ದೆಹಲಿ: ಕೇಂದ್ರದ ಅಗ್ನಿಪಥ್ ಯೋಜನೆ(Agnipath Scheme) ವಿರೋಧಿಸಿ ಪ್ರತಿಭಟನೆ ಹಿನ್ನೆಲೆ ರಕ್ಷಣಾ ಸಚಿವ ರಾಜನಾಥ್ ಸಿಂಗ್(Rajnath Singh) ಜೊತೆ ಸಭೆ ಬಳಿಕ ದೆಹಲಿಯಲ್ಲಿ 3 ಸೇನಾಪಡೆಗಳ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅಗ್ನಿವೀರರಿಗೆ ರಕ್ಷಣಾ ಸಚಿವಾಲಯದ ನೇಮಕಾತಿಯಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗುವುದು. ಅಗ್ನಿಪಥ್ ಯೋಜನೆಯನ್ನು ಏಕಾಏಕಿ ಜಾರಿಗೊಳಿಸಿಲ್ಲ. 1989ರಿಂದಲೂ ಅಗ್ನಿಪಥ್ ಯೋಜನೆ ಜಾರಿ ಬಗ್ಗೆ ಚರ್ಚೆ ನಡೆದಿತ್ತು. ಯೋಜನೆ ಬಗ್ಗೆ ಹಲವು ದೇಶಗಳಲ್ಲಿ ಅಧ್ಯಯನ ನಡೆಸಿ ಜಾರಿ ಮಾಡಲಾಗಿದೆ. ಮೂರು ಸೇನಾಪಡೆಗಳಿಗೆ ಯುವಕರ ನೇಮಕಾತಿ ಅಗತ್ಯವಿದೆ ಎಂದು ದೆಹಲಿಯಲ್ಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ(Lt General Anil Puri) ತಿಳಿಸಿದ್ದಾರೆ.
ಅಗ್ನಿವೀರರಿಗೆ 1 ಕೋಟಿ ರೂ. ಜೀವ ವಿಮೆ
ನೇಮಕಾತಿ ವೇಳೆ ಹಳ್ಳಿಗಳಲ್ಲಿರುವ ಯುವಕರಿಗೆ ಶೇ.70ರಷ್ಟು ಆದ್ಯತೆ ನೀಡ್ತೇವೆ. ಅಗ್ನಿವೀರರಿಗೆ 1 ಕೋಟಿ ರೂ. ಜೀವ ವಿಮೆ ನೀಡಲಾಗುವುದು. ಭತ್ಯೆಯಲ್ಲೂ ಅಗ್ನಿವೀರರಿಗೆ ಯಾವುದೇ ತಾರತಮ್ಯ ಮಾಡಲ್ಲ. ಅಗ್ನಿವೀರರಿಗೆ ಹೆಚ್ಚಿನ ಭತ್ಯೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಆರಂಭದಲ್ಲಿ ಮಾತ್ರ 46 ಸಾವಿರ ರೂ. ಸಂಬಳ ನೀಡಲಾಗುವುದು. ಮುಂದಿನ ದಿನಗಳಲ್ಲಿ 1.25 ಲಕ್ಷದವರೆಗೂ ಸಂಬಳ ನೀಡ್ತೇವೆ. ಮೊದಲ ಬ್ಯಾಚ್‌ನ ಅಗ್ನಿವೀರರ ವಯೋಮಿತಿ 5 ವರ್ಷ ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿಗೋಷ್ಠಿ ನಡೆಸಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಅತ್ಯುತ್ತಮ ಯೋಜನೆಗಳಿಗೆ ರಾಜಕೀಯ ಬಣ್ಣ: ಅಗ್ನಿಪಥ್ ವಿರೋಧಕ್ಕೆ ಪ್ರಧಾನಿ ಮೋದಿ ಬೇಸರ
#WATCH | Ministry of Defence briefs the media on Agnipath recruitment scheme https://t.co/JRgzkQyuOn
— ANI (@ANI) June 19, 2022
ಭೂಸೇನೆಗೆ ಮೊದಲ ಬ್ಯಾಚ್‌ನಲ್ಲಿ 25,000 ಅಗ್ನಿವೀರರ ನೇಮಕ
ಇನ್ನು ಡಿಸೆಂಬರ್ ಆರಂಭದಲ್ಲಿ ಮೊದಲ ಬ್ಯಾಚ್‌ನ ಅಗ್ನಿವೀರರ ನೇಮಕ ಶುರುವಾಗಲಿದ್ದು ಭೂಸೇನೆಗೆ ಮೊದಲ ಬ್ಯಾಚ್‌ನಲ್ಲಿ 25,000 ಅಗ್ನಿವೀರರ ನೇಮಕ ಮಾಡಿಕೊಳ್ಳಲಾಗುತ್ತೆ. ಫೆಬ್ರವರಿ 2023ರೊಳಗೆ 2ನೇ ಬ್ಯಾಚ್‌ನ ಅಗ್ನಿವೀರರ ನೇಮಕಾತಿ ಆಗುತ್ತೆ. ಮೊದಲ, 2ನೇ ಬ್ಯಾಚ್‌ನಲ್ಲಿ ಒಟ್ಟು 40 ಸಾವಿರ ಅಗ್ನಿವೀರರ ನೇಮಕ ಮಾಡಿಕೊಳ್ಳುತ್ತೇವೆ ಎಂದು ದೆಹಲಿಯಲ್ಲಿ ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೂನ್ 24ರಂದು ಅಗ್ನಿವೀರರ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಲಿದೆ. ಜುಲೈ 24ರಂದು ಮೊದಲ ಹಂತದ ನೇಮಕಾತಿ ಪರೀಕ್ಷೆ ನಡೆಯುತ್ತೆ. ಡಿಸೆಂಬರ್ 30ರಂದು ಮೊದಲ ಬ್ಯಾಚ್‌ನ ಅಗ್ನಿವೀರರ ನೇಮಕಾತಿ ನಡೆಯುತ್ತೆ ಎಂದು ಏರ್ ಮಾರ್ಷಲ್ ಎಸ್.ಕೆ.ಝಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು ಮತ್ತೊಂದು ಕಡೆ ನವೆಂಬರ್ 21ರಿಂದ ನೌಕಾಪಡೆಗೆ ಅಗ್ನಿವೀರರ ನೇಮಕಾತಿ ಆರಂಭ ಆಗುತ್ತೆ. ನೌಕಾಪಡೆಯ ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ಒಡಿಶಾದ ಐಎನ್‌ಎಸ್ ಚಿಲ್ಕಾದಲ್ಲಿ ತರಬೇತಿ ನೀಡುತ್ತೇವೆ. ಅಗ್ನಿವೀರರ ನೇಮಕಾತಿಗೆ ಯುವತಿಯರೂ ಅರ್ಜಿ ಸಲ್ಲಿಸಬಹುದು ಎಂದು ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಹೇಳಿದ್ರು. ಹಿಂಸಾತ್ಮಕ ಪ್ರತಿಭಟನೆಯನ್ನು ಕೂಡಲೇ ನಿಲ್ಲಿಸುವಂತೆ ಸೇನಾ ಮುಖ್ಯಸ್ಥರು ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಭಾರತೀಯ ಸೇನಾಪಡೆಗಳಲ್ಲಿ ಶಿಸ್ತಿಗೆ ಮೊದಲ ಆದ್ಯತೆ ನೀಡುತ್ತೆ. ಬೆಂಕಿ ಹಚ್ಚುವಿಕೆ ಸೇರಿ ವಿಧ್ವಂಸಕ ಕೃತ್ಯಗಳನ್ನು ಸೇನೆ ಒಪ್ಪಲ್ಲ. ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದು ಸೇನೆಗೆ ಯುವಕರ ನೇಮಕಾತಿ ವೇಳೆ ಪ್ರಮಾಣಪತ್ರ ಅತ್ಯಗತ್ಯ. ಈ ಪ್ರಮಾಣಪತ್ರ ಇಲ್ಲದಿದ್ರೆ ಸೇನೆಗೆ ನೇಮಕಾತಿಗೆ ಅರ್ಹರಲ್ಲ ಎಂದರು.
ಅಗ್ನಿಪಥ್ ಯೋಜನೆ ವಿರೋಧಿಸಿ ಹಿಂಸಾಚಾರ ನಿರೀಕ್ಷಿಸಿರಲಿಲ್ಲ. ಸಶಸ್ತ್ರ ಪಡೆಗಳಲ್ಲಿ ಅಶಿಸ್ತಿಗೆ ಯಾವುದೇ ಜಾಗವಿಲ್ಲ. ಸೇನೆಗೆ ನೇಮಕ ಆಗುವವರು ಹಿಂಸಾಚಾರದಲ್ಲಿ ಭಾಗಿಯಾಗಬಾರದು. ಇಂಥ ಯಾವುದೇ FIR ದಾಖಲಾದ್ರೆ ನೇಮಕಾತಿಗೆ ಪರಿಗಣಿಸಲ್ಲ ಎಂದರು.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:47 pm, Sun, 19 June 22