ಐಷಾರಾಮಿ ಕಾರಿಗೆ ಬೆಂಕಿ, ಕಾರಿನಲ್ಲಿದ್ದವರಿಗೆ ಸಹಾಯ ಮಾಡಿದ ಸಿಎಂ ಏಕನಾಥ್ ಶಿಂಧೆ
ಮುಂಬೈನ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದೇ ದಾರಿಯಲ್ಲಿಯೇ ಸಾಗುತ್ತಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಾರಿನಲ್ಲಿದ್ದವರಿಗೆ ಸಹಾಯ ಮಾಡಿದ್ದಾರೆ. ಇದೀಗ ಈ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ಮುಂಬೈ: ಮಂಗಳವಾರ ಮುಂಜಾನೆ ಮುಂಬೈನ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬೆಂಗಾವಲು ಪಡೆ ಹಾದು ಹೋಗುತ್ತಿದ್ದು, ಕಾರಿನಲ್ಲಿದ್ದವರಿಗೆ ಸಹಾಯ ಮಾಡಲು ನಿಲ್ಲಿಸಿದ್ದಾರೆ.ಮುಂಬೈನ ಪ್ರಮುಖ ಉತ್ತರ-ದಕ್ಷಿಣ ರಸ್ತೆಯಾಗಿರುವ ಹೆದ್ದಾರಿಯ ವಿಲೆ ಪಾರ್ಲೆ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯರಾತ್ರಿ 12.25ಕ್ಕೆ ಬೆಂಕಿ ಹೊತ್ತಿಕೊಂಡ ಬಗ್ಗೆ ಅಗ್ನಿಶಾಮಕ ದಳಕ್ಕೆ ಕರೆ ಬಂತು. ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲಾಯಿತು ಎಂದು ಅವರು ಹೇಳಿದರು.
Dutiful CM Eknath Shinde stops his convoy at highway, helps man whose car caught fire pic.twitter.com/XpeUxpRfuz
— Sheetal Chopra ?? (@SheetalPronamo) September 13, 2022
ಮುಖ್ಯಮಂತ್ರಿ ಶಿಂಧೆ ಅವರ ಬೆಂಗಾವಲು ಪಡೆ ಎದುರು ರಸ್ತೆಯ ಮೂಲಕ ಹಾದು ಹೋಗುತ್ತಿದ್ದು, ಕಾರು ಪ್ರಯಾಣಿಕರಿಗೆ ಸಹಾಯ ಮಾಡಲು ನಿಲ್ಲಿಸಿದರು. ಸಿಎಂ ಶಿಂಧೆ ಕಾರು ಚಾಲಕನೊಂದಿಗೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿಎಂ ಶಿಂಧೆ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಅವರ ಬಳಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಶಿಂಧೆ ಅವರು ಚಾಲಕನ ಹೆಸರನ್ನು ಕೇಳಿದರು, ಜೊತೆಗೆ ಘಟನೆಯ ಬಗ್ಗೆ ಸಿಎಂಗೆ ವಿವರಿಸಿದ್ದಾರೆ. ಬೆಂಕಿ ತಗುಲಿದ ಕಾರಿನ ಬಳಿ ಹೋಗಬೇಡಿ ಕಾರಿಗಿಂತ ಜೀವನ ಮುಖ್ಯ, ಸಹಾಯ ಮಾಡುವುದಾಗಿ ಭರವಸೆ ನೀಡಿದರು.
Published On - 12:39 pm, Tue, 13 September 22