Luxury Containers: ರಾಹುಲ್ ಗಾಂಧಿಗೆ ಐಷಾರಾಮಿ ಕಂಟೈನರ್‌, ಭಾರತ್ ಜೋಡೋ ಯಾತ್ರೆಗೆ 59 ಕಂಟೈನರ್‌ಗಳ ಬಳಕೆ

ಪಾದಯಾತ್ರೆಗೆ ಬೆಂಗಾವಲು ಪಡೆ ವಾಹನ ಇರುತ್ತದೆ. ಇವುಗಳನ್ನು ಹಾಸಿಗೆಗಳ ಲಭ್ಯತೆಗಳು ಮತ್ತು ವಸ್ತ್ರಗಳನ್ನು ಬದಲಾವಣೆ ಮಾಡಲು ಇದನ್ನು ಉಪಯೋಗಿಸಲಾಗಿದೆ. ಟ್ರಕ್‌ಗಳಲ್ಲಿ ಅಳವಡಿಸಲಾಗಿರುವ ಈ ಕಂಟೈನರ್‌ಗಳಲ್ಲಿ ಕಾಂಗ್ರೆಸ್ ನಾಯಕರು ಮಲಗುತ್ತಾರೆ.

Luxury Containers: ರಾಹುಲ್ ಗಾಂಧಿಗೆ ಐಷಾರಾಮಿ ಕಂಟೈನರ್‌, ಭಾರತ್ ಜೋಡೋ ಯಾತ್ರೆಗೆ 59 ಕಂಟೈನರ್‌ಗಳ ಬಳಕೆ
Luxury Containers and rahul gandhi
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 09, 2022 | 7:06 PM

2024ರ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ. ಗಾಂಧಿ ಕುಟುಂಬದ ನಾಯಕತ್ವದಲ್ಲಿ ತನ್ನ ಸ್ಥಿರತೆಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಹೊಸ ರೂಪದೊಂದಿಗೆ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಇದು ಕೊನೆಯ ಪ್ರಯತ್ನ ಎಂಬಂತೆ ಅನೇಕ ಸರ್ಕಸ್​ಗಳನ್ನು ಮಾಡುತ್ತಿದೆ. ಭಾರತ್ ಜೋಡೋ ಯಾತ್ರೆ ಎಂದು ಹೆಸರಿನಲ್ಲಿ ಕಾಂಗ್ರೆಸ್ ಬುಧವಾರ (ಸೆಪ್ಟೆಂಬರ್ 7) ತಮಿಳುನಾಡಿನ ಕನ್ನಿಯಾಕುಮಾರಿಯಿಂದ 3,570-ಕಿಮೀ ಪಾದಯಾತ್ರೆಯನ್ನು ಪ್ರಾರಂಭಿಸಿತು . ಮೆರವಣಿಗೆಯು 5 ತಿಂಗಳವರೆಗೆ ಇರುತ್ತದೆ ಮತ್ತು ಶ್ರೀನಗರದಲ್ಲಿ ಮುಕ್ತಾಯಗೊಳ್ಳುವ ಮೊದಲು 12 ರಾಜ್ಯಗಳಿಗೆ ಈ ಯಾತ್ರೆ ಹೋಗುತ್ತದೆ.

ರಾಹುಲ್ ಗಾಂಧಿ ಮತ್ತು ಇತರ 118 ಕಾಂಗ್ರೆಸ್ ನಾಯಕರು ಪ್ರತಿದಿನ ಎರಡು ಬ್ಯಾಚ್‌ಗಳಲ್ಲಿ 22-23 ಕಿಮೀ ನಡೆಯಲು ಯೋಜಿಸುತ್ತಿದ್ದಾರೆ, ಬೆಳಿಗ್ಗೆ 7 ರಿಂದ 10:30 ರವರೆಗೆ ಮತ್ತು ಮತ್ತೆ ಮಧ್ಯಾಹ್ನ 3:30 ರಿಂದ ಸಂಜೆ 6:30 ರವರೆಗೆ. ಸಂಜೆ ಹೊತ್ತಿಗೆ ಒಂದು ಸಭೆಯನ್ನು ನಡೆಸಿ ಜನರನ್ನು ಉದ್ದೇಶಿ ಒಂದು ಭಾಷಣ ಮಾಡುತ್ತಾರೆ. ಈ ಪಾದಯಾತ್ರೆಗೆ ಬೆಂಗಾವಲು ಪಡೆ ವಾಹನ ಇರುತ್ತದೆ. ಇವುಗಳನ್ನು ಹಾಸಿಗೆಗಳ ಲಭ್ಯತೆಗಳು ಮತ್ತು ವಸ್ತ್ರಗಳನ್ನು ಬದಲಾವಣೆ ಮಾಡಲು ಇದನ್ನು ಉಪಯೋಗಿಸಲಾಗಿದೆ. ಟ್ರಕ್‌ಗಳಲ್ಲಿ ಅಳವಡಿಸಲಾಗಿರುವ ಈ ಕಂಟೈನರ್‌ಗಳಲ್ಲಿ ಕಾಂಗ್ರೆಸ್ ನಾಯಕರು ಮಲಗುತ್ತಾರೆ. ಜೊತೆಗೆ ರಸ್ತೆಬದಿಗಳಲ್ಲಿ ಬಿಡಾರ ಹಾಕುತ್ತಾರೆ. ಇದರಲ್ಲಿ ಅಡುಗೆ ಸಿಬ್ಬಂದಿ ಮಾಡಿದ ಆಹಾರವನ್ನು ಸೇವನೆ ಮಾಡುತ್ತಾರೆ. ಪ್ರತಿ 3 ದಿನಗಳಿಗೊಮ್ಮೆ ಕ್ಲೀನ್ ಲಾಂಡ್ರಿಗಳ ವ್ಯವಸ್ಥೆಯು ಇದೆ.

ಈ ಐಷಾರಾಮಿ ಕಂಟೈನರ್‌ಗಳು ಹವಾನಿಯಂತ್ರಣಗಳು ಮತ್ತು ಆಧುನಿಕ ಸೌಕರ್ಯಗಳನ್ನು ಹೊಂದಿವೆ. ಅವುಗಳಲ್ಲಿ ಒಂದನ್ನು ಮಿನಿ ಕಾನ್ಫರೆನ್ಸ್ ಹಾಲ್​ನ್ನಾಗಿ ಪರಿವರ್ತಿಸಲಾಗಿದೆ. ಪಾದಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಅವರ ಬಳಿಯೇ ಈ ಕಂಟೈನರ್ ಇದೆ. ನಂ.1 ಎಂದು ಲೇಬಲ್ ಮಾಡಲಾದ, ಗಾಂಧಿ ಕುಟುಂಬಕ್ಕೆ ಕಂಟೈನರ್ ಒಂದು ಹಾಸಿಗೆ, ಅಟ್ಯಾಚ್ಡ್ ಬಾತ್ರೂಮ್ ಮತ್ತು ಮಂಚವನ್ನು ಹೊಂದಿದೆ. ಇದು ಹಳದಿ ಬಣದಿಂದ ಕೂಡಿದೆ. ಅವರ ಭದ್ರತಾ ತಂಡವು ಕಂಟೈನರ್ ಸಂಖ್ಯೆ 2ರಲ್ಲಿ ಇರುತ್ತಾರೆ. ಅವರ ಬಟ್ಟೆ, ಅವರ ಅಲಂಕಾರ ಸಾಮಾಗ್ರಿಗಳನ್ನು ಕಂಟೈನರ್ ಸಂಖ್ಯೆ 4 ರಲ್ಲಿ ಇರಿಸಲಾಗಿದೆ.

ಕಾಂಗ್ರೆಸ್ ಕಾರ್ಯದರ್ಶಿ ವಂಶಿ ಚಂದ್ ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಕಂಟೈನರ್ ಸಂಖ್ಯೆ 3ರಲ್ಲಿ ಇರುತ್ತಾರೆ. ಅದೇ ರೀತಿ, ನೀಲಿ ವಲಯದ ಕಂಟೈನರ್‌ಗಳು 2 ಹಾಸಿಗೆಗಳು ಮತ್ತು ವಾಶ್‌ರೂಮ್ ಅನ್ನು ಹೊಂದಿವೆ. ಅಂತಹ ಒಂದು ಕಂಟೈನರ್‌ನಲ್ಲಿ (ಸಂಖ್ಯೆ 15) ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್​ಗೆ ನೀಡಲಾಗಿದೆ. 2 ಕೆಳಗಿನ ಬರ್ತ್‌ಗಳು ಮತ್ತು 2 ಮೇಲಿನ ಬರ್ತ್‌ಗಳನ್ನು ಹೊಂದಿರುವ ಮಹಿಳಾ ಸದಸ್ಯರಿಗೆ ಗುಲಾಬಿ ಬಣ್ಣದ ಕಂಟೈನರ್‌ಗಳೂ ಇವೆ. ಇದಲ್ಲದೆ, ಇದರ ಜೊತೆಗೆ ಸ್ನಾನಗೃಹಗಳು ಮತ್ತು ಶೇಖರಣಾ ಸ್ಥಳಗಳೊಂದಿಗೆ ಸಜ್ಜುಗೊಂಡಿವೆ. ಮತ್ತೊಂದೆಡೆ, ಕೆಂಪು ಮತ್ತು ಆರ್ಗನ್ ಝೋನ್ ಕಂಟೈನರ್‌ಗಳಲ್ಲಿ 4 ಜನರು ವಾಸಿಸುತ್ತಾರೆ ಆದರೆ ಶೌಚಾಲಯಗಳಿಲ್ಲ.

ಕೆಲವು ಕಂಟೈನರ್‌ಗಳನ್ನು ಸಾಮಾನ್ಯ ವಾಶ್‌ರೂಮ್‌ಗಳಾಗಿ ಪರಿವರ್ತಿಸಲಾಗಿದೆ ಮತ್ತು ಅವುಗಳನ್ನು ಟಿ ಅಕ್ಷರದಿಂದ ಗುರುತಿಸಲಾಗಿದೆ. ಭಾಗವಹಿಸುವವರು ಇತರ ಕೆಲಸ ಸಿಬ್ಬಂದಿಗಳನ್ನು ಸಹ ಹೊಂದಿರುತ್ತಾರೆ, ಅವರ ಕೆಲಸವು ಪ್ರತಿ ದಿನ ಬೆಳಿಗ್ಗೆ ಪಾದಯಾತ್ರೆ ಪ್ರಾರಂಭಗೊಂಡ ನಂತರ ಲಿನಿನ್ ಮತ್ತು ಹಾಸಿಗೆಯನ್ನು ಬದಲಾಯಿಸುವುದು. ಕಾಂಗ್ರೆಸ್ ನಾಯಕರು ಸಾಮಾನ್ಯ ಪ್ರದೇಶದಲ್ಲಿ ಊಟ ಮಾಡುತ್ತಾರೆ. ಶಿಬಿರದಲ್ಲಿ ಮದ್ಯ ಮತ್ತು ತಂಬಾಕು ಸೇವನೆ ಮಾಡದಂತೆ ಸೂಚನೆ ನೀಡಲಾಗಿದೆ. ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಪಾತ್ರೆಗಳ ಒಳಗೆ ಊಟ ಮಾಡದಂತೆಯೂ ತಿಳಿಸಲಾಗಿದೆ.

ರಾಹುಲ್ ಗಾಂಧಿಗೆ ಹೆಚ್ಚಿನ ಭದ್ರತೆಯ ಹೊರತಾಗಿಯೂ, ಕಂಟೈನರ್‌ಗಳು ವೈಯಕ್ತಿಕ ವಸ್ತುಗಳ ನಿರ್ವಹಣಾ ತಂಡವು ಜವಾಬ್ದಾರರಾಗಿರುವುದಿಲ್ಲ ಎಂಬ ಸೂಚನೆಯನ್ನು ಹೊಂದಿದೆ. ಕಾಂಗ್ರೆಸ್ ಎಲ್ಲಾ ಜನರನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದ್ದಾರೆ ಎಂದು ಹೇಳಿದೆ.

Published On - 7:06 pm, Fri, 9 September 22

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ