ವಿವಾಹ ವಿಚ್ಛೇದನ ಪಡೆದ ಪತಿಯ ಕುಟುಂಬದ ಸದಸ್ಯನನ್ನು ಹೆಗಲಲ್ಲಿ ಹೊತ್ತು ನಡೆದ ಮಹಿಳೆ, ಅನ್ಯ ಪುರುಷನೊಂದಿಗಿನ ಸಂಬಂಧಕ್ಕೆ ಈ ಶಿಕ್ಷೆ!

Madhya Pradesh: ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಅನ್ಯ ಪುರುಷನ ಜತೆ ಸಂಬಂಧ ಹೊಂದಿದ್ದಕ್ಕಾಗಿ ಮಾಜಿ ಪತಿಯ ಕುಟುಂಬದ ಸದಸ್ಯರೊಬ್ಬರನ್ನು ಹೆಗಲಲ್ಲಿ ಹೊತ್ತು ನಡೆಯುವಂತೆ ಮಹಿಳೆಗೆ ಶಿಕ್ಷೆ ನೀಡಲಾಗಿದೆ .

ವಿವಾಹ ವಿಚ್ಛೇದನ ಪಡೆದ ಪತಿಯ ಕುಟುಂಬದ ಸದಸ್ಯನನ್ನು ಹೆಗಲಲ್ಲಿ ಹೊತ್ತು ನಡೆದ ಮಹಿಳೆ, ಅನ್ಯ ಪುರುಷನೊಂದಿಗಿನ ಸಂಬಂಧಕ್ಕೆ ಈ ಶಿಕ್ಷೆ!
ಬಾಲಕನನ್ನು ಹೆಗಲಲ್ಲಿ ಹೊತ್ತು ನಡೆದ ಮಹಿಳೆ
Follow us
ರಶ್ಮಿ ಕಲ್ಲಕಟ್ಟ
|

Updated on:Feb 16, 2021 | 11:58 AM

ಭೋಪಾಲ್: ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ವಿವಾಹ ವಿಚ್ಛೇದನ ಪಡೆದಿರುವ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಅನ್ಯ ಪುರುಷನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಆಕೆಯ ಮಾಜಿ ಪತಿಯ ಕುಟುಂಬದ ಸದಸ್ಯರೊಬ್ಬರನ್ನು ಹೆಗಲಲ್ಲಿ ಹೊತ್ತು ನಡೆಯುವ ಶಿಕ್ಷೆ ನೀಡಲಾಗಿದೆ.

ಮಾಜಿ ಪತಿಯ ಕುಟುಂಬದ ಸದಸ್ಯನಾದ ಬಾಲಕನೊಬ್ಬನನ್ನು ಹೆಗಲಲ್ಲಿ ಹೊತ್ತು ಈ ಮಹಿಳೆ  3 ಕಿಮೀ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.  ಆಕೆಯ ಜತೆ ಗ್ರಾಮದ ಜನರು ಬೆತ್ತ ಮತ್ತು ಕ್ರಿಕೆಟ್ ಬ್ಯಾಟ್ ಹಿಡಿದು ನಡೆಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಕೆಲವರು ಆಕೆಯನ್ನು ಲೇವಡಿ ಮಾಡಿ ನಗುತ್ತಿರುವ ದನಿಯೂ ವಿಡಿಯೊ ಕೇಳಿಸುತ್ತಿದೆ.

ಗುನಾ ಜಿಲ್ಲೆಯ ಸಾಗೈ ಮತ್ತು ಬಾನ್ಸ್ ಖೇಡಿ ಗ್ರಾಮದ ನಡುವೆ ಇರುವ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆಯ ದೂರು ಪ್ರಕಾರ ಆಕೆ ಪತಿಗೆ ವಿವಾಹ ವಿಚ್ಛೇದನ ನೀಡಿದ್ದರು. ಇಬ್ಬರ ಸಮ್ಮತಿಯಿಂದಲೇ ವೈವಾಹಿಕ ಸಂಬಂಧದಿಂದ ಹೊರಬಂದಿದ್ದು ಆನಂತರ ಬೇರೆ ವ್ಯಕ್ತಿಯೊಂದಿಗೆ ಈಕೆ ಸಂಬಂಧ ಹೊಂದಿದ್ದರು. ಕಳೆದ ವಾರ ಮಾಜಿ ಪತಿಯ ಕುಟುಂಬದವರು ಮತ್ತು ಗ್ರಾಮದ ಕೆಲವು ಜನರು ಬಂದು ಆಕೆಯನ್ನು ಮನೆಯಿಂದ ಅಪಹರಿಸಿ ಕಿರುಕುಳ ನೀಡಿದ್ದಾರೆ.

ಇದನ್ನೂ ಓದಿ: ‘ಮಹಿಳೆಯರನ್ನ ರಕ್ಷಿಸ್ತೀವಿ ಅಂತಾ ಪ್ರಮಾಣ ಮಾಡಿದವ್ರು.. ಆಕೆಗೆ ಮುಟ್ಟಬಾರ್ದ ಜಾಗದಲ್ಲಿ ಕಿರುಕುಳ ನೀಡಿದ್ರು’

ಮಧ್ಯಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲ ಬಾರಿ ಅಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲಿ ಅನ್ಯ ಪುರುಷನೊಂದಿಗೆ ಸಂಬಂಧ ಹೊಂದಿದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ಇದೇ ರೀತಿಯ ದೌರ್ಜನ್ಯ ನಡೆದಿತ್ತು.2019 ಏಪ್ರಿಲ್ ತಿಂಗಳಲ್ಲಿ ಬುಡಕಟ್ಟು ಸಮುದಾಯದವರಿರುವ ಝಭುವಾ ಜಿಲ್ಲೆಯಲ್ಲಿ ಪ್ರಿಯಕರನ ಜತೆ ಓಡಿ ಹೋದ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರು, ಆಕೆಯ ಗಂಡನನ್ನು ಹೆಗಲಲ್ಲಿ ಹೊತ್ತು ನಡೆಯುುವ ಶಿಕ್ಷೆ ನೀಡಲಾಗಿತ್ತು.

Published On - 11:51 am, Tue, 16 February 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್