TV9 Network: ವಿಶ್ವದ ಮೊದಲ ನ್ಯೂಸ್ ಒಟಿಟಿ ನ್ಯೂಸ್9 ಪ್ಲಸ್ ಮತ್ತು ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್​ಗೆ WCRCINTಯಿಂದ ಪ್ರಶಸ್ತಿ, ಗೌರವ

WCRCINT India's Transformational Awards: ದೇಶದಲ್ಲಿ ಮಹತ್ತರ ಬದಲಾವಣೆ ತರುತ್ತಿರುವ ಟಾಪ್ ಬ್ರ್ಯಾಂಡ್ ಮತ್ತು ಲೀಡರ್​ಗಳನ್ನು WCRCINT ಇಂಡಿಯಾಸ್ ಟ್ರಾನ್ಸ್​ಫಾರ್ಮೇಶನಲ್ ಬ್ರ್ಯಾಂಡ್ಸ್ ಅಂಡ್ ಲೀಡರ್ಸ್ 2023 ಮೂಲಕ ಗುರುತಿಸಿ ಸನ್ಮಾನಿಸುತ್ತದೆ. ಟಿವಿ9 ನೆಟ್ವರ್ಕ್​ನ ನ್ಯೂಸ್9 ಪ್ಲಸ್ ಆ್ಯಪ್ ಮಾಧ್ಯಮ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಿದೆ.

TV9 Network: ವಿಶ್ವದ ಮೊದಲ ನ್ಯೂಸ್ ಒಟಿಟಿ ನ್ಯೂಸ್9 ಪ್ಲಸ್ ಮತ್ತು ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್​ಗೆ WCRCINTಯಿಂದ ಪ್ರಶಸ್ತಿ, ಗೌರವ
ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on:Apr 20, 2023 | 7:53 PM

ನವದೆಹಲಿ: ಭಾರತದ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿರುವ ಮತ್ತು ಪರಿವರ್ತನೆ ತಂದಿರುವ ಭಾರತದ ಅತಿದೊಡ್ಡ ನ್ಯೂಸ್ ನೆಟ್ವರ್ಕ್ ಟಿವಿ9 ನೆಟ್ವರ್ಕ್​ಗೆ WCRCINT (ವರ್ಲ್ಡ್ ಕನ್ಸಲ್ಟಿಂಗ್ ಅಂಡ್ ರಿಸರ್ಚ್ ಕಾರ್ಪೊರೇಶನ್ ಇಂಟರ್​ನ್ಯಾಷನಲ್) ನಿಂದ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಸಿಕ್ಕಿವೆ. ಟಿವಿ9 ನೆಟ್ವರ್ಕ್​ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರಿಗೆ ಭಾರತದ ಪರಿವರ್ತನಾತ್ಮಕ ನಾಯಕ (India’s Transformational Leader 2023) ಎಂಬ ಪ್ರಶಸ್ತಿ ಕೊಡಲಾಗಿದೆ. ಹಾಗೆಯೇ, ಟಿವಿ9 ನೆಟ್ವರ್ಕ್​ನಿಂದ ಆರಂಭಿಸಲಾಗಿರುವ ವಿಶ್ವದ ಮೊದಲ ನ್ಯೂಸ್ ಒಟಿಟಿ ಪ್ಲಾಟ್​ಫಾರ್ಮ್ ಆದ ನ್ಯೂಸ್9 ಪ್ಲಸ್​ಗೆ ಭಾರತದ ಪರಿವರ್ತನಾತ್ಮಕ ಬ್ರ್ಯಾಂಡ್ (India’s Transformational Brand 2023) ಎಂದು ಗುರುತಿಸಿ ಗೌರವಿಸಲಾಗಿದೆ.

ಟಿವಿ9 ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ಮಾಧ್ಯಮ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಮತ್ತು ಅವರ ಅಸಾಧಾರಣ ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿ ಕೊಡಲಾಗಿದೆ. ಬರುಣ್ ದಾಸ್ ಅವರ ನಾಯಕತ್ವದಲ್ಲಿ ಟಿವಿ9 ನೆಟ್ವರ್ಕ್ ದಿನದಿಂದ ದಿನಕ್ಕೆ ಬಲಯುತವಾಗಿ ಬೆಳೆಯುತ್ತಿದೆ. ಭಾರತ ಹಾಗೂ ಇತರೆಡೆ ಕೋಟ್ಯಂತರ ವೀಕ್ಷಕರಿಗೆ ಸುದ್ದಿ ಮತ್ತು ಮಾಹಿತಿಯನ್ನು ತಲುಪಿಸುತ್ತಿದೆ. ಟಿವಿ9 ನೆಟ್ವರ್ಕ್ ಅನ್ನು ಪತ್ರಿಕೋದ್ಯಮದ ಶ್ರೇಷ್ಠತೆ, ವಿಶ್ವಾಸಾರ್ಹತೆ, ಬದ್ಧತೆ ಮತ್ತು ನಾವೀನ್ಯತೆಯನ್ನು ಉಳಿಸಿಕೊಂಡು ದೇಶದ ಮುಂಚೂಣಿಯ ಸುದ್ದಿ ಜಾಲವಾಗಿ ಪರಿವರ್ತನೆ ಮಾಡುವ ಕಾರ್ಯದಲ್ಲಿ ಬರುಣ್ ದಾಸ್ ಅವರ ಪಾತ್ರ ಮಹತ್ತರವಾದುದು.

2023 ಏಪ್ರಿಲ್ 18ರಂದು ನವದೆಹಲಿಯ ಎರೋಸ್ ಹೊಟೇಲ್​ನಲ್ಲಿ ಈ ಪ್ರಶಸ್ತಿ ಸಮಾರಂಭ ನಡೆಯಿತು. ಪ್ರಶಸ್ತಿ ಸಿಕ್ಕ ಬಳಿಕ ಮಾತನಾಡಿದ ಟಿವಿ9 ನೆಟ್ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, ‘WCRCINTನಿಂದ ನನಗೆ ಭಾರತದ ಪರಿವರ್ತನಾತ್ಮಕ ನಾಯಕ 2023 ಪ್ರಶಸ್ತಿ ಸಿಕ್ಕಿರುವುದು ಖುಷಿ ತಂದಿದೆ. ವೇಗದಲ್ಲಿ ಮುನ್ನುಗ್ಗುವ ಟಿವಿ9 ನೆಟ್ವರ್ಕ್​ನಂತಹ ದೊಡ್ಡ ಹಡಗಿನಲ್ಲಿ ಪ್ರತಿಯೊಂದು ನಟ್ಟು, ಬೋಲ್ಟು ಬಹಳ ಮುಖ್ಯ. ಟಿವಿ9 ನೆಟ್ವರ್ಕ್​ನ ಅದ್ಭುತ ಬೆಳವಣಿಗೆಗೆ ಕಾರಣವಾದ ಪ್ರತಿಯೊಬ್ಬ ಉದ್ಯೋಗಿಯ ಒಟ್ಟಾರೆ ಪ್ರಯತ್ನದ ಫಲವಾಗಿ ಈ ಪ್ರಶಸ್ತಿ ಬಂದಿದೆ. ವಿನೂತನ ಪ್ರಯೋಗವೆನಿಸಿದ ನ್ಯೂಸ್9 ಪ್ಲಸ್ ಅನ್ನು 2023ರ ಪರಿವರ್ತನಾತ್ಮಕ ನ್ಯೂಸ್ ಬ್ರ್ಯಾಂಡ್ ಎಂದು ಗುರುತಿಸಿರುವುದು ನನಗೆ ಖುಷಿ ತಂದಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿDuologue With Barun Das: ನಾರಾಯಣ ಮೂರ್ತಿ ದಂಪತಿ ಜೊತೆ ಉದ್ಯಮ, ಜೀವನ ಪಯಣ ಕುರಿತು ಮುಕ್ತ ಮಾತು

ಇಂಡಿಯಾಸ್ ಟ್ರಾನ್ಸ್​ಫಾರ್ಮೇಶನಲ್ ಲೀಡರ್ 2023 ಪ್ರಶಸ್ತಿಗೆ ಬರುಣ್ ದಾಸ್ ಅವರನ್ನು ಯಾಕೆ ಆಯ್ಕೆ ಮಾಡಲಾಯಿತು ಎಂಬ ಬಗ್ಗೆ WCRC ಮುಖ್ಯ ಸಂಪಾದಕ ಅಭಿಮನ್ಯು ಘೋಷ್ ಅವರು ಕಾರಣಗಳನ್ನು ನೀಡಿದರು. ‘ಬರುಣ್ ದಾಸ್ ಭಾರತೀಯ ಮಾಧ್ಯಮ ಕ್ಷೇತ್ರದ ದಂತಕಥೆ. ಅವರ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಮೀಡಿಯಾ ನೆಟ್ವರ್ಕ್​ಗಳನ್ನು ಪರಿವರ್ತಿಸಿ ಗಮನ ಸೆಳೆದಿದ್ದಾರೆ. ಇಡೀ ಉದ್ಯಮದಲ್ಲಿ ಅತ್ಯಂತ ಭರವಸೆಯ ಹೆಸರುಗಳಲ್ಲಿ ಅವರದ್ದು ಒಂದು. ನಾವು ಮಾಡಿದ ಎಲ್ಲಾ ಸಂಶೋಧನೆಯಲ್ಲಿ ಕಂಡುಕೊಂಡ ಸಂಗತಿ ಎಂದರೆ ಮಿಸ್ಟರ್ ದಾಸ್ ಅವರು ಸಾರ್ವಕಾಲಿಕವಾಗಿ ಭಾರತದ ಅತ್ಯಂತ ವಿಶ್ವಾಸಾರ್ಹ ಮಾಧ್ಯಮ ವ್ಯಕ್ತಿತ್ವಗಳ ಸಾಲಿನಲ್ಲಿ ನಿಲ್ಲುತ್ತಾರೆ’ ಎಂದು ಡಬ್ಲ್ಯೂಸಿಆರ್​ಸಿ ಮುಖ್ಯ ಸಂಪಾದಕರು ಅಭಿಪ್ರಾಯಪಟ್ಟಿದ್ದಾರೆ.

Ideasfest awards

ಟ್ರಾನ್ಸ್​ಫಾರ್ಮೇಶನ್ ಲೀಡರ್ಸ್ ಅಂಡ್ ಬ್ರ್ಯಾಂಡ್ಸ್

ಜನಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ರೀತಿಯಲ್ಲಿ ತಮ್ಮ ಲೀಡರ್​ಶಿಪ್, ಬ್ರ್ಯಾಂಡಿಂಗ್, ಪ್ರಾಡಕ್ಟ್ ಇನೋವೇಶನ್ ಮೂಲಕ ದೇಶದಲ್ಲಿ ಗಮನಾರ್ಹ ಬದಲಾವಣೆ ತರುತ್ತಿರುವ ಭಾರತದ ಅತ್ಯುತ್ತಮ ಬ್ರ್ಯಾಂಡ್ ಮತ್ತು ನಾಯಕರನ್ನು ಗುರುತಿಸಿ ಗೌರವಿಸುವ ಪ್ರತಿಷ್ಠಿತ ಪ್ಲಾಟ್​ಫಾರ್ಮ್ ಎನಿಸಿದೆ WCRCINT ಇಂಡಿಯಾಸ್ ಟ್ರಾನ್ಸ್​ಫಾರ್ಮೇಶನಲ್ ಬ್ರ್ಯಾಂಡ್ಸ್ ಅಂಡ್ ಲೀಡರ್ಸ್ 2023.

WCRCINTಯಿಂದ ಸನ್ಮಾನಿತವಾಗಿರುವ ನ್ಯೂಸ್9 ಪ್ಲಸ್ ತನ್ನ ಹೊಸತನಕ್ಕೆ ಕೈಗನ್ನಡಿಯಾಗಿದೆ. ಇದು ವಿಶ್ವದ ಮೊದಲ ನ್ಯೂಸ್ ಒಟಿಟಿ ಪ್ಲಾಟ್​ಫಾರ್ಮ್ ಆಗಿದೆ. ಬಹಳ ಸೂಕ್ಷ್ಮವೆನಿಸುವ ವರದಿ ಮತ್ತು ಸುದ್ದಿ ಡಾಕ್ಯುಮೆಂಟರಿಗಳನ್ನು ಒಟಿಟಿ ಪರಿಸರದಲ್ಲಿ ಜನರಿಗೆ ಉಚಿತವಾಗಿ ಕೊಡುತ್ತಿದೆ. ಸತ್ಯಾಂಶ ಆಧಾರಿತವಾಗಿ ಮತ್ತು ಪತ್ರಿಕೋದ್ಯಮದ ಬದ್ಧತೆಯ ಪ್ರಕಾರವಾಗಿ ಬಹಳ ವಿವರವಾದ ವರದಿಗಳನ್ನು ಈ ಪ್ಲಾಟ್​ಫಾರ್ಮ್​ನಲ್ಲಿ ಕಾಣಬಹುದು.

ಇದನ್ನೂ ಓದಿSadhguru Interview: ಭಾರತದ ಭವಿಷ್ಯ, ಸಂಕೀರ್ಣತೆ, ಅಮಲು, ಸಂತೋಷ, ಯುವ ಶಕ್ತಿ ಬಗ್ಗೆ ಸದ್ಗುರು ವಿಚಾರ; ನ್ಯೂಸ್9 ಪ್ಲಸ್ ವಿಶೇಷ ಸಂದರ್ಶನಗಳು

ನ್ಯೂಸ್9 ಪ್ಲಸ್ ಆ್ಯಪ್ ಬಗ್ಗೆ ಬಹಳ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಟ ಮತ್ತು ನಿರ್ಮಾಪಕ ಅನುಪಮ್ ಖೇರ್ ಮಾತನಾಡಿ, ‘ನ್ಯೂಸ್ ಬ್ರಾಡ್​ಕ್ಯಾಸ್ಟಿಂಗ್ ವೇಗವಾಗಿ ಪರಿವರ್ತನೆ ಆಗುತ್ತಿರುವ ಕಾಲಘಟ್ಟದಲ್ಲಿ ನ್ಯೂಸ್9 ಪ್ಲಸ್ ಬಹಳ ಸರಳವಾಗಿ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಸುದ್ದಿಗಳನ್ನು ಪ್ರಸ್ತುಪಡಿಸುತ್ತಿದೆ’ ಎಂದು ತಿಳಿಸಿದರು.

‘ಟಿವಿ9 ನೆಟ್ವರ್ಕ್ ಬಹಳ ಒಳ್ಳೆಯ ಸೆಗ್ಮೆಂಟ್ ಅನ್ನು ಆರಿಸಿಕೊಂಡಿದೆ. ಇದು ಬಹಳ ಚೆನ್ನಾಗಿ ಮುಂದುವರಿಯುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನ್ಯೂಸ್9 ಪ್ಲಸ್​ಗೆ ನನ್ನ ಬೆಸ್ಟ್ ವಿಶಸ್. ಈ ಆ್ಯಪ್ ಅದ್ಭುತವಾಗಿ ರೂಪುಗೊಳ್ಳಲು ತಂಡ ನಿಜಕ್ಕೂ ಉತ್ತಮ ಕೆಲಸ ಮಾಡುತ್ತಿದೆ. ಈ ಆ್ಯಪ್ ಸುದ್ದಿ ಮಾಧ್ಯಮದಲ್ಲಿ ಗೇಮ್​ಚೇಂರ್ ಆಗಬಹುದು’ ಎಂದು ಮೇಕ್​ಮೈಟ್ರಿಪ್ ಡಾಟ್ ಕಾಮ್​ನ ಸಂಸ್ಥಾಪಕ ದೀಪ್ ಕಾಲ್ರಾ ಹೇಳಿದರು.

ಇನ್ನು, ಸಿನಿಮಾ ನಿರ್ದೇಶಕ, ನಿರ್ಮಾಪಕ ಆರ್ ಬಾಲ್ಕಿ ನ್ಯೂಸ್9 ಪ್ಲಸ್​ನ ವಿಶೇಷ ವರದಿಗಳ ಬಗ್ಗೆ ಹೊಗಳಿಕೆ ನೀಡಿದರು. ‘ನ್ಯೂಸ್9 ಪ್ಲಸ್ ವಿಶ್ವದ ಮೊದಲ ನ್ಯೂಸ್ ಒಟಿಟಿ. ವೈವಿಧ್ಯಮಯ ವಿಷಯಗಳು, ಉತ್ತಮ ಪ್ರೊಡಕ್ಷನ್​ಗಳ ಮೂಲಕ ಒಂದು ಸುದ್ದಿಯ ಪರಿಧಿಗಿಂತ ಆಚೆ ಜನರನ್ನು ಕರೆದೊಯ್ಯುತ್ತದೆ. ಈ ವರದಿಗಳಲ್ಲಿ ಪ್ರಸ್ತುತಪಡಿಸಲಾಗುತ್ತಿರುವ ರೀತಿಯು ದೀರ್ಘಕಾಲ ಅದರ ಪ್ರಸ್ತುತತೆಯನ್ನು ಕಾಪಾಸುತ್ತದೆ. ಅವರು ಪ್ರಸ್ತುತಪಡಿಸುವ ರೀತಿ ನನಗೆ ಬಹಳ ಇಷ್ಟ’ ಎಂದು ಆರ್ ಬಾಲ್ಕಿ ಅಭಿಪ್ರಾಯಪಟ್ಟರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 20 April 23

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ