ಸಂಕ್ರಾಂತಿ ಕೋಳಿ ಪಂದ್ಯಾಟದಲ್ಲಿ ಬುಲೆಟ್ ಗೆದ್ದುಬೀಗಿದ ಖಮ್ಮಂ ಯುವಕ
ತೆಲುಗಿನವರಿಗೆ ಸಂಕ್ರಾಂತಿ ಎಂದರೆ ದೊಡ್ಡ ಹಬ್ಬ..ಆದರೆ ಈ ಹಬ್ಬ ಮೊದಲು ನೆನಪಿಗೆ ಬರುವುದು ಹುಂಜಗಳ ಕಾಳಗದಿಂದ.. ತೆಲಂಗಾಣದಲ್ಲಿ ಇವುಗಳಿಗೆ ಅನುಮತಿ ಇಲ್ಲ. ಹಾಗಾಗಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರದ ಖಮ್ಮಂ ಜಿಲ್ಲೆ ಕೋಳಿ ಪಂದ್ಯಾಟಕ್ಕೆ ಭರ್ಜರಿ ವೇದಿಕೆಯಾಗಿತ್ತು.
ಖಮ್ಮಂ ಜಿಲ್ಲೆ, ಜನವರಿ 18: ತೆಲುಗಿನವರಿಗೆ ಸಂಕ್ರಾಂತಿ ಎಂದರೆ ದೊಡ್ಡ ಹಬ್ಬ..ಆದರೆ ಈ ಹಬ್ಬ ಮೊದಲು ನೆನಪಿಗೆ ಬರುವುದು ಹುಂಜಗಳ ಕಾಳಗದಿಂದ.. ಮೂರು ದಿನ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ.. ತೆಲಂಗಾಣದಲ್ಲಿ ಇವುಗಳಿಗೆ ಅನುಮತಿ ಇಲ್ಲ. ಹಾಗಾಗಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರದ ಖಮ್ಮಂ ಜಿಲ್ಲೆ ಕೋಳಿ ಪಂದ್ಯಾಟಕ್ಕೆ ಭರ್ಜರಿ ವೇದಿಕೆಯಾಗಿತ್ತು. ಕೋಳಿ ಪಂದ್ಯಾಟದಲ್ಲಿ ಯುವಕನೊಬ್ಬ ಬುಲೆಟ್ ವಾಹನವನ್ನು ಬಹುಮಾನವಾಗಿ ಗೆದ್ದುಬೀಗಿದ್ದಾರೆ.
ಮೂರು ದಿನಗಳ ಕಾಲ ನಡೆದ ಕಾಕ್ ಫೈಟಿಂಗ್ ಅನ್ನು ಸಾವಿರಾರು ಜನರು ವೀಕ್ಷಿಸಿದರು. ಕೊನೆಯ ದಿನದ ಓಟದಲ್ಲಿ ಖಮ್ಮಂ ಜಿಲ್ಲೆಯ ತಲ್ಲಡ ಮಂಡಲದ ನಾರಾಯಣಪುರಂ ಗ್ರಾಮದ ರಾಹುಲ್ ರೆಡ್ಡಿ ಮತ್ತು ಪಂಡೆಂಕೋಡಿಯ ಕಂದ ಕೃಷ್ಣಾ ರೆಡ್ಡಿ ಗೆಲುವು ಸಾಧಿಸಿದರು. ಬಾಜಿಯಲ್ಲಿ ಆರು ಲಕ್ಷ ರೂಪಾಯಿ ಮೌಲ್ಯದ ಬುಲೆಟ್ ವಾಹನವನ್ನು ಬಹುಮಾನವಾಗಿ ಘೋಷಿಸಲಾಗಿತ್ತು.
ಬಾಜಿ ಗೆದ್ದ ಕೋಳಿ ಸುಮಾರು 15 ಬಾಜಿಗಳಲ್ಲಿ ಬಹುಮಾನ ಗಳಿಸಿದೆ ಎಂದು ರಾಹುಲ್ ರೆಡ್ಡಿ ಮತ್ತು ಕಂದಾ ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ. ಈ ಬಾರಿ ಕೋಳಿ ಪಂದ್ಯಾಟದಲ್ಲಿ ಬುಲೆಟ್ ಬಹುಮಾನ ಗೆದ್ದಿರುವುದು ಸಂತಸ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
Also Read: ಡಾ. ಅಂಬೇಡ್ಕರ್ಗೆ ಅಪರೂಪದ ಗೌರವ, ಸಿಎಂ ವೈಎಸ್ ಜಗನ್ರಿಂದ 125 ಅಡಿ ಪ್ರತಿಮೆ ಅನಾವರಣ
ಸಮಿತಿಯ ಸಂಘಟಕರಾದ ಚುಂಚು ರವಿಶಂಕರ್ ಪ್ರಸಾದ್ ಅವರು ವಿಜೇತ ಬುಲೆಟ್ ಅನ್ನು ಕೃಷ್ಣಾ ರೆಡ್ಡಿ ಅವರಿಗೆ ಹಸ್ತಾಂತರಿಸಿದರು. ಬುಲೆಟ್ ಬಹುಮಾನ ಪಡೆದ ರಾಹುಲ್ ರೆಡ್ಡಿ ಮತ್ತು ಕೃಷ್ಣಾ ರೆಡ್ಡಿ ಸ್ನೇಹಿತರು ಅವರನ್ನು ಅಭಿನಂದಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ