ಮಧ್ಯಪ್ರದೇಶ: ಮದ್ಯ ಕಾರ್ಖಾನೆಯಿಂದ ರಕ್ಷಿಸಲ್ಪಟ್ಟಿದ್ದ 39 ಮಕ್ಕಳು ನಾಪತ್ತೆ

|

Updated on: Jun 16, 2024 | 2:03 PM

ಮದ್ಯ ಕಾರ್ಖಾನೆಯಿಂದ ರಕ್ಷಿಸಲ್ಪಟ್ಟಿದ್ದ 39 ಮಕ್ಕಳು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಾಲಕಾರ್ಮಿಕರನ್ನು ರಕ್ಷಿಸಿದ ನಂತರ ಎನ್‌ಸಿಪಿಸಿಆರ್ ತಂಡವು ಮಕ್ಕಳ ಕೈಗಳಲ್ಲಿ ಸುಟ್ಟ ಗಾಯಗಳಿರುವುದನ್ನು ಕಂಡು ಹಿಡಿದಿತ್ತು.

ಮಧ್ಯಪ್ರದೇಶ: ಮದ್ಯ ಕಾರ್ಖಾನೆಯಿಂದ ರಕ್ಷಿಸಲ್ಪಟ್ಟಿದ್ದ 39 ಮಕ್ಕಳು ನಾಪತ್ತೆ
Follow us on

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಧ್ಯಪ್ರದೇಶದ ರೈಸನ್​ನಲ್ಲಿರುವ ಮದ್ಯದ ಕಾರ್ಖಾನೆಯ ಮೇಲೆ ದಾಳಿ ನಡೆಸಿದ ರಕ್ಷಿಸಿದ್ದ 39 ಬಾಲ ಕಾರ್ಮಿಕರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಬಾಲಕಾರ್ಮಿಕರನ್ನು ರಕ್ಷಿಸಿದ ನಂತರ ಎನ್‌ಸಿಪಿಸಿಆರ್ ತಂಡವು ಮಕ್ಕಳ ಕೈಗಳಲ್ಲಿ ಸುಟ್ಟ ಗಾಯಗಳಿರುವುದನ್ನು ಕಂಡು ಹಿಡಿದಿತ್ತು. ಆ ಗಾಯಗಳು ಕೈಗಳನ್ನು ರಾಸಾಯನಿಕಗಳಿಗೆ ಒಡ್ಡಿಕೊಳ್ಳವುದರಿಂದ ಸಂಭವಿಸುತ್ತವೆ ಎಂಬುದು ತಿಳಿದುಬಂದಿದೆ.

NCPCR ಅಧ್ಯಕ್ಷ ಪ್ರಿಯಾಂಕ್ ಕನುಂಗೊ ಮಾತನಾಡಿ, ಆ ಮದ್ಯದ ಕಾರ್ಖಾನೆಯಲ್ಲಿ ಮಕ್ಕಳನ್ನು ನೇಮಿಸಿಕೊಂಡಿದ್ದರು, ತಮ್ಮ ತಂಡವು ಸೆಹತ್‌ಗಂಜ್‌ನಲ್ಲಿರುವ ಸೋಮ್ ಕಾರ್ಖಾನೆಯ ಮೇಲೆ ದಾಳಿ ಮಾಡಿ, ಮಕ್ಕಳನ್ನು ರಕ್ಷಿಸಿ ಮತ್ತು ಆಡಳಿತಕ್ಕೆ ಹಸ್ತಾಂತರಿಸಲಾಗಿತ್ತು.

ಸುಮಾರು 15-16 ಗಂಟೆಗಳ ಕಾಲ ಕಾರ್ಖಾನೆಯಲ್ಲಿ ಮಕ್ಕಳನ್ನು ಕೆಲಸ ಮಾಡುವಂತೆ ಬಚ್ಪನ್ ಬಚಾವೋ ಆಂದೋಲನದಿಂದ ದೂರು ಸ್ವೀಕರಿಸಲಾಗಿದೆ ಎಂದು ಕನುಂಗೋ ಹೇಳಿದರು.

ಮತ್ತಷ್ಟು ಓದಿ: World Anti-Child Labor Day 2024: ವಿಶ್ವ ಬಾಲಕಾರ್ಮಿಕ ವಿರೋಧಿ ದಿನ; ಮಕ್ಕಳನ್ನು ಸ್ಕೂಲಿಗೆ ಕಳುಹಿಸಿ, ಕೂಲಿಗಲ್ಲ

ಮಧ್ಯಪ್ರದೇಶ ಮುಖ್ಯಮಂತ್ರಿ ಡಾ ಮೋಹನ್ ಯಾದವ್ ಟ್ವೀಟ್​ ಮಾಡಿದ್ದು, ರೈಸನ್ ಜಿಲ್ಲೆಯ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದಾಗ ಬಾಲಕಾರ್ಮಿಕರ ಪ್ರಕರಣವು ನನ್ನ ಗಮನಕ್ಕೆ ಬಂದಿದೆ. ಈ ವಿಷಯವು ತುಂಬಾ ಗಂಭೀರವಾಗಿದೆ.

ಈ ಬಗ್ಗೆ ಕಾರ್ಮಿಕ, ಅಬಕಾರಿ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಆದರೆ ರಕ್ಷಿಸಲ್ಪಟ್ಟ ಬಾಲ ಕಾರ್ಮಿಕರು ಕಣ್ಮರೆಯಾಗಿದ್ದಾರೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ, ಸೋಮ್ ಡಿಸ್ಟಿಲರಿಯಲ್ಲಿ ಮದ್ಯ ತಯಾರಿಕಾ ಕೆಲಸದಲ್ಲಿ ಕೆಲಸ ಮಾಡುತ್ತಿದ್ದ 39 ಹುಡುಗರು ಮತ್ತು ಇತರರು ಸಂಜೆ ತಡವಾಗಿ ಕಾರ್ಖಾನೆಯಿಂದ ನಾಪತ್ತೆಯಾಗಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ