುಳುಕಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ‌ ನಡೆಯುವ ದುರ್ಗದ ಗಣೇಶೋತ್ಸವದ ಕಳೆದ ಒಂದೂವರೆ ದಶಕದಿಂದ ನಾಡಿನ ಗಮನ ಸೆಳೆದಿದೆ. ಈ ಸಲವೂ ಹಿಂದೂ ಮಹಾಗಣಪತಿಯ ಅದ್ದೂರಿ ಉತ್ಸವ ನಡೆಯಿತು. ಡಿಜೆ ಸೌಂಡಿಗೆ ಯುವ ಸಮೂಹ ಭರ್ತಿ ಸ್ಟೆಪ್ಸ್ ಹಾಕಿ ಏಂಜಾಯ್ ಮಾಡಿದ್ದಾರೆ.

Follow us
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 08, 2023 | 9:02 PM

ಚಿತ್ರದುರ್ಗ, ಅಕ್ಟೋಬರ್​ 08: ಕೋಟೆನಾಡು ಚಿತ್ರದುರ್ಗ ನಗರ ಇವತ್ತು ಭರ್ತಿ ಜನರಿಂದಲೇ ತುಂಬಿ ತುಳುಕುತ್ತಿತ್ತು. ಡಿಜೆ ಸೌಂಡಿಗೆ ಯುವ ಸಮೂಹ ಭರ್ತಿ ಸ್ಟೆಪ್ಸ್ ಹಾಕಿ ಏಂಜಾಯ್ ಮಾಡುತ್ತಿತ್ತು. ಹಿಂದೂ ಮಹಾಗಣಪತಿ (Hindu Mahaganapati) ಮಾತ್ರ ಭವ್ಯ ಮೆರವಣಿಗೆಯಲ್ಲಿ ಶಾಂತವಾಗಿ ಸಾಗಿತು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ‌ ನಡೆಯುವ ದುರ್ಗದ ಗಣೇಶೋತ್ಸವದ ಕಳೆದ ಒಂದೂವರೆ ದಶಕದಿಂದ ನಾಡಿನ ಗಮನ ಸೆಳೆದಿದೆ. ಈ ಸಲವೂ ಹಿಂದೂ ಮಹಾಗಣಪತಿಯ ಅದ್ದೂರಿ ಉತ್ಸವ ನಡೆಯಿತು. ಚಳ್ಳಕೆರೆ ಗೇಟ್ ಬಳಿಯ ಜೈನಧಾಮದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಕನೇರಿಮಠದ ಕಾಡಸಿದ್ದೇಶ್ವರ ಶ್ರೀ ಚಾಲನೆ ನೀಡಿದರು.

ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಶ್ರೀ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಕೆ.ಸಿ.ವಿರೇಂದ್ರ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಕನೇರಿಮಠದ ಕಾಡಸಿದ್ದೇಶ್ವರ ಶ್ರೀ ಸನಾತನ ಧರ್ಮದ ನಾಶದ ಬಗ್ಗೆ ಶ್ವಾನವೊಂದು ಬೊಗಳಿದೆ ಎಂದು ತಮಿಳುನಾಡು ಸಚಿವ ದಯಾನಿಧಿ ಸ್ಟಾಲಿನ್ ಬಗ್ಗೆ ಕಿಡಿ ಕಾರಿದರು. ಅಲ್ಲದೆ ದಯಾನಿಧಿ ಸ್ಟಾಲಿನ್ ಅಜ್ಜ ಪೆರಿಯಾರ್ ರಾಮಸ್ಚಾಮಿ ಓರ್ವ ನಾಲಾಯಕ್ ಪಾದ್ರಿ. ಕ್ರಿಶ್ಚಿಯನ್ ಮಷಿನರಿಗಳ ಏಜೆಂಟಾಗಿದ್ದ ಪೆರಿಯಾರ್ ಹಿಂದೂ ಧರ್ಮ ತೀರಿಸುತ್ತೇವೆಂದು ಬಂದಿದ್ದ ಅದ್ಯಾವುದು ಆಗಲಿಲ್ಲ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಭೀಕರ ಬರಗಾಲ: ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಸೈಲೆಂಟ್ ಆದ ಸರ್ಕಾರ, ಆಕ್ರೋಶಗೊಂಡ ರೈತರು

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ 1 ಲಕ್ಷ 51 ಸಾವಿರ ರೂ. ನೀಡಿ ಹಿಂದೂ ಮಹಾಗಣಪತಿಯ ಮುಕ್ತಿಬಾವುಟ ಪಡೆದರು. ಹೂವು, ಹಣ್ಣು ಇತರೆ ವಸ್ತುಗಳನ್ನು ಕೆಲವರು ಹರಾಜಿನಲ್ಲಿ‌ ಪಡೆದರು. ಬಳಿಕ ಜೈನಧಾಮದಿಂದ ಚಂದ್ರವಳ್ಳಿ ಕೆರೆವರೆಗೆ ಸುಮಾರೂ ಮೂರುವರೆ ಕಿ.ಮೀ ಬೃಹತ್ ಮೆರವಣಿಗೆ ನಡೆಯಿತು. ಅದ್ಧೂರಿ ಮೆರವಣಿಗೆಯಲ್ಲಿ ಶಾಸಕ ಕೆ.ಸಿ.ವಿರೇಂದ್ರ ಇದ್ದ ಡಿಜೆ ಬಳಿಯೇ ಕೆಲವರು ನಾಥೂರಾಮ್ ಗೋಡ್ಸೆ ಭಾವಚಿತ್ರ ಪ್ರದರ್ಶಿಸಿದರು.

ಇದನ್ನೂ ಓದಿ: ಚಿತ್ರದುರ್ಗದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆಲಿಪ್ಯಾಡ್ ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸತ್ಕರಿಸುವ ಕಾತುರ

ವೀರ ಸಾವರ್ಕರ್, ಶರತ್ ಮಡಿವಾಳ್ ಭಾವ ಚಿತ್ರಗಳನ್ನೂ ಪ್ರದರ್ಶಿಸಿದರು. ಡಿಜೆ ಸದ್ದಿಗೆ ಕುಣಿಯುವ ಯುವಸಮೂಹವನ್ನು ಮುಂದೆ ಸಾಗಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ದೂರದ ಊರುಗಳಿಂದ ಬಂದಿದ್ದ ಜನರೂ ಹಿಂದೂ ಗಣಪತಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಏಂಜಾಯ್ ಮಾಡಿದರು.

ಕೋಟೆನಾಡು‌ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿಯ ಅದ್ಧೂರಿ ಮೆರವಣಿಗೆ ನಡೆದಿದೆ. ಸುಮಾರು 3 ಲಕ್ಷಕ್ಕೂ ಅಧಿಕ ಜನ ಶೋಭಾಯತ್ರೆಯಲ್ಲಿ ಪಾಲ್ಗೊಂಡು ಏಂಜಾಯ್ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರು ಸಹ ಯಾತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷ. ಸದ್ಯ ಹಿಂದೂ ಮಹಾಗಣಪತಿ‌ ಉತ್ಸವ ಪೊಲೀಸರ ಬಿಗಿ ಬಂದೋಬಸ್ತ್​ನಲ್ಲಿ ಬಹುತೇಕ ಶಾಂತಿಯುತವಾಗಿ ಜರುಗಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.