ಭಾರತ ಇಸ್ಲಾಮಿಕ್ ದೇಶವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಯತಿ ನರಸಿಂಹಾನಂದ

ಉತ್ತರ ಪ್ರದೇಶದಲ್ಲಿ ಹಿಂದುತ್ವದ ನಾಯಕಿ ಸಾಧ್ವಿ ರಿತಂಬರ ಅವರು ಪ್ರತಿ ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಹುಟ್ಟಿಸಬೇಕು ಮತ್ತು ಅವರಲ್ಲಿ ಇಬ್ಬರನ್ನು ರಾಷ್ಟ್ರಕ್ಕೆ ಅರ್ಪಿಸುವಂತೆ ಒತ್ತಾಯಿಸಿದ್ದಾರೆ.

ಭಾರತ ಇಸ್ಲಾಮಿಕ್ ದೇಶವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಯತಿ ನರಸಿಂಹಾನಂದ
ಯತಿ ನರಸಿಂಹಾನಂದ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 18, 2022 | 7:22 PM

ದೆಹಲಿ: ಹರಿದ್ವಾರ ದ್ವೇಷ ಭಾಷಣ (Haridwar hate speech) ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ದಾಸ್ನಾ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ (Yati Narsinghanand) ಅವರು ಭಾರತ ಇಸ್ಲಾಮಿಕ್ ದೇಶವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಹೇಳಿದ್ದಾರೆ. ಅದೇ ವೇಳೆ ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶ (Himachal Pradesh) ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಅವರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳಿಗೆ ಜನ್ಮ ನೀಡುವ ಮೂಲಕ ಮುಸ್ಲಿಮರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ತಿಂಗಳ ಆರಂಭದಲ್ಲಿ ಮಥುರಾದಲ್ಲಿ ಭಾಷಣ ಮಾಡಿದ ನರಸಿಂಹಾನಂದ, ಮುಂದಿನ ದಶಕಗಳಲ್ಲಿ ದೇಶದಲ್ಲಿ “ಹಿಂದೂಗಳು ಕಡಿಮೆ” ಆಗುವುದನ್ನು ತಡೆಯಲು ಹೆಚ್ಚಿನ ಮಕ್ಕಳನ್ನು ಹೆರಬೇಕು ಎಂದು ಹಿಂದೂಗಳಿಗೆ ಹೇಳಿದ್ದರು. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮುಬಾರಕ್‌ಪುರದಲ್ಲಿ ನಡೆಯುತ್ತಿರುವ ಸಂಘಟನೆಯ ಮೂರು ದಿನಗಳ ‘ಧರಮ್ ಸಂಸದ್’ ಮೊದಲ ದಿನದಂದು ನರಸಿಂಹಾನಂದ ಮತ್ತು ಸರಸ್ವತಿ ಈ ಹೇಳಿಕೆ ನೀಡಿದ್ದಾರೆ ಎಂದು ಪಿಟಿಐ ವರದಿಯಲ್ಲಿ ಹೇಳಿದೆ. ಉತ್ತರ ಪ್ರದೇಶದಲ್ಲಿ ಹಿಂದುತ್ವದ ನಾಯಕಿ ಸಾಧ್ವಿ ರಿತಂಬರ ಅವರು ಪ್ರತಿ ಹಿಂದೂ ದಂಪತಿ ನಾಲ್ಕು ಮಕ್ಕಳನ್ನು ಹುಟ್ಟಿಸಬೇಕು ಮತ್ತು ಅವರಲ್ಲಿ ಇಬ್ಬರನ್ನು ರಾಷ್ಟ್ರಕ್ಕೆ ಅರ್ಪಿಸುವಂತೆ ಒತ್ತಾಯಿಸಿದ್ದಾರೆ. ಭಾರತವು ಶೀಘ್ರದಲ್ಲೇ “ಹಿಂದೂ ರಾಷ್ಟ್ರ” ಆಗಲಿದೆ ಎಂದು ರಿತಂಬರ ಹೇಳಿದ್ದಾರೆ. ದೆಹಲಿಯ ಜಹಾಂಗೀರ್​​ಪುರಿಯಲ್ಲಿ ಶನಿವಾರ ನಡೆದ ಕೋಮು ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಹನುಮ ಜಯಂತಿ ಶೋಭಾ ಯಾತ್ರೆ (ಮೆರವಣಿಗೆ) ಮೇಲೆ “ದಾಳಿ” ಮಾಡಿದವರು ದೇಶವು ಸಾಧಿಸಿದ ಪ್ರಗತಿಯ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದು ಹೇಳಿದರು.

“ರಾಜಕೀಯ ಭಯೋತ್ಪಾದನೆಯ ಮೂಲಕ ಹಿಂದೂ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವವರನ್ನು ಧೂಳೀಪಟ ಮಾಡಲಾಗುವುದು” ಎಂದು ಅವರು ಹೇಳಿದ್ದಾರೆ.

ಭಾನುವಾರ ನಿರಾಲಾ ನಗರದಲ್ಲಿ ರಾಮ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಮಹಿಳೆಯರು “ಹಮ್ ದೋ, ಹಮಾರೆ ದೋ” (ನಾವಿಬ್ಬರು ನಮಗಿಬ್ಬರು) ತತ್ವವನ್ನು ಅನುಸರಿಸುತ್ತಾರೆ ಎಂದಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನರಸಿಂಹಾನಂದ, ಅನ್ನಪೂರ್ಣ ಭಾರತಿ ಮತ್ತು ದೇಶಾದ್ಯಂತದ ಹಲವಾರು ಸನ್ಯಾಸಿಗಳು ಮತ್ತು ಪುರೋಹಿತರು ಭಾಗವಹಿಸುತ್ತಿರುವ ಹಿಮಾಚಲ ಪ್ರದೇಶದ ಸಭೆಯನ್ನು ಗಮನದಲ್ಲಿಟ್ಟುಕೊಂಡು  ರಾಜ್ಯ ಪೊಲೀಸರು ಸರಸ್ವತಿ ಅವರಿಗೆ ನೋಟಿಸ್‌ನಲ್ಲಿ ಯಾವುದೇ ಧರ್ಮ ಅಥವಾ ಜಾತಿ ವಿರುದ್ಧ ಯಾವುದೇ ಪ್ರಚೋದನಕಾರಿ ಭಾಷೆಯನ್ನು ಬಳಸಬಾರದು ಎಂದು ಸೂಚಿಸಿದ್ದಾರೆ.

ಪೊಲೀಸ್ ಕಾಯಿದೆ 2007 ರ ಸೆಕ್ಷನ್ 64 ರ ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದ ಉನಾ ಜಿಲ್ಲೆಯ ಆಂಬ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಂತಹ ಸೂಚನೆಗಳನ್ನು ಪಾಲಿಸದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮುಸ್ಲಿಮರು ಬಹುಸಂಖ್ಯಾತರಾದಾಗ ಭಾರತವನ್ನು ನೆರೆಯ ಪಾಕಿಸ್ತಾನದಂತೆ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲಾಗುವುದು ಎಂದು ಸರಸ್ವತಿ ಹೇಳಿದರು. “ಅದಕ್ಕಾಗಿಯೇ, ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡುವಂತೆ ನಮ್ಮ ಸಂಸ್ಥೆ ಹಿಂದೂಗಳನ್ನು ಕೇಳಿದೆ” ಎಂದು ಅವರು ಹೇಳಿದರು.

ಕಳೆದ ವರ್ಷ ಡಿಸೆಂಬರ್ 17-19 ರವರೆಗೆ ಹರಿದ್ವಾರದಲ್ಲಿ ಧರ್ಮ ಸಂಸದ್ ಆಯೋಜಿಸಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ನರಸಿಂಹಾನಂದರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಅವರು ಕಳೆದ ಭಾನುವಾರ ದೆಹಲಿಯ ಬುರಾರಿ ಮೈದಾನದಲ್ಲಿ ನಡೆದ ‘ಹಿಂದೂ ಮಹಾಪಂಚಾಯತ್’ನಲ್ಲಿ ಭಾಗವಹಿಸಿದ್ದರು. ಮುಸ್ಲಿಂ ಭಾರತದ ಪ್ರಧಾನಿಯಾದರೆ 20 ವರ್ಷಗಳಲ್ಲಿ “50 ಪ್ರತಿಶತದಷ್ಟು ಹಿಂದೂಗಳು ಮತಾಂತರಗೊಳ್ಳುತ್ತಾರೆ” ಎಂದು ಟೀಕಿಸಿದ್ದ ನರಸಿಂಹಾನಂದ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲು ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಕು ಎಂದಿದ್ದರು.

ಇದನ್ನೂ ಓದಿ: ಹಿಂದೂ-ಮುಸಲ್ಮಾನರ ಸಾಮರಸ್ಯಕ್ಕೆ ಪೆಟ್ಟು ಬಿದ್ದಿದೆ, ಮುಂದೇನು ಎಂಬುದು ಕಾಡತೊಡಗಿದೆ :ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

Published On - 6:21 pm, Mon, 18 April 22

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ