ಚೆನಾಬ್ ಸೇತುವೆಯ ಚಿತ್ರ ನೋಡಿ ವ್ಹಾವ್ ಎಂದ ಆ್ಯಪಲ್ ಸಿಇಒ ಟಿಮ್ ಕುಕ್; ವಿಡಿಯೊ ಶೇರ್ ಮಾಡಿದ ಅಶ್ವಿನಿ ವೈಷ್ಣವ್

ಈ ಸೇತುವೆ ಉತ್ತರ ಭಾರತದ ರಾಜ್ಯವಾದ ಕಾಶ್ಮೀರನ್ನು ಸಂಪರ್ಕಿಸುತ್ತದೆ. ಈ ಸೇತುವೆ ಐಫೆಲ್ ಟವರ್​​ಗಿಂತ 30 ಮೀಟರ್ ಎತ್ತರವಿದೆ. ಇದು ಭಾರತದಲ್ಲೇ ನಿರ್ಮಾಣವಾಗಿದ್ದು, ನಾವು ಇತ್ತೀಚೆಗೆ ಅದರ ಮೇಲೆ ರೈಲ್ವೆ ಹಳಿಯನ್ನು ಮಾಡಿದ್ದೇವೆ.

ಚೆನಾಬ್ ಸೇತುವೆಯ ಚಿತ್ರ ನೋಡಿ ವ್ಹಾವ್ ಎಂದ ಆ್ಯಪಲ್ ಸಿಇಒ ಟಿಮ್ ಕುಕ್; ವಿಡಿಯೊ ಶೇರ್ ಮಾಡಿದ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್- ಟಿಮ್ ಕುಕ್
Follow us
ರಶ್ಮಿ ಕಲ್ಲಕಟ್ಟ
|

Updated on:Apr 20, 2023 | 8:26 PM

ಕೇಂದ್ರ ರೈಲ್ವೆ ಹಾಗೂ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಆ್ಯಪಲ್ ಸಿಇಒ ಟಿಮ್ ಕುಕ್(Apple CEO Tim Cook) ಜತೆಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೊ ಮೇಡ್ ಇನ್ ಇಂಡಿಯಾ  ಆ್ಯಪಲ್ ಫೋನ್​​ನಿಂದ (Iphone) ಶೂಟ್ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ವಿಡಿಯೊದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರು ಟಿಮ್ ಕುಕ್ ಅವರಿಗೆ ಫೋಟೊವೊಂದನ್ನು ತೋರಿಸುತ್ತಿದ್ದಾರೆ. ಅದು ಚೆನಾಬ್ ಸೇತುವೆಯ ಫೋಟೊ. ಈ ಸೇತುವೆ ಉತ್ತರ ಭಾರತದ ರಾಜ್ಯವಾದ ಕಾಶ್ಮೀರನ್ನು ಸಂಪರ್ಕಿಸುತ್ತದೆ. ಈ ಸೇತುವೆ ಐಫೆಲ್ ಟವರ್​​ಗಿಂತ 30 ಮೀಟರ್ ಎತ್ತರವಿದೆ. ಇದು ಭಾರತದಲ್ಲೇ ನಿರ್ಮಾಣವಾಗಿದ್ದು, ನಾವು ಇತ್ತೀಚೆಗೆ ಅದರ ಮೇಲೆ ರೈಲ್ವೆ ಹಳಿಯನ್ನು ಮಾಡಿದ್ದೇವೆ. ಡಿಸೆಂಬರ್ ತಿಂಗಳಲ್ಲಿ  ಇದರ ಮೇಲೆ ವಂದೇ ಭಾರತ್ ರೈಲು ಸಂಚರಿಸಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದಾಗ, Oh Wow, That;s special Wow ಎಂದು ಟಿಮ್ ಕುಕ್ ಪ್ರತಿಕ್ರಿಯಿಸಿದ್ದಾರೆ.

120 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಚೆನಾಬ್ ಸೇತುವೆಯು ವಿಶ್ವದ ಅತಿ ಎತ್ತರದ ರೈಲು ಸೇತುವೆಯಾಗಿದೆ. ಚೆನಾಬ್ ನದಿಯ ಮೇಲೆ 359 ಮೀಟರ್ (1,178 ಅಡಿ) ಎತ್ತರದಲ್ಲಿ ನಿಂತಿರುವ ಈ ಸೇತುವೆಯು ಜಮ್ಮು-ಉದಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಒಂದು ಭಾಗವಾಗಿದೆ. ಸೇತುವೆಯು 1,315 ಮೀಟರ್ (4,314 ಅಡಿ) ಉದ್ದವಿದ್ದು, ಹೆಚ್ಚಿನ ಭೂಕಂಪನ ಚಟುವಟಿಕೆ, ವಿಪರೀತ ತಾಪಮಾನ ಮತ್ತು ಬಲವಾದ ಗಾಳಿಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಭಾರತದ ಚಿನಾಬ್ ರೈಲ್ವೇ ಸೇತುವೆಯು ನದಿ ನೀರಿನ ಮಟ್ಟಕ್ಕಿಂತ 359 ಮೀಟರ್ ಎತ್ತರದಲ್ಲಿದೆ. ಈ ರೈಲ್ವೇ ಮೇಲ್ಸೇತುವೆಯು ಗಂಟೆಗೆ 266 ಕಿಲೋಮೀಟರ್ ವೇಗದ ಬಿರುಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 17 ಪಿಲ್ಲರ್ ಗಳನ್ನು ನಿರ್ಮಿಸಲಾಗಿದೆ. 28,660 ಮೆಟ್ರಿಕ್ ಟನ್ ಸ್ಟೀಲ್ ಅನ್ನು ಬಳಸಲಾಗಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲ್ವೇ ಬ್ರಿಡ್ಜ್ ಮೇಲೆ ರೈಲುಗಳು ಸಂಚರಿಸಬಹುದು.

ಇದನ್ನೂ ಓದಿ: ಆರಾಧ್ಯ ಬಚ್ಚನ್ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿದ ಯುಟ್ಯೂಬ್ ಚಾನೆಲ್​​​ಗೆ ನಿರ್ಬಂಧ; ವಿಡಿಯೊ ತೆಗೆದು ಹಾಕಲು ಗೂಗಲ್​​ಗೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್

ದೆಹಲಿಯಲ್ಲಿ ಆ್ಯಪಲ್ ಸ್ಟೋರ್ ತೆರೆದ ಟಿಮ್ ಕುಕ್

ದೆಹಲಿಯಲ್ಲಿ ಗುರುವಾರ ಆ್ಯಪಲ್ ಸ್ಟೋರ್ ಉದ್ಘಾಟನೆಯಾಗಿದೆ. ಮಂಗಳವಾರ ಭಾರತದ ಮೊದಲ ಆಯಪ್ ಸ್ಟೋರ್ ಮುಂಬೈನಲ್ಲಿ ಓಪನ್ ಆಗಿತ್ತು. ಆ್ಯಪಲ್ ಸಿಇಒ ಟಿಮ್ ಕುಕ್ ಅವರು ದೆಹಲಿಯ ಬಹು ನಿರೀಕ್ಷಿತ ಮೊದಲ ಆ್ಯಪಲ್ ಸ್ಟೋರ್ ಅನ್ನು ಸಾಕೇತ್‌ನಲ್ಲಿ ಗುರುವಾರ ಉದ್ಘಾಟಿಸಿದರು. ಬೆಳಿಗ್ಗೆ 10 ಗಂಟೆಗೆ ದೆಹಲಿಯಲ್ಲಿ ಟಿಮ್ ಕುಕ್  ಉದ್ಘಾಟಿಸುತ್ತಿದ್ದಂತೆ, ಅವರನ್ನು ನೋಡಲು ಜನರು ಕಿಕ್ಕಿರಿದು ನಿಂತಿದ್ದರು,

ಐಫೋನ್ ತಯಾರಕರ ಮೊದಲ ಅಧಿಕೃತ ಸ್ಟೋರ್ ಉದ್ಘಾಟನಾ ಸಮಾರಂಭದಲ್ಲಿ ಕುಕ್ ಗ್ರಾಹಕರನ್ನು ನಮಸ್ತೆ ಎಂದು ಹೇಳಿ ಸ್ವಾಗತಿಸಿದರು. Apple BKC (ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್, ಮುಂಬೈ) ಅನ್ನು ಏಪ್ರಿಲ್ 18 ರಂದು ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ತೆರೆಯಲಾಯಿತು. ದೆಹಲಿಯ ಮಳಿಗೆಯು ಸಾಕೇತ್‌ನಲ್ಲಿರುವ ಸೆಲೆಕ್ಟ್‌ಸಿಟಿ ವಾಕ್ ಮಾಲ್‌ನ ಮೊದಲ ಮಹಡಿಯಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Thu, 20 April 23

‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!