FASTag ಟೋಲ್​ಗಳಲ್ಲಿ ಫಾಸ್ಟ್​​ಟ್ಯಾಗ್​ ಕಡ್ಡಾಯ.. ಇಲ್ಲದಿದ್ರೆ ಕಟ್ಟಬೇಕಾಗುತ್ತೆ ದುಬಾರಿ ಹಣ

FASTag ಟೋಲ್​ಗಳಲ್ಲಿ ಫಾಸ್ಟ್​​ಟ್ಯಾಗ್​ ಕಡ್ಡಾಯ.. ಇಲ್ಲದಿದ್ರೆ ಕಟ್ಟಬೇಕಾಗುತ್ತೆ ದುಬಾರಿ ಹಣ
ಟೋಲ್​ಗಳಲ್ಲಿ ಫಾಸ್ಟ್ಯಾಗ್​ ಕಡ್ಡಾಯ ಶುಲ್ಕ ಅಳವಡಿಸಲಾಗಿದೆ

ಎಲ್ಲಿಗಾದ್ರೂ ಹೋಗೋ ಪ್ಲ್ಯಾನ್​ ಹಾಕ್ಕೊಂಡಿದ್ದೀರಾ.. ಹೈವೇಗಳಲ್ಲಿ ವೆಹಿಕಲ್ ತಗೊಂಡು ಹೋಗ್ತಿದ್ದೀರಾ. ಹಾಗಿದ್ರೆ, ನಿಮ್ಮ ವೆಹಿಕಲ್​​ಗೆ ಫಾಸ್ಟ್​​​​​​​​ಟ್ಯಾಗ್​ ರಿಜಿಸ್ಟಾರ್​ ಮಾಡಿಸಿಕೊಳ್ಳಿ. ಯಾಕಂದ್ರೆ, ಫಾಸ್ಟ್​​ಟ್ಯಾಗ್​​​ ಇರದಿದ್ರೆ, ಟೋಲ್​ಗಳಲ್ಲಿ ದುಡ್ಡು ಕಟ್ಟೇ ಸುಸ್ತಾಗಿ ಹೋಗ್ತಿರಿ.

Ayesha Banu

|

Feb 16, 2021 | 7:21 AM

ಫಾಸ್ಟ್​​​​ಟ್ಯಾಗ್​.. ಫಾಸ್ಟ್​​ ಟ್ಯಾಗ್​​.. ಫಾಸ್ಟ್​​ಟ್ಯಾಗ್​.. ಮಧ್ಯರಾತ್ರಿಯಿಂದಲೇ ಫಾಸ್ಟ್​​​ಟ್ಯಾಗ್​​​ ಕಂಪಲ್ಸರಿ. ಫಾಸ್ಟ್​​ಟ್ಯಾಗ್​ ಇಲ್ಲದಿದ್ರೆ, ವಾಹನಗಳು ಈ ರೀತಿ ಕ್ಯೂನಲ್ಲಿ ನಿಲ್ಲಬೇಕಾಗುತ್ತೆ. ದುಬಾರಿ ಹಣ ಕಟ್ಟಿ ಹೈವೇಯಲ್ಲಿ ಸಂಚಾರ ಮಾಡ್ಬೇಕಾಗುತ್ತೆ. ಯಾಕಂದ್ರೆ, ಮಧ್ಯರಾತ್ರಿಯಿಂದಲೇ ಶೇ.100ರಷ್ಟು ಫಾಸ್ಟ್​ಟ್ಯಾಗ್​ ವ್ಯವಸ್ಥೆ ಜಾರಿಗೆ ಬಂದಿದೆ.

ಹೈವೇ ಟೋಲ್​ಗಳ ಕ್ಯೂನಲ್ಲಿ ನಿಂತೇ ಟೈಮ್​ ವ್ಯರ್ಥವಾಗುತ್ತೆ. ಪೆಟ್ರೋಲ್ ಕೂಡ ಪೋಲಾಗ್ತಿದೆ. ಅಲ್ಲದೆ, ನಗದು ವ್ಯವಹಾರವನ್ನ ತಡೆಯಬೇಕು. ಹೀಗಾಗೇ, ಕೇಂದ್ರ ಸರ್ಕಾರ ಟೋಲ್​​​​​​​ಗೇಟ್​ಗಳಲ್ಲಿ ಫಾಸ್ಟ್​ಟ್ಯಾಗ್​ ಅಳವಡಿಕೆ ಕಡ್ಡಾಯಗೊಳಿಸಿತ್ತು. ಮಧ್ಯರಾತ್ರಿಯಿಂದಲೇ ಫಾಸ್ಟ್​ಟ್ಯಾಗ್​ ವ್ಯವಸ್ಥೆ ಜಾರಿಯಾಗಿದ್ದು, ಒಂದು ವೇಳೆ ವೆಹಿಕಲ್ ಮೇಲೆ ಫಾಸ್ಟ್​​ಟ್ಯಾಗ್​ ಇರದಿದ್ರೆ, ಟೋಲ್​ ಸುಂಕ ಡಬಲ್ ಕಟ್ಟಬೇಕಾಗುತ್ತೆ.

ಬೆಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿರುವ ಸಾದಹಳ್ಳಿ ಟೋಲ್ ಬಳಿ 190 ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಆದ್ರೆ ಈ ಮೊದಲು ಟೋಲ್‌ನಲ್ಲಿ 95 ರೂಪಾಯಿ ಶುಲ್ಕವಿತ್ತು. ನೆಲಮಂಗಲ ಬಳಿಯ ನವಯುಗ ಟೋಲ್‌ನಲ್ಲಿ ಕಾರು, ಜೀಪ್‌ಗಳು ₹40, ಎಲ್‌ಸಿವಿ 70 ರೂಪಾಯಿ, ಟ್ರಕ್, ಬಸ್ 150, ಮಲ್ಟಿ ಆ್ಯಕ್ಸಲ್ ವ್ಹೀಲ್ಸ್ 250 ರೂ. ಪಡೆಯುತ್ತಿದ್ದಾರೆ. ಈ ಹಿಂದೆ ಇದರಲ್ಲಿ ಅರ್ಧದಷ್ಟು ಹಣ ಪಾವತಿಸುತ್ತಿದ್ದರು. ಈ ರೀತಿ ಫಾಸ್ಟ್​ಟ್ಯಾಗ್ ಇಲ್ಲದವರಿಂದ ಡಬಲ್ ಹಣ ವಸೂಲಿ ಮಾಡಲಾಗುತ್ತಿದೆ.

ಫಾಸ್ಟ್‌ಟ್ಯಾಗ್ ನಿಯಮಗಳೇನು? * 25-30 ಕಿಲೋಮೀಟರ್ ವೇಗದಲ್ಲಿ ವಾಹನ ಚಾಲಕರು ಟೋಲ್ ಪ್ಲಾಜಾ ಪ್ರವೇಶಿಸಬೇಕು. * ಟ್ಯಾಗ್ ಆರಂಭದಲ್ಲಿ ಕೆಂಪು ದೀಪದ ಮೂಲಕ ದೃಢಪಡಿಸಿ, ಹಸಿರು ದೀಪ ಬಂದ ನಂತರ ಚಾಲಕನಿಗೆ ಮುಂದೆ ಸಾಗಲು ಸೂಚಿಸುತ್ತದೆ. * ಟೋಲ್ ಪ್ಲಾಜಾದಲ್ಲಿ ಚಾಲಕರು ವಾಹನ ನಿಲ್ಲಿಸುವ ಅಗತ್ಯವಿಲ್ಲ * ಟ್ಯಾಗ್ ಸ್ವಯಂಚಾಲಿತವಾಗಿ ದೃಢೀಕರಣಕ್ಕೆ ಒಳಗಾಗದಿದ್ರೆ, ಚಾಲಕರು ಮುಂದಕ್ಕೆ ಸಾಗಿ ಪ್ಲಾಜಾದಲ್ಲಿರುವ ರೀಡರ್ ಮೂಲಕ ದೃಢಪಡಿಸಿಕೊಳ್ಳಬೇಕು. * ಸರಿಯಾದ ರೀತಿಯಲ್ಲಿ ಟ್ಯಾಗ್ ಇರದಿದ್ರೆ, ಶುಲ್ಕದ ಎರಡರಷ್ಟು ಪ್ರಮಾಣದಲ್ಲಿ ಟೋಲ್ ಪಾವತಿ ಮಾಡಬೇಕು.

ವಿಷ್ಯ ಏನಂದ್ರೆ, ಈ ಹಿಂದೆ ಸ್ಥಳೀಯರಿಗೆ ಲೋಕಲ್ ಪಾಸ್​ಗಳನ್ನ ವಿತರಿಸಲಾಗಿತ್ತು. ಇದೀಗ ಅದಕ್ಕೆ ಮಾನ್ಯತೆ ಇದೆಯಾ ಇಲ್ವಾ ಅನ್ನೋದ್ರ ಬಗ್ಗೆ ಗೊಂದಲ ಮೂಡಿದೆ.

ಇನ್ನು ಟೋಲ್‌ಗಳಲ್ಲಿ ಬಡ ರೈತರು, ಅವಿದ್ಯಾವಂತರ ಪಾಡು ಹೇಳೋರಿಲ್ಲ ಕೇಳೋರಿಲ್ಲ. ತಮ್ಮ ವಾಹನಗಳನ್ನು ಟೋಲ್‌ನಿಂದ ವಾಪಸ್ ಕಳುಹಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಏನೇ ಹೇಳಿ.. ನಗದು ವ್ಯವಹಾರ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಾಸ್ಟ್ಯಾಗ್ ಜಾರಿಗೊಳಿಸ್ತಿದೆ. ಆದ್ರೆ ಗ್ರಾಮೀಣ ಭಾಗದ ಅದೆಷ್ಟೋ ವಾಹನಗಳಲ್ಲಿ ಇನ್ನೂ ಫಾಸ್ಟ್​​​​ಟ್ಯಾಗ್​​ ಇಲ್ಲ. ಅಂತವ್ರಿಗೆ ಇಂದು ಫಾಸ್ಟ್ ಟ್ಯಾಗ್ ಶಾಕ್​ ತಟ್ಟೋದು ಗ್ಯಾರಂಟಿ.

ಇದನ್ನೂ ಓದಿ: ಇಂದಿನಿಂದ FASTag ಕಡ್ಡಾಯ, ನೀವಿನ್ನೂ ಖರೀದಿಸಿಲ್ಲ ಅಂತಾದ್ರೆ ಡಬಲ್ ಶುಲ್ಕ ಕೊಡೋಕೆ ಸಿದ್ಧರಾಗಿ

Follow us on

Most Read Stories

Click on your DTH Provider to Add TV9 Kannada