ಒಂದು ತಿಂಗಳ ಕಾಲ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯ ಮನೆಯನ್ನು ನೆಲಸಮಗೊಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಯುವತಿಯ ತಾಯಿಯ ಆಸ್ತಿ ಬಗ್ಗೆ ಕಣ್ಣಿಟ್ಟಿದ್ದ ಆರೋಪಿಯ ಆಕೆಯ ಮಗಳನ್ನು ಮದುವೆಯಾಗುವ ಕನಸು ಕಂಡಿದ್ದ. ಆದರೆ ಅದಕ್ಕೊಪ್ಪದಿದ್ದಾಗ ಆಕೆಯನ್ನು ಅಪಹರಿಸಿ ಒಂದು ತಿಂಗಳು ಕಾಲ ಆಕೆಯ ಮೇಲೆ ಅತ್ಯಾಚಾರವೆಸಗಿ, ಥಳಿಸಿ ಗಾಯಕ್ಕೆ ಖಾರದ ಪುಡಿ ಎರಚಿ, ಆಕೆಯ ಕೂಗು ಯಾರಿಗೂ ಕೇಳಬಾರದೆಂದು ಬಾಯಿಗೆ ಫೆವಿಕ್ವಿಕ್ ಅಂಟಿಸಿ ಚಿತ್ರಹಿಂಸೆ ನೀಡುತ್ತಿದ್ದ ವ್ಯಕ್ತಿಯ ಮನೆಯ ಈಗ ನೆಲಸಮವಾಗಿದೆ.
ಅಯಾನ್ ಪಠಾಣ್ ಎಂಬಾತ ಪಕ್ಕದಲ್ಲೇ ಮನೆಯಲ್ಲಿದ್ದ 23 ವರ್ಷದ ಯುವತಿ ಮೇಲೆ ಕಣ್ಣಿಟ್ಟಿದ್ದ, ಆಕೆಯನ್ನು ಅಪಹರಿಸಿ ತಿಂಗಳುಕಾಲ ಕಾಲ ಹಿಂಸೆ ನೀಡಿದ್ದ. ಕೂಲಿ ಕೆಲಸ ಮಾಡುತ್ತಿದ್ದ ಅಯಾನ್ ಮಹಿಳೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ಆಕೆ ಆಸ್ತಿಯನ್ನು ಹಸ್ತಾಂತರಿಸಲು ನಿರಾಕರಿಸಿದಾಗ ಆಕೆಗೆ ಥಳಿಸಲು ಶುರು ಮಾಡಿದ್ದ.
ಕಣ್ಣು ಮತ್ತು ಬಾಯಿಗೆ ಮೆಣಸಿನ ಪುಡಿಯನ್ನು ತುಂಬಿದ್ದ, ಜತೆಗೆ ಫೆವಿಕ್ವಿಕ್ ಅಂಟಿಸಿದ್ದ.ಈತ ತನ್ನ ಸಂಬಂಧಿಕರ ನೆರವಿನಿಂದ ಮಹಿಳೆಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದ.
ಮತ್ತಷ್ಟು ಓದಿ: ಬೆಲ್ಟ್, ಪೈಪ್ನಿಂದ ಯುವತಿಗೆ ಥಳಿಸಿ, ಗಾಯಕ್ಕೆ ಖಾರದ ಪುಡಿ ಎರಚಿ, ಬಾಯಿಗೆ ಫೆವಿಕ್ವಿಕ್ ಹಾಕಿ ಚಿತ್ರಹಿಂಸೆ
ತೀವ್ರವಾಗಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ಬಂದ ನಂತರ ಅಯಾನ್‌ನನ್ನು ಬಂಧಿಸಲಾಗಿದೆ.
ನಕಲಿ ದಾಖಲೆಗಳನ್ನು ಬಳಸಿ ಸರ್ಕಾರಿ ಜಮೀನಿನಲ್ಲಿ ಅಯಾನ್ ಅವರ ಮನೆ ನಿರ್ಮಿಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿ ನಂತರ ಅದನ್ನು ಕೆಡವಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:47 am, Sun, 21 April 24