ಭೋಪಾಲ್‌ನಲ್ಲಿ (Bhopal) ವ್ಯಕ್ತಿಯೊಬ್ಬನನ್ನು ಕತ್ತಿಗೆ ಪಟ್ಟಿ ಕಟ್ಟಿ ನಾಯಿಯಂತೆ ವರ್ತಿಸುವಂತೆ ಮಾಡಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಮಧ್ಯಪ್ರದೇಶ (Madhya Pradesh) ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಘಟನೆಯ ಕುರಿತು ಭೋಪಾಲ್ ಪೊಲೀಸರು ಆರು ಜನರನ್ನು ಕಸ್ಟಡಿಗೆ ತೆಗೆದುಕೊಂಡಿದ್ದು ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಮೂವರ ವಿರುದ್ಧ ಮತ್ತೊಮ್ಮೆ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ 1980 (National Security Act)ಅನ್ನು ಸಹ ಅನ್ವಯಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಎನ್‌ಐಗೆ ತಿಳಿಸಿದರು.
ಯುವಕನಿಗೆ ಕಿರುಕುಳ ನೀಡಿ ಥಳಿಸಿದ ಆರೋಪ ಹೊತ್ತಿರುವ ಸಮೀರ್ ಖಾನ್ ಎಂಬಾತನ ಮನೆಯನ್ನು ಪೊಲೀಸರ ಸಮ್ಮುಖದಲ್ಲಿ ಸ್ಥಳೀಯ ಆಡಳಿತ ಧ್ವಂಸಗೊಳಿಸಿದೆ. ಸಮೀರ್, ಫೈಜಾನ್ ಮತ್ತು ಸಾಜಿದ್ ಎಂಬ ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
#WATCH | Local administration in the presence of police demolishes the residence of Sameer Khan who is accused of brutally thrashing and harassing a youth in Bhopal #MadhyaPradesh pic.twitter.com/bj4urY0WVm
— ANI MP/CG/Rajasthan (@ANI_MP_CG_RJ) June 19, 2023
ವರದಿಯ ಪ್ರಕಾರ, ವೈರಲ್ ವುಡಿಯೊವನ್ನು ತಿಲಾ ಜಮಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ. ವಿಡಿಯೋದಲ್ಲಿ ವಿಜಯ್ ರಾಮಚಂದಾನಿ ಎಂಬ ವ್ಯಕ್ತಿಯ ಕುತ್ತಿಗೆಗೆ ಬೆಲ್ಟ್ ಹಾಕಲಾಗಿದ್ದು ಆತ ತನ್ನ ಮುಂದೆ ನಿಂತಿದ್ದ ಆರು ಮಂದಿಗೆ ಕ್ಷಮೆಯಾಚಿಸುತ್ತಿರುವುದು ಕಾಣಿಸುತ್ತದೆ. ಈ ಆರು ಮಂದಿ ತನ್ನನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಜೂನ್ 23 ರಂದು ಪಾಟ್ನಾದಲ್ಲಿ ವಿಪಕ್ಷ ಸಭೆ; ಬಿಹಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ನಿತೀಶ್‌ರನ್ನು ಕೇಳಿ: ಅನುರಾಗ್ ಠಾಕೂರ್
ಆರೋಪಿಗಳನ್ನು 4-5 ಗಂಟೆಗಳಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗುವುದು. ನಾವು ಭೋಪಾಲ್‌ನಲ್ಲಿ ಇಂತಹ ಕ್ರಮವನ್ನು ಕೈಗೊಳ್ಳುತ್ತೇವೆ ಅದು ರಾಜ್ಯಾದ್ಯಂತ ಸಂದೇಶವನ್ನು ಕಳುಹಿಸುತ್ತದೆ ಎಂದು ಮಧ್ಯಪ್ರದೇಶದ ಗೃಹ ಸಚಿವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ