ಮದ್ಯದ ಅಮಲಿನಲ್ಲಿ ಶಾಲೆಗೆ ಬಂದು ಮಕ್ಕಳನ್ನು ಓಡಿಸಿ ನೆಲದ ಮೇಲೆ ಮಲಗಿದ ಮುಖ್ಯೋಪಾಧ್ಯಾಯರು

|

Updated on: Jul 08, 2024 | 11:43 AM

ತಮ್ಮ ನಡವಳಿಕೆಯಿಂದ ಮಕ್ಕಳ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನುವ ಕಿಂಚಿತ್ತೂ ಅರಿವಿಲ್ಲದೆ ಮುಖ್ಯೋಪಾಧ್ಯಾಯರೊಬ್ಬರು ಕುಡಿದ ಅಮಲಿನಲ್ಲಿ ಶಾಲೆಗೆ ಬಂದು ಮಕ್ಕಳಲ್ಲಿ ಆತಂಕ ಸೃಷ್ಟಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮದ್ಯದ ಅಮಲಿನಲ್ಲಿ ಶಾಲೆಗೆ ಬಂದು ಮಕ್ಕಳನ್ನು ಓಡಿಸಿ ನೆಲದ ಮೇಲೆ ಮಲಗಿದ ಮುಖ್ಯೋಪಾಧ್ಯಾಯರು
ಶಿಕ್ಷಕರು
Follow us on

ಮುಖ್ಯೋಪಾಧ್ಯಾಯರೊಬ್ಬರು ಮದ್ಯದ ಅಮಿಲಿನಲ್ಲಿ ಶಾಲೆಗೆ ಬಂದು ಮಕ್ಕಳನ್ನು ಓಡಿಸಿ ನೆಲದ ಮೇಲೆ ಮಲಗಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಪಾನಮತ್ತರಾಗಿ ಬಂದಿದ್ದ ಶಿಕ್ಷಕರು ಮಕ್ಕಳಿಗೆ ರಜೆ ಕೊಟ್ಟು ಕಳುಹಿಸಿದ್ದಾರೆ. ಅಲ್ಲೇ ನೆಲದ ಮೇಲೆ ನಿದ್ದೆಗೆ ಜಾರಿದ್ದಾರೆ. ಈ ಘಟನೆ ರೇವಾದಲ್ಲಿ ನಡೆದಿದೆ.

ಮುಖ್ಯೋಪಾಧ್ಯಾಯರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಮುಖ್ಯೋಪಾಧ್ಯಾಯರು ಕುಡಿದು ಶಾಲೆಯೊಳಗೆ ಮಲಗಿದ್ದಾರೆ, ಈ ಮುಖ್ಯೋಪಾಧ್ಯಾಯರ ಹೆಸರು ರಮಾಕಾಂತ್.

ಪಾನಮತ್ತರಾಗಿ ಶಾಲೆಗೆ ಆಗಮಿಸಿ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ಓಡಿಸಿ ಅಲ್ಲಿಯೇ ಹರಡಿದ್ದ ಗೋಣಿಚೀಲದ ಮೇಲೆಯೇ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿಯೋಜನೆಗೊಂಡಿರುವ ಮುಖ್ಯೋಪಾಧ್ಯಾಯ ರಮಾಕಾಂತ್ ವರ್ಮಾ ನಿತ್ಯ ಇದೇ ರೀತಿ ನಡೆದುಕೊಳ್ಳುತ್ತಾರೆ ಎನ್ನಲಾಗಿದೆ.

ಮತ್ತಷ್ಟು ಓದಿ: ಶಿಕ್ಷಣ ಸಚಿವರ ಎಚ್ಚರಿಕೆ ನಂತರವೂ ವಿದ್ಯಾರ್ಥಿಯಿಂದ ಶೌಚಾಲಯ ಸ್ವಚ್ಛಗೊಳಿಸಿದ ದೈಹಿಕ ಶಿಕ್ಷಕ

ಹಲವು ಬಾರಿ ಮುಖ್ಯೋಪಾಧ್ಯಾಯರು ಶಾಲೆಯ ತರಗತಿ ಕೊಠಡಿಯಲ್ಲಿಯೇ ಮಲಗುತ್ತಿದ್ದರು. ಇವರ ನಡವಳಿಕೆಯಿಂದ ಮಕ್ಕಳು ಹಾಗೂ ಅವರ ಪೋಷಕರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿರುವ ಮಹಿಳಾ ಶಿಕ್ಷಕಿಯೂ ಆತಂಕಕ್ಕೊಳಗಾಗಿದ್ದಾರೆ.

ವೈರಲ್ ಆಗಿರುವ ವಿಡಿಯೋ ನಮ್ಮ ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ತಿಳಿಸಿದ್ದಾರೆ. ತನಿಖೆಯ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಶಿಕ್ಷಕರು ಮದ್ಯ ಸೇವಿಸಿ ತರಗತಿಗೆ ಬಂದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.

ಇದರೊಂದಿಗೆ ಶಾಲೆಯಲ್ಲಿ ಯಾವುದೇ ರೀತಿಯ ಅಶಿಸ್ತು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಂತಹವರ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಯಾವುದೇ ಶಿಕ್ಷಕರು ಮದ್ಯಪಾನ ಮಾಡುವ ಚಟ ಹೊಂದಿದ್ದರೆ ಅಂತಹವರು ಶಿಕ್ಷಣ ಇಲಾಖೆಯಲ್ಲಿ ಇರಬಾರದು ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ