ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್​ ಮನೋಜ್ ಪಾಂಡೆ ನೇಮಕ

TV9 Digital Desk

| Edited By: Lakshmi Hegde

Updated on:Apr 18, 2022 | 6:44 PM

ನ್ಯಾಶನಲ್ ಡಿಫೆನ್ಸ್​ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ ಇವರು 1982ರ ಡಿಸೆಂಬರ್​​ನಲ್ಲಿ ಕಾರ್ಪ್ಸ್​ ಆಫ್​ ಇಂಜಿನಿಯರ್ಸ್​ಗೆ ಸೇರ್ಪಡೆಗೊಂಡರು. ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಇರುವ ಪಲ್ಲಾನ್​ವಾಲಾ ವಲಯದಲ್ಲಿ ಆಪರೇಶನ್​ ಪರಾಕ್ರಮ ನಡೆಸುವಾಗ ಇವರು ಇಂಜಿನಿಯರ್ ರೆಜಿಮೆಂಟ್​ನ್ನು ಮುನ್ನಡೆಸಿದ್ದರು.

ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್​ ಮನೋಜ್ ಪಾಂಡೆ ನೇಮಕ
ಲೆಫ್ಟಿನೆಂಟ್ ಜನರಲ್​ ಮನೋಜ್ ಪಾಂಡೆ

Follow us on

ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್​ ಜನರಲ್ ಮನೋಜ್ ಪಾಂಡೆ ನೇಮಕಗೊಂಡಿದ್ದಾರೆ. ಈಗಿರುವ ಜನರಲ್​ ಮನೋಜ್​ ಮುಕುಂದ್ ನರವಾನೆಯವರ 28 ತಿಂಗಳ ಅಧಿಕಾರ ಅವಧಿ ಏಪ್ರಿಲ್ 30ಕ್ಕೆ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಮನೋಜ್ ಪಾಂಡೆಯವರನ್ನ ನೇಮಕಮಾಡಲಾಗಿದೆ. ಇವರು ಭಾರತೀಯ ಸೇನೆಯ 29ನೇ ಮುಖ್ಯಸ್ಥರಾಗಿದ್ದಾರೆ. ಇದೀಗ ಮನೋಜನ್​ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದನ್ನು ಭಾರತೀಯ ರಕ್ಷಣಾ ಇಲಾಖೆ ಘೋಷಣೆ ಮಾಡಿದೆ. ಅಂದಹಾಗೇ, ಮನೋಜ್​ ಪಾಂಡೆಯವರು ಕಾರ್ಪ್​ ಆಫ್​ ಇಂಜಿನಿಯರ್​ ವಿಭಾಗದಿಂದ ಸೇನಾ ಮುಖ್ಯಸ್ಥರಾದ ಮೊದಲ ಅಧಿಕಾರಿ.

ನ್ಯಾಶನಲ್ ಡಿಫೆನ್ಸ್​ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದ ಇವರು 1982ರ ಡಿಸೆಂಬರ್​​ನಲ್ಲಿ ಕಾರ್ಪ್ಸ್​ ಆಫ್​ ಇಂಜಿನಿಯರ್ಸ್​ಗೆ ಸೇರ್ಪಡೆಗೊಂಡರು. ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣಾ ರೇಖೆ ಬಳಿ ಇರುವ ಪಲ್ಲಾನ್​ವಾಲಾ ವಲಯದಲ್ಲಿ ಆಪರೇಶನ್​ ಪರಾಕ್ರಮ ನಡೆಸುವಾಗ ಇವರು ಇಂಜಿನಿಯರ್ ರೆಜಿಮೆಂಟ್​ನ್ನು ಮುನ್ನಡೆಸಿದ್ದರು. ಆಪರೇಶನ್​ ಪರಾಕ್ರಮ ಎಂಬುದು 2002ರ ಹೊತ್ತಿಗೆ ನಡೆದ ಒಂದು ಕಾರ್ಯಾಚರಣೆ.  2001ರಲ್ಲಿ ಭಾರತದ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸೃಷ್ಟಿಯಾಗುವ ಸನ್ನಿವೇಶವನ್ನು ತಂದಿತ್ತು. ಆ ವೇಳೆ ಪಶ್ಚಿಮದ ಗಡಿಗೆ ಭಾರತೀಯ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಾಗಿಸಿತ್ತು. ಹಾಗೇ, ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನೂ ಅಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಕಾರ್ಪ್ಸ್​ ಆಫ್​ ಇಂಜಿನಿಯರ್​​ ರೆಜಿಮೆಂಟ್​ನ್ನು ಮನೋಜ್ ಪಾಂಡೆ ಮುನ್ನಡೆಸಿದ್ದರು.

ಮನೋಜ್​ ಪಾಂಡೆ ತಮ್ಮ 39 ವರ್ಷಗಳ ಸೇನಾ ವೃತ್ತಿಯಲ್ಲಿ ಪಶ್ಚಿಮದ ಗಡಿಯ ಇಂಜಿನಿಯರ್​ ಬ್ರಿಗೇಡ್​, ಎಲ್​ಒಸಿ ಬಳಿ ಪದಾತಿ ದಳ, ಲಡಾಖ್​ ವಲಯದಲ್ಲಿ ಪರ್ವತ ವಿಭಾಗದ ದಳ ಮತ್ತು ಈಶಾನ್ಯದ ಗಡಿಯಲ್ಲೂ ಒಂದು ಕಾರ್ಪ್ಸ್​​ನ್ನು ಮುನ್ನಡೆಸಿದ್ದಾರೆ.  ಪೂರ್ವ ಕಮಾಂಡ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿದ್ದರು.

ಇದನ್ನೂ ಓದಿ: ಭಾರತ ಇಸ್ಲಾಮಿಕ್ ದೇಶವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಯತಿ ನರಸಿಂಹಾನಂದ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada