ಇಂದು ಪಶ್ಚಿಮ ಬಂಗಾಳದಲ್ಲಿ ಭವಾನಿಪುರ ಸೇರಿ ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು ಮತದಾನ ಶುರುವಾಗಿದೆ. ಅದರಲ್ಲೂ ಭವಾನಿಪುರದ ಮೇಲೆ ಎಲ್ಲರ ಕಣ್ಣು. ಇಲ್ಲಿ ಟಿಎಂಸಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದು, ಅವರ ವಿರುದ್ಧ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಕಣಕ್ಕೆ ಇಳಿದಿದ್ದಾರೆ. ಈ ಮಧ್ಯೆ ಮತದಾನ ಶುರುವಾದ ಕೆಲವೇ ಹೊತ್ತಲ್ಲಿ ಪ್ರಿಯಾಂಕಾ ಟಿಬ್ರೆವಾಲ್ ಟಿಎಂಸಿ ಶಾಸಕ ಮದನ್ ಮಿತ್ರಾ ವಿರುದ್ಧ ಆರೋಪ ಮಾಡಿದ್ದಾರೆ. ಮದನ್ ಮಿತ್ರಾ, ಭವಾನಿಪುರದ ವಾರ್ಡ್ ನಂ.72ರಲ್ಲಿ ಮತಯಂತ್ರಗಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿದ್ದಾರೆ. ಇಡೀ ಮತಗಟ್ಟೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭವಾನಿಪುರಕ್ಕೆ ಬೆಳಗ್ಗೆಯೇ ಆಗಮಿಸಿರುವ ಪ್ರಿಯಾಂಕಾ ಟಿಬ್ರೆವಾಲ್, ಮದನ್ ಮಿತ್ರಾ ಉದ್ದೇಶಪೂರ್ವಕವಾಗಿಯೇ ಮತಯಂತ್ರಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಪಶ್ಚಿಮಬಂಗಾಳ ಟಿಎಂಸಿ ಸರ್ಕಾರ ಹೆದರಿಕೆಯಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ. ಇನ್ನು ಇಂದು ಮುಂಜಾನೆ 7ಗಂಟೆಯಿಂದಲೇ ಪಶ್ಚಿಮ ಬಂಗಾಳದ ಸಂಸರ್‌ಗಂಜ್, ಜಂಗೀಪುರ ಮತ್ತು ಭವಾನೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಎಲ್ಲ ರೀತಿಯ ಕೊವಿಡ್ 19 ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದ್ದು ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಬಾಂಬ್ ದಾಳಿ
ಇನ್ನು ಸಂಸರ್ಗಂಜ್ನಲ್ಲಿ ಮುಂಜಾನೆ ಬಾಂಬ್ ದಾಳಿ ಆಗಿದೆ ಎಂದು ಕಾಂಗ್ರೆಸ್ ನಾಯಕ ಜೈದುರ್ ರೆಹಮಾನ್ ಆರೋಪಿಸಿದ್ದಾರೆ. ಬಾಂಬ್ ದಾಳಿಯ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ ಎನ್ನಲಾಗಿದ್ದು, ಘಟನೆಯ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಪಶ್ಚಿಮಬಂಗಾಳದಲ್ಲಿ ಚುನಾವಣೆ ಎಂದರೇ ಹಿಂಸಾಚಾರದ ಇನ್ನೊಂದು ರೂಪ ಎಂಬಂತಾಗಿದೆ. ಹೀಗಾಗಿ ಈ ಉಪಚುನಾವಣೆಗೂ ತುಸು ಜಾಸ್ತಿಯೇ ಭದ್ರತೆ ಕಲ್ಪಿಸಲಾಗಿದೆ. ಮೂರು ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 72 ಕಂಪನಿ ಕೇಂದ್ರ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ ಭವಾನಿ ಪುರ ಒಂದರಲ್ಲೇ 35 ಭವಾನಿಪುರದಲ್ಲೇ ಇವೆ.
ಇದನ್ನೂ ಓದಿ: Shocking Video: ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆಯೇ ತಲೆ ಕೂದಲಿಗೆ ಆವರಿಸಿಕೊಂಡ ಬೆಂಕಿ; ಮಹಿಳೆ ಕಂಗಾಲು
10 ಕೋಟಿ ರೂ. ಖರ್ಚಿನಲ್ಲಿ ಆದ ಮದುವೆಯ ವ್ಯಾಲಿಡಿಟಿ 4 ವರ್ಷ ಮಾತ್ರವೇ? ಅ.6ಕ್ಕೆ ಸಮಂತಾ-ನಾಗ ಚೈತನ್ಯ ಭವಿಷ್ಯ ನಿರ್ಧಾರ
Published On - 8:59 am, Thu, 30 September 21