Love Jihad in Bengaluru: ಬೆಂಗಳೂರಿನಲ್ಲಿ ಲವ್ ಜಿಹಾದ್​​ಗೆ ಬಲಿಯಾದ ಮಧ್ಯಪ್ರದೇಶದ ಯುವತಿ

|

Updated on: Jun 23, 2023 | 6:24 PM

ಮಧ್ಯಪ್ರದೇಶದ ದಮೋಹ್ ಪೊಲೀಸರು ಈ ಬಗ್ಗೆ ಬೆಂಗಳೂರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 19 ವರ್ಷದ ಹಿಂದೂ ಯುವತಿಯನ್ನು ಮದುವೆಯಾಗುವಂತೆ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಾಗುವಂತೆ ಒತ್ತಾಯಿಸಿದ್ದಾನೆ ಎಂಬ ಆರೋಪಕ್ಕೆ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.

Love Jihad in Bengaluru: ಬೆಂಗಳೂರಿನಲ್ಲಿ ಲವ್ ಜಿಹಾದ್​​ಗೆ ಬಲಿಯಾದ ಮಧ್ಯಪ್ರದೇಶದ ಯುವತಿ
ಸಾಂದರ್ಭಿಕ ಚಿತ್ರ
Follow us on

ದಮೋಹ್: ರಾಜ್ಯದಲ್ಲಿ ದಿನೇ ದಿನೇ ಲವ್​​ಜಿಹಾದ್ (Love Jihad)​​ ಪ್ರಕರಣಗಳು ಹೆಚ್ಚಾಗುತ್ತಿದೆ ಮತ್ತು ಅನೇಕ ಇಂತಹ ಪ್ರಕರಣಗಳು ಬಯಲಾಗುತ್ತಿದೆ. ಇದೀಗ ಲವ್ ಜಿಹಾದ್‌ನ ಮತ್ತೊಂದು ಶಂಕಿತ ಪ್ರಕರಣ ಪತ್ತೆಯಾಗಿದೆ. ಮಧ್ಯಪ್ರದೇಶದ ದಮೋಹ್ ಪೊಲೀಸರು ಈ ಬಗ್ಗೆ ಬೆಂಗಳೂರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 19 ವರ್ಷದ ಹಿಂದೂ ಯುವತಿಯನ್ನು ಮದುವೆಯಾಗುವಂತೆ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಾಗುವಂತೆ ಒತ್ತಾಯಿಸಿದ್ದಾನೆ ಎಂಬ ಆರೋಪಕ್ಕೆ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಯುವತಿ ಹೇಳುವಂತೆ ತಾನು ಪ್ರೀತಿಸಿದ ಹುಡುಗನನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾಳೆ. ಮೊದಲು ಪ್ರೀತಿ ಮಾಡುವಾಗ ನಾನು ಹಿಂದೂ ಎಂದು ಗರುತಿಸಿಕೊಂಡೊದ್ದ ಎಂದು ಹೇಳಿದ್ದಾಳೆ.

ದಾಮೋಹ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನ ಪ್ರಕಾರ, ಅಸ್ಸಾಂ ಮೂಲದ ಆರೋಪಿ ತನ್ನನ್ನು ರಾಜು ಎಂದು ಪರಿಚಯಿಸಿಕೊಂಡಿದ್ದಾನೆ. ಇಬ್ಬರೂ ಸಹ ಕೆಲವು ದಿನಗಳ ಕಾಲ ಪ್ರೀತಿಸುತ್ತಿದ್ದರು, ಈ ಸಮಯಲ್ಲಿ ಒಂದು ದಾಖಲೆಯಲ್ಲಿ ತನ್ನ ಧರ್ಮದ ಬಗ್ಗೆ ತಿಳಿಸಿದ್ದಾನೆ ಆಗಾ ಆಕೆಗೆ ಆತನ ನಿಜವಾದ ಧರ್ಮದ ಬಗ್ಗೆ ಬಹಿರಂಗಪಡಿಸಿದ್ದಾನೆ, ಆಗ ಹುಡುಗಿಗೆ ಆತನ ನಿಜವಾದ ಧರ್ಮ ಯಾವುದು ಎಂದು ತಿಳಿದಿದೆ.

ಇದನ್ನೂ ಓದಿ: Love jihad: ನರ್ಸಿಂಗ್​ ಓದಿಕೊಂಡು ಕೆಲಸ ಮಾಡ್ತಾ ಮನೆಗೆ ಆಧಾರವಾಗಿದ್ದಳು! ಯಾವ ಮಾಯೆಯಲ್ಲಿ ಲವ್ ಜಿಹಾದ್ ಗೆ ಬಲಿಯಾದಳು ಈ ಯುವತಿ?

ಈ ಬಗ್ಗೆ ಆಕೆ ನೀಡುವ ಹೇಳಿಕೆ ಪ್ರಕಾರ ನಾನು ಒಂದೂವರೆ ವರ್ಷಗಳ ಹಿಂದೆ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದೆ, ಅಲ್ಲಿ ನನಗೆ ರಾಜು ಎಂದು ಹಿಂದೂ ಧರ್ಮದ ಹೆಸರು ಇಟ್ಟುಕೊಂಡ ಮುಸ್ಲಿಂ ವ್ಯಕ್ತಿ ಪರಿಚಯವಾದ, ನಮ್ಮ ನಡುವೆ ಪ್ರೀತಿ ಬೆಳೆಯಿತು. ಇಬ್ಬರು ಮದುವೆಯಾಗುವುದಾಗಿ ನಿರ್ಧಾರಿಸಿದ್ದೇವು, ಆದರೆ ನನಗೆ ಹಿಂದೂ ಎಂದು ಸುಳ್ಳು ಹೇಳಿದ್ದಾನೆ. ಇದೀಗ ನನಗೆ ಅವನು ಮುಸ್ಲಿಂ ಎಂದು ತಿಳಿದಿದೆ ಎಂದು ಎಫ್‌ಐಆರ್ ದಾಖಲಿಸಿದ ನಂತರ ಹುಡುಗಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾಳೆ.

ರಾಜು ಎಂದು ಹೆಸರು ಬದಲಾಯಿಸಿಕೊಂಡಿರುವ ವ್ಯಕ್ತಿಯ ನಿಜವಾದ ಹೆಸರು ಉಮರ್ ಫರೋಕ್, ಈತ ಕಳೆದ ಆರು ತಿಂಗಳಿನಿಂದ ತನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆತ ನನ್ನನ್ನು ಮಧ್ಯಪ್ರದೇಶದಲ್ಲಿರುವ ನನ್ನ ಕುಟುಂಬದ ಸದಸ್ಯರ ಬಳಿಗೆ ಹೋಗಲು ಬಿಡುತ್ತಿಲ್ಲ. ಅವನು ನನ್ನನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮತ್ತು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಹುಡುಗಿ ಹೇಳಿದ್ದಾಳೆ.

ಹುಡುಗಿ ದಮೋಹ್ ಮೂಲದರಾಗಿದ್ದು. ಸರ್ಕಾರಿ ಯೋಜನೆಯಡಿ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದಾಳೆ. ಅಲ್ಲಿ ಅವಳು ರಾಜು ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದಾಳೆ. ನಂತರ ಇಬ್ಬರ ನಡುವೆ ಲವ್​​ ಆಗಿದೆ. ಆದರೆ ಅಷ್ಟೊತ್ತಿಗೆ ಆಕೆಗೆ ಅವನ ಬಗ್ಗೆ ಸತ್ಯ ತಿಳಿದಿದೆ, ಈ ವಿಚಾರ ಆತನಿಗೆ ಗೊತ್ತಾಗಿ, ಅವಳಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದ ಎಂದು ದಾಮೋಹ್ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಸುಷ್ಮಾ ಶ್ರೀವಾಸ್ತವ ಹೇಳಿದ್ದಾರೆ. ಇನ್ನೂ ಬೆಂಗಳೂರಿನಲ್ಲೇ ಇದ್ದಾನೆ ಎನ್ನಲಾದ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376, 420, 417, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Fri, 23 June 23