ರೈಲು ಬರುವ ಕೆಲವೇ ನಿಮಿಷಗಳ ಮೊದಲು ಕಂಠಪೂರ್ತಿ ಕುಡಿದು ರೈಲ್ವೆ ಹಳಿ ಮೇಲೆ ಟ್ರಕ್ ನಿಲ್ಲಿಸಿದ್ದ ಚಾಲಕ
ಚಾಲಕನೊಬ್ಬ ಮದ್ಯದ ಅಮಲಿನಲ್ಲಿ ಲುಧಿಯಾನದ ರೈಲ್ವೆ ಹಳಿ ಮೇಲೆ ಟ್ರಕ್ ನಿಲ್ಲಿಸಿದ್ದು, ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ದೊಡ್ಡ ಅಪಘಾತ ತಪ್ಪಿದೆ. ರೈಲು ಬರುವ ಎಂಟು ನಿಮಿಷಗಳ ಹಿಂದೆ ಚಾಲಕ ಟ್ರಕ್ನ್ನು ಹಳಿ ಮೇಲೆ ನಿಲ್ಲಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಟ್ರಕ್ ಕಂಡು ಲೋಕೋಪೈಲಟ್ ರೈಲನ್ನು ನಿಧಾನಗೊಳಿಸಿದ್ದರು, ಮತ್ತು ಟ್ರಕ್ನಿಂದ ಕೆಲವು ಮೀಟರ್ ದೂರದಲ್ಲೇ ರೈಲನ್ನು ನಿಲ್ಲಿಸಿ, ಅಪಘಾತವನ್ನು ತಪ್ಪಿಸಿದ್ದಾರೆ.

ಚಾಲಕ ಲುಧಿಯಾನ ದೆಹಲಿ ರೈಲ್ವೆ ಹಳಿಯಲ್ಲಿ ಟ್ರಕ್ ಚಲಾಯಿಸಿದ್ದಾನೆ, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಆದರೆ ಟ್ರ್ಯಾಕ್‌ನಲ್ಲಿ ಟ್ರಕ್ ಅನ್ನು ಗಮನಿಸಿದ ಸ್ಥಳೀಯರು ಸಮಯಕ್ಕೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಸಿಂಗ್ ಹೇಳಿದರು.
ನಂತರ ಟ್ರಕ್ ಅನ್ನು ಟ್ರ್ಯಾಕ್‌ನಿಂದ ಹೊರತೆಗೆದು ಚಾಲಕನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು ಒಂದು ಗಂಟೆಯ ನಂತರ ರೈಲು ಸಂಚಾರವನ್ನು ಪುನಃಸ್ಥಾಪಿಸಲಾಯಿತು.ಚಾಲಕನ ವೈದ್ಯಕೀಯ ಪರೀಕ್ಷೆಯಲ್ಲಿ ಆತ ಮದ್ಯದ ಅಮಲಿನಲ್ಲಿದ್ದುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಮೈಸೂರಿನಲ್ಲಿ ರೈಲು ಅಪಘಾತಕ್ಕೆ ಸಂಚು: ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟವರು ಪೊಲೀಸ್ ವಶಕ್ಕೆ
ಹಳಿಗಳ ಮೇಲೆ ಮರದ ದಿಮ್ಮಿ ಕಿಡಿಗೇಡಿಗಳು ಹಳಿ ಮೇಲೆ ಮರದ ದಿಮ್ಮಿ ಹಾಗೂ ಕಬ್ಬಿಣದ ರಾಡ್ ಇಟ್ಟು ಅಪಘಾತ ಮಾಡಿಸಲು ಯತ್ನಿಸಿದ್ದು ವಿಡಿಯೋ ಪತ್ತೆಯಾಗಿದೆ. ಚಾಮರಾಜನಗರದಿಂದ ಮೈಸೂರಿಗೆ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲು ಗಾಡಿ ಸಂ. 06275 ರ ಅಪಘಾತಕ್ಕೆ ಸಂಜು ರೂಪಿಸಲಾಗಿತ್ತು. ಸುಮಾರು 400ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದ ರೈಲು ಅಪಘಾತಕ್ಕೆ ಕಿಡಿಗೇಡಿಗಳಿಂದ ಯತ್ನ ನಡೆದಿತ್ತು. ಸದ್ಯ ಲೋಕೋಪೈಲಟ್ (ಚಾಲಕ) ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ.
ಕಿಡಿಗೇಡಿಗಳು, ಹಳಿ ಮೇಲೆ ಮರದ ದಿಮ್ಮಿ, ಕಬ್ಬಿಣದ ರಾಡ್ ಇಟ್ಟು ಅಪಘಾತಕ್ಕೆ ಯತ್ನಿಸಿದ್ದರು. ಈ ಕೃತ್ಯ ಎಸಗುವ ಮುನ್ನ ವಿಡಿಯೋ ಮಾಡಿಕೊಂಡಿದ್ದರು. ಬೇರೊಂದು ರೈಲು ಹಳಿ ಮೇಲೆ ಹೋಗುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಮಾಡಿದ ಬಳಿಕ ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದರು.
ಸದ್ಯ ಘಟನೆಗೆ ಸಂಬಂಧಿಸಿದಂತೆ ಸೋಮಯ್ ಮರಾಂಡಿ (22 ವರ್ಷ), ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂದು ಗುರುತಿಸಲಾದ ಮೂವರನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನವೆಂಬರ್ 15ರಂದು ಈ ಘಟನೆ ನಡೆದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ