ಟಿವಿ9 ನೆಟ್​ವರ್ಕ್ ಎಂಡಿ, ಸಿಇಒ ಬರುಣ್ ದಾಸ್​​ರ ಡ್ಯುಯೊಲಾಗ್ ವಿದ್ ಬರುಣ್ ದಾಸ್​ಗೆ IWMBuzz ಅತ್ಯುತ್ತಮ ಒಟಿಟಿ ಶೋ ಪ್ರಶಸ್ತಿ

ಭಾರತದ ಅತಿದೊಡ್ಡ ಸುದ್ದಿವಾಹಿನಿ ಜಾಲ ‘ಟಿವಿ9 ನೆಟ್​​ವರ್ಕ್​’ನ ಎಂಡಿ, ಸಿಇಒ ಬರುಣ್ ದಾಸ್ ಅವರ ಡ್ಯುಯೊಲಾಗ್ ವಿದ್ ಬರುಣ್ ದಾಸ್​ಗೆ ಪ್ರತಿಷ್ಠಿತ ‘ಐಡಬ್ಲ್ಯುಎಂಬಜ್ ಡಿಜಿಟಲ್ ಅವಾರ್ಡ್ಸ್​​ 2023’ರ ಅತ್ಯುತ್ತಮ ಒಟಿಟಿ ಶೋ ಪ್ರಶಸ್ತಿ ದೊರೆತಿದೆ.

ಟಿವಿ9 ನೆಟ್​ವರ್ಕ್ ಎಂಡಿ, ಸಿಇಒ ಬರುಣ್ ದಾಸ್​​ರ ಡ್ಯುಯೊಲಾಗ್ ವಿದ್ ಬರುಣ್ ದಾಸ್​ಗೆ IWMBuzz ಅತ್ಯುತ್ತಮ ಒಟಿಟಿ ಶೋ ಪ್ರಶಸ್ತಿ
ಬರುಣ್ ದಾಸ್
Follow us
Ganapathi Sharma
|

Updated on:Jun 20, 2023 | 10:34 PM

ಮುಂಬೈ: ಭಾರತದ ಅತಿದೊಡ್ಡ ಸುದ್ದಿವಾಹಿನಿ ಜಾಲ ‘ಟಿವಿ9 ನೆಟ್​​ವರ್ಕ್​’ನ ಎಂಡಿ, ಸಿಇಒ ಬರುಣ್ ದಾಸ್ (Barun Das) ಅವರ ಡ್ಯುಯೊಲಾಗ್ ವಿದ್ ಬರುಣ್ ದಾಸ್​ಗೆ (Duologue With Barun Das) ಪ್ರತಿಷ್ಠಿತ ‘ಐಡಬ್ಲ್ಯುಎಂಬಜ್ ಡಿಜಿಟಲ್ ಅವಾರ್ಡ್ಸ್​​ 2023’ರ (IWMBuzz Digital Awards 2023) ಅತ್ಯುತ್ತಮ ಒಟಿಟಿ ಶೋ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ನಾಯಕತ್ವ, ಯೋಚನಾ ಲಹರಿಗಳ ಮೂಲಕ ನವೀನ ಶೈಲಿಯಲ್ಲಿ ‘ಡ್ಯುಯೊಲಾಗ್ ವಿದ್ ಬರುಣ್ ದಾಸ್’ ಸಂವಾದ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಬರುಣ್ ದಾಸ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಂಬೈಯ ಗೋರೆಗಾಂವ್‌ನ ವೆಸ್ಟಿನ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಬರುಣ್ ದಾಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬರುಣ್ ದಾಸ್ ಅವರ ದೂರದೃಷ್ಟಿಯ ದ್ಯೋತಕವಾಗಿ ‘ನ್ಯೂಸ್ 9 ಪ್ಲಸ್’ ಆರಂಭವಾಯಿತಲ್ಲದೆ, ವಿಶ್ವದ ಮೊದಲ ಸುದ್ದಿ ಒಟಿಟಿ ಪ್ಲಾಟ್‌ಫಾರ್ಮ್ ಆಗಿಯೂ ಪರಿಗಣಿಸಲ್ಪಟ್ಟಿದೆ. ಅವರು ಟಿವಿ9 ನೆಟ್‌ವರ್ಕ್‌ನ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದರ ಜತೆಗೆ, ‘ಡ್ಯುಯೊಲಾಗ್ ವಿದ್ ಬರುಣ್ ದಾಸ್’ ಎಂಬ ಕಾರ್ಯಕ್ರಮದ ವರ್ಚಸ್ವಿ ನಿರೂಪಕರಾಗಿಯೂ ಮಿಂಚಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬರುಣ್ ದಾಸ್, ಇಂಥ ಪ್ರತಿಕ್ರಿಯೆಗಳಿಂದ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಣೆ ದೊರೆಯುತ್ತದೆ ಎಂದು ಹೇಳಿದ್ದಾರೆ. ನ್ಯೂಸ್ 9 ಪ್ಲಸ್​​​​ ವಿಶ್ವದ ಮೊದಲ ನ್ಯೂಸ್ ಒಟಿಟಿ ಆಗಿದ್ದು, ಇದನ್ನು ಪಕ್ಷಪಾತರಹಿತ ಜಾಗತಿಕ ಅಭಿಪ್ರಾಯ ವೇದಿಕೆಯನ್ನಾಗಿ ಮಾಡಬೇಕೆಂಬ ದೃಷ್ಟಿಕೋನ ಹೊಂದಿದ್ದೇನೆ. ಇದು ಬಹಳ ಹಿಂದಿನಿಂದಲೂ ಜಾಗತಿಕ ರಂಗದಲ್ಲಿ ನಮಗೆ ಹೆಚ್ಚು ಅಗತ್ಯವಿರುವ ಉದ್ದೇಶವನ್ನು ಪೂರೈಸಲಿದೆ ಎಂದು ಅವರು ಹೇಳಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಧ್ಯಮ, ಸಿನಿಮಾ ಮತ್ತು ಉದ್ಯಮ ಕ್ಷೇತ್ರದ ಅನೇಕ ಗಣ್ಯರು ಹಾಜರಿದ್ದರು. ಬಾಲಿವುಡ್​​​ನ ಗಣ್ಯರಾದ ಮನೋಜ್ ಬಾಜಪೇಯಿ, ಕಾರ್ತಿಕ್ ಆರ್ಯನ್, ಅಪರಶಕ್ತಿ ಖುರಾನಾ, ಸುನಿಲ್ ಶೆಟ್ಟಿ, ಅದಿತಿ ಹೈದರಿ, ರಾಶಿ ಖನ್ನಾ, ವಾಣಿ ಕಪೂರ್, ಅಲಿ ಫಜಲ್, ಹುಮಾ ಖುರೇಷಿ, ರಾಜ್‌ಕುಮಾರ್ ರಾವ್, ತಮನ್ನಾ ಭಾಟಿಯಾ ಮುಂತಾದ ಅನೇಕ ತಾರೆಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

(ಪ್ರಶಸ್ತಿಯೊಂದಿಗೆ ಬರುಣ್ ದಾಸ್)

ಇದನ್ನೂ ಓದಿ: TV9 Network: ವಿಶ್ವದ ಮೊದಲ ನ್ಯೂಸ್ ಒಟಿಟಿ ನ್ಯೂಸ್9 ಪ್ಲಸ್ ಮತ್ತು ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್​ಗೆ WCRCINTಯಿಂದ ಪ್ರಶಸ್ತಿ, ಗೌರವ

‘ಡ್ಯುಯೊಲಾಗ್ ವಿದ್ ಬರುಣ್ ದಾಸ್’ ಸಂವಾದ ಕಾರ್ಯಕ್ರಮದಲ್ಲಿ ಬರುಣ್ ದಾಸ್ ಅವರು ಮಹಾನ್ ವ್ಯಕ್ತಿಗಳು ಅಥವಾ ದಂತಕಂತೆಗಳ ಜತೆ ಸಂವಾದ ನಡೆಸುತ್ತಾರೆ. ಮಹಾನ್ ವ್ಯಕ್ತಿಗಳು ತಮ್ಮ ಜೀವನ ಪಯಣದ ಅನುಭವವನ್ನು ಹಂಚಿಕೊಳ್ಳುವಂತೆ ಮಾಡುತ್ತಾರೆ.

ಬ್ರಿಟನ್​ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್, ದೇಶದ ಐಟಿ ಕ್ಷೇತ್ರದ ದಿಗ್ಗಜ ಸಂಸ್ಥೆ ಇನ್ಫೋಸಿಸ್​​ನ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ, ಸದ್ಗುರು, ಮಿಥಾಲಿ ರಾಜ್ ಹಾಗೂ ಸುಭಾಷ್ ಚಂದ್ರ ಅವರೂ ‘ಡ್ಯುಯೊಲಾಗ್ ವಿದ್ ಬರುಣ್ ದಾಸ್’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Published On - 9:11 pm, Mon, 19 June 23

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ