ಮದುವೆಗೆ ಒಪ್ಪದ ಹಿರಿಯರು: ಆತ್ಮಹತ್ಯೆಗೆ ಶರಣಾದ ಜೋಡಿ ಹಕ್ಕಿ
ಮದುವೆಗೆ ಹಿರಿಯರು ಒಪ್ಪದೆ ಇರುವುದನ್ನೇ ಕಾರಣವಾಗಿಸಿಕೊಂಡು ಪ್ರೇಮಿಗಳಿಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ನವೀನ ಹಾಗೂ ಆತನ ಪ್ರೇಯಸಿ.
ಹೈದರಾಬಾದ್: ಮದುವೆಗೆ ಹಿರಿಯರು ಒಪ್ಪದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಮುನಗಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆಗೆ ಶರಣಾದ ಜೋಡಿಹಕ್ಕಿಗಳು ಸಮೀವಮ ಚಿವ್ವೆಂಲ ಮಂಡಲದ ಚಂದುಪಟ್ಲಕ್ಕೆ ಸೇರಿದ ನವೀನ ಹಾಗೂ ಆತನ ಪ್ರೇಯಸಿ ಎಂದು ಗುರುತಿಸಲಾಗಿದೆ. ಮದುವೆಗೆ ಕುಟುಂಬದವರು ಒಪ್ಪದೆ ಇರುವುದನ್ನೇ ಕಾರಣವಾಗಿಟ್ಟುಕೊಂಡು ಮುನಗಾಲ ಮಂಡಲಂ ಮುದ್ದುಲ ಕೆರೆ ಬಳಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಮೂಲಕ ಸಾವಿನಲ್ಲಿ ಒಂದಾಗಿದ್ದಾರೆ.
ಮದುವೆಗೆ ಮನೆಯವರ ವಿರೋಧ: ಸೆಲ್ಪಿ ವಿಡಿಯೋ ಮಾಡಿ ಬಾವಿಗೆ ಹಾರಿದ ಪ್ರೇಮಿಗಳು