Ludhiana Gas Leak : ಲೂಧಿಯಾನದಲ್ಲಿ ಅನಿಲ ಸೋರಿಕೆ, 6 ಮಂದಿ ಸಾವು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ 10ಕ್ಕೂ ಅಧಿಕ ಜನರು

ಲೂಧಿಯಾನದ ಗ್ಯಾಸ್​ಪುರದಲ್ಲಿ ಅನಿಲ ಸೋರಿಕೆ(Gas Leak) ಯುಂಟಾಗಿದ್ದು, 6 ಮಂದಿ ಮೃತಪಟ್ಟು, 10ಕ್ಕೂ ಅಧಿಕ ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

Ludhiana Gas Leak : ಲೂಧಿಯಾನದಲ್ಲಿ ಅನಿಲ ಸೋರಿಕೆ, 6 ಮಂದಿ ಸಾವು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ 10ಕ್ಕೂ ಅಧಿಕ ಜನರು
ಅನಿಲ ಸೋರಿಕೆ
Follow us
ನಯನಾ ರಾಜೀವ್
|

Updated on: Apr 30, 2023 | 10:26 AM

ಲೂಧಿಯಾನದ ಗ್ಯಾಸ್​ಪುರದಲ್ಲಿ ಅನಿಲ ಸೋರಿಕೆ(Gas Leak) ಯುಂಟಾಗಿದ್ದು, 6 ಮಂದಿ ಮೃತಪಟ್ಟು, 10ಕ್ಕೂ ಅಧಿಕ ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ವಾಹನಗಳು ಕೂಡ ಸ್ಥಳಕ್ಕೆ ಆಗಮಿಸಿದ್ದು, ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಇದಲ್ಲದೇ ಗಾಯಾಳುಗಳನ್ನು ಕೂಡ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

ಮಾಹಿತಿಯ ಪ್ರಕಾರ, ಕಾರ್ಖಾನೆಯಿಂದ ಈ ಅನಿಲ ಸೋರಿಕೆಯಾಗಿದೆ, ನಂತರ ಅನೇಕ ಜನರು ಮೂರ್ಛೆ ಹೋದರು ಎಂದು ವರದಿಯಾಗಿದೆ. ಈ ಕಾರ್ಖಾನೆಯು ಶೇರ್ಪುರ್ ಚೌಕ್ ಬಳಿಯ ಸುವಾ ರಸ್ತೆಯಲ್ಲಿದೆ. ಮಾಹಿತಿ ಪ್ರಕಾರ ಬೆಳಗ್ಗೆ 7.15ಕ್ಕೆ ಗ್ಯಾಸ್ ಸೋರಿಕೆಯಾಗಿದೆ. ಪೊಲೀಸರು ಆ ಪ್ರದೇಶದಲ್ಲಿ ಜನರ ಓಡಾಟವನ್ನು ಸ್ಥಗಿತಗೊಳಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಬಟಿಂಡಾದಿಂದ ಎನ್‌ಡಿಆರ್‌ಎಫ್ ತಂಡವೂ ಗ್ಯಾಸ್‌ಪುರಕ್ಕೆ ತೆರಳಿದೆ.

ಮತ್ತಷ್ಟು ಓದಿ: ಮಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ ಟ್ಯಾಂಕರ್​ಗಳಲ್ಲಿ ಗ್ಯಾಸ್ ಸೋರಿಕೆ, ಹಳಿ ಸುತ್ತಮುತ್ತ ಸಾರ್ವಜನಿಕರಿಗೆ ನಿರ್ಬಂಧ

ಮಾಹಿತಿ ಪ್ರಕಾರ, ಈ ಅಪಘಾತದಲ್ಲಿ ಸಾವನ್ನಪ್ಪಿದ 6 ಜನರಲ್ಲಿ ಹೆಚ್ಚಿನವರು ಒಂದೇ ಕುಟುಂಬದವರು ಎನ್ನಲಾಗಿದೆ. ಇದಲ್ಲದೇ ಈ ಅಪಘಾತದಲ್ಲಿ ಕೆಲ ಸಾಕು ಪ್ರಾಣಿಗಳು ಸಾವನ್ನಪ್ಪಿರುವ ಸುದ್ದಿಯೂ ಹೊರ ಬರುತ್ತಿದೆ. ಆದರೆ, ಅನಿಲ ಸೋರಿಕೆಯಾದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಾಹಿತಿ ಪ್ರಕಾರ ಅಸ್ಪಾಲ್ ಪ್ರದೇಶದಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಲೂಧಿಯಾನದಲ್ಲಿ ಅನಿಲ ಸೋರಿಕೆಯ ಪ್ರಕರಣವು ಮುನ್ನೆಲೆಗೆ ಬಂದಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಇಂತಹ ಸುದ್ದಿಗಳು ಕೇಳಿಬಂದಿದ್ದವು.

ಆ ಸಮಯದಲ್ಲೂ ಗ್ಯಾಸಪುರ ಪ್ರದೇಶದಿಂದಲೇ ಗ್ಯಾಸ್ ಸೋರಿಕೆಯಾಗಿತ್ತು. ಆ ವೇಳೆ ಶೇಖರಣಾ ಘಟಕದಲ್ಲಿದ್ದ ಟ್ಯಾಂಕರ್‌ನಿಂದ ಕಾರ್ಬನ್ ಡೈಆಕ್ಸೈಡ್ ದ್ರವ ಅನಿಲ ಸೋರಿಕೆಯಾಗಿದ್ದು, 5 ಜನರು ಅಸ್ವಸ್ಥರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ