Ludhiana Court Blast: ಎಸ್​ಎಫ್​ಜೆ ಕಾರ್ಯಕರ್ತ ಜಸ್ವಿಂದರ್​ ಸಿಂಗ್​ ಮುಲ್ತಾನಿ ಜರ್ಮನಿಯಲ್ಲಿ ಬಂಧನ, ಬಹುದೊಡ್ಡ ದಾಳಿಯ ಸ್ಫೋಟಕ ಮಾಹಿತಿ ಬಹಿರಂಗ

ಜಸ್ವಿಂದರ್ ಸಿಂಗ್​ ಮುಲ್ತಾನಿ ಭಾರತದ ಮೇಲೆ ಬಹುದೊಡ್ಡ ಮಟ್ಟದಲ್ಲಿ ದಾಳಿಗೆ ಹೊಂಚು ಹಾಕಿದ್ದ ಎಂಬ ನಂಬಲರ್ಹ ಮೂಲಗಳಿಂದ ಜರ್ಮನಿ ಪೊಲೀಸರಿಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಜರ್ಮನಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

Ludhiana Court Blast: ಎಸ್​ಎಫ್​ಜೆ ಕಾರ್ಯಕರ್ತ ಜಸ್ವಿಂದರ್​ ಸಿಂಗ್​ ಮುಲ್ತಾನಿ ಜರ್ಮನಿಯಲ್ಲಿ ಬಂಧನ, ಬಹುದೊಡ್ಡ ದಾಳಿಯ ಸ್ಫೋಟಕ ಮಾಹಿತಿ ಬಹಿರಂಗ
ಲುಧಿಯಾನಾ ಕೋರ್ಟ್​ ಬ್ಲಾಸ್ಟ್​
Follow us
TV9 Web
| Updated By: Lakshmi Hegde

Updated on:Dec 28, 2021 | 11:08 AM

ಬರ್ಲಿನ್​: ಪಂಜಾಬ್​ನ ಲುಧಿಯಾನ ಸೆಷನ್ಸ್​ ನ್ಯಾಯಾಲಯದೊಳಗೆ ಬಾಂಬ್​ ಬ್ಲಾಸ್ಟ್​ (Ludhiana Court Blast) ಪ್ರಕರಣದೊಂದಿಗೆ ಲಿಂಕ್​ ಹೊಂದಿರುವ ಸಿಖ್​ ಫಾರ್ ಜಸ್ಟೀಸ್​ (SFJ)ಸಂಘಟನೆಯ ಜಸ್ವಿಂದರ್ ಸಿಂಗ್ ಮುಲ್ತಾನಿಯನ್ನು ಜರ್ಮನಿಯಲ್ಲಿ ಡಿ.27ರಂದು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಲ್ತಾನಿ ಜರ್ಮನಿಯವನೇ ಆಗಿದ್ದು, ಅಲ್ಲಿನ ಎರ್​ಫರ್ಟ್​​ನಲ್ಲಿ  ಆತನನ್ನು ಅರೆಸ್ಟ್ ಮಾಡಲಾಗಿದೆ. ಹಾಗೇ, ಭಾರತಕ್ಕೆ ಕಳಿಸುವಂತೆ ಇಲ್ಲಿನ ಅಧಿಕಾರಿಗಳು ಮನವಿ ಮಾಡಿದ್ದು, ಅದಕ್ಕೆ ಸಂಬಂಧಪಟ್ಟ ಪ್ರಕ್ರಿಯೆ ಶೀಘ್ರವೇ ಶುರುವಾಗಲಿದೆ.  

ಈ ಜಸ್ವಿಂದರ್ ಸಿಂಗ್​ ಮುಲ್ತಾನಿ ಭಾರತದ ಮೇಲೆ ಬಹುದೊಡ್ಡ ಮಟ್ಟದಲ್ಲಿ ದಾಳಿಗೆ ಹೊಂಚು ಹಾಕಿದ್ದ ಎಂಬ ಸ್ಫೋಟಕ ಮಾಹಿತಿ ನಂಬಲರ್ಹ ಮೂಲಗಳಿಂದ ಜರ್ಮನಿ ಪೊಲೀಸರಿಗೆ ಸಿಕ್ಕ ಹಿನ್ನೆಲೆಯಲ್ಲಿ ಜರ್ಮನಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಹೀಗಾಗಿ ಭಾರತದ ಮೇಲಾಗುವ ದೊಡ್ಡ ದಾಳಿಯನ್ನು ತಡೆದಂತೆ ಆಗಿದೆ. ಎಸ್​ಎಫ್​ಜೆ ಕಾರ್ಯಕರ್ತನಾಗಿರುವ ಈತ ತನ್ನ ಪಾಕಿಸ್ತಾನಿ ಮೂಲದ ಸಹಚರರು, ಶಸ್ತ್ರಾಸ್ತ್ರ ಕಳ್ಳಸಾಗಣೆದಾರರ ನೆರವಿನಿಂದ ಶಸ್ತ್ರಗಳು,  ಸ್ಫೋಟಕಗಳು, ಗ್ರೆನೇಡ್​ಗಳನ್ನು ವಿವಿಧ ಗಡಿಗಳ ಮೂಲಕ ಪಂಜಾಬ್​ಗೆ ಕಳಿಸುತ್ತಿದ್ದ, ಈ ಮೂಲಕ ಅಲ್ಲಿನ ದಾಳಿಗೆ ವ್ಯವಸ್ಥೆ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.  ಪಂಜಾಬ್​ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವುದೇ ಇವರ ಉದ್ದೇಶ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಡಿಸೆಂಬರ್ 23ರಂದು ಲುಧಿಯಾನದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿ ಒಬ್ಬ ವ್ಯಕ್ತಿಯ ಜೀವವನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದರು. ಸ್ಫೋಟದ ವೇಳೆ ನ್ಯಾಯಾಲಯದ ಕಾಂಪ್ಲೆಕ್ಸ್​ನಲ್ಲಿ ಕೆಲವೇ ಜನರು ಇದ್ದರು. ಬಾಂಬ್ ಸ್ಫೋಟದಲ್ಲಿ ಬಾತ್​ರೂಮಿನ ಗೋಡೆಗಳು ನೆಲಸಮಗೊಂಡಿದ್ದು, ಕಿಟಕಿಯ ಗಾಜು ಕೂಡ ಒಡೆದು ಹೋಗಿತ್ತು. ಲುಧಿಯಾನ ಸ್ಫೋಟದಲ್ಲಿ ಸಾವನ್ನಪ್ಪಿದ ವ್ಯಕ್ತಿಯೇ ಆತ್ಮಾಹುತಿ ಬಾಂಬರ್‌ ಎನ್ನಲಾಗಿದ್ದು, ಆತ ಮಾಜಿ ಪೊಲೀಸ್ ಗಗನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಹೆಡ್ ಕಾನ್‌ಸ್ಟೆಬಲ್ ಆಗಿದ್ದ ಆತನನ್ನು 2019ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತಸಲ್ಪಟ್ಟಿದ ಆತ ನಂತರ ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ. ಸೆಪ್ಟೆಂಬರ್​ನಲ್ಲಿ ಬಿಡುಗಡೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಗಗನ್​ದೀಪ್ ಸಿಂಗ್​ನ ಸಿಮ್ ಕಾರ್ಡ್ ಮತ್ತು ವೈರ್‌ಲೆಸ್ ಡಾಂಗಲ್ ಮೂಲಕ ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಹೇಳಲಾಗಿದೆ. ಇನ್ನು ಪಂಜಾಬ್​ ಪೊಲೀಸರು ಸೆಪ್ಟೆಂಬರ್​ನಲ್ಲಿ ಎಸ್​ಎಫ್​ಐ ಮಾಡ್ಯೂಲ್​​ನ್ನು ಬೇಧಿಸಿದ್ದರು. ಖನ್ನಾದ ರಾಂಪುರ ಗ್ರಾಮದಲ್ಲಿ ಜನಾಭಿಪ್ರಾಯ ಸಂಗ್ರಹ 2020ರ ಲಕ್ಷಗಟ್ಟಲೆ ಕರಪತ್ರಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಎಸ್​ಎಫ್​ಐನ ಮೂವರನ್ನು ಬಂಧಿಸಿದ್ದರು. ಈ ಗುಂಪು ಕೂಡ ಲುಧಿಯಾನ ಕೋರ್ಟ್ ಸ್ಫೋಟದೊಂದಿಗೆ ಸಂಬಂಧಹೊಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Viral Video: ಅತಿಥಿಗಳ ಮುಂದೆಯೇ ವಧುವಿನ ಕೈ ಹಿಡಿದು ಎಳೆದ ವರ; ವೈರಲ್ ಆದ​ ವಿಡಿಯೋ ನೋಡಿ

Published On - 11:08 am, Tue, 28 December 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್