ಇಂದಿನಿಂದ FASTag ಕಡ್ಡಾಯ, ನೀವಿನ್ನೂ ಖರೀದಿಸಿಲ್ಲ ಅಂತಾದ್ರೆ ಡಬಲ್ ಶುಲ್ಕ ಕೊಡೋಕೆ ಸಿದ್ಧರಾಗಿ

FASTag ಇಲ್ಲದ ಅಥವಾ ಫಾಸ್ಟ್ಯಾಗ್ ಕಾರ್ಯನಿರ್ವಹಿಸದ ಯಾವುದೇ ವಾಹನ ಟೋಲ್​ಪ್ಲಾಜಾ ಪ್ರವೇಶಿಸಿದರೆ, ಟೋಲ್​ ಶುಲ್ಕದ ದುಪ್ಪಟ್ಟು ಹಣ ತೆರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇಂದಿನಿಂದ FASTag ಕಡ್ಡಾಯ, ನೀವಿನ್ನೂ ಖರೀದಿಸಿಲ್ಲ ಅಂತಾದ್ರೆ ಡಬಲ್ ಶುಲ್ಕ ಕೊಡೋಕೆ ಸಿದ್ಧರಾಗಿ
ಪ್ರಾತಿನಿಧಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Digi Tech Desk

Updated on:Feb 15, 2021 | 9:13 AM

ದೆಹಲಿ: ಟೋಲ್​ಗಳಲ್ಲಿ ಸ್ವಯಂಚಾಲಿತವಾಗಿ ಶುಲ್ಕ ಕಡಿತಗೊಳ್ಳುವ FASTag ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಇಂದು(ಫೆ.15) ಮಧ್ಯರಾತ್ರಿಯಿಂದ ಕಡ್ಡಾಯಗೊಳಿಸಲಿದೆ. ಒಂದು ವೇಳೆ ನಿಮ್ಮ ಬಳಿ ಫಾಸ್ಟ್ಯಾಗ್ ಇಲ್ಲವೆಂದಾದರೆ ಅಥವಾ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದರೆ ನಿಮ್ಮ ವಾಹನದ ಸ್ವರೂಪ ಆಧರಿಸಿ, ಅದಕ್ಕಿರುವ ನಿಗದಿತ ಶುಲ್ಕದ ಎರಡುಪಟ್ಟು ಹಣವನ್ನು ಟೋಲ್ ಶುಲ್ಕವಾಗಿ ನೀಡಬೇಕಾಗುತ್ತದೆ. ಫಾಸ್ಟ್ಯಾಗ್​ ಜಾರಿಗೆ ನಿಗದಿಗೊಳಿಸಿದ್ದ ಗಡುವು ವಿಸ್ತರಿಸುವ ಆಲೋಚನೆಯಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

‘ಕೇಂದ್ರ ಹೆದ್ದಾರಿ ಸಚಿವಾಲಯವು ದೇಶವ್ಯಾಪಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್​ಪ್ಲಾಜಾಗಳಲ್ಲಿನ ಎಲ್ಲ ಲೇನ್​ಗಳೂ ಫೆ 15/16ರ ಮಧ್ಯರಾತ್ರಿಯಿಂದ FASTag ಲೇನ್  ಆಗಲಿವೆ ಎಂದು ಘೋಷಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಯ್ದೆ 2008ರ ಅನ್ವಯ FASTag ಇಲ್ಲದ ಅಥವಾ ಫಾಸ್ಟ್ಯಾಗ್ ಕಾರ್ಯನಿರ್ವಹಿಸದ ಯಾವುದೇ ವಾಹನ ಟೋಲ್​ಪ್ಲಾಜಾ ಪ್ರವೇಶಿಸಿದರೆ, ಟೋಲ್​ ಶುಲ್ಕದ ದುಪ್ಪಟ್ಟು ಹಣ ತೆರಬೇಕಾಗುತ್ತದೆ’ ಎಂದು ಹೆದ್ದಾರಿ ಸಚಿವಾಲಯವು ಪ್ರೆಸ್ ಇನ್​ಫರ್ಮೇಶನ್ ಬ್ಯೂರೊ ಮೂಲಕ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಎಲ್ಲ ವಾಹನಗಳು ಫಾಸ್ಟ್ಯಾಗ್​ ಅಳವಡಿಸಿಕೊಂಡರೆ ಟೋಲ್​ ಪ್ಲಾಜಾಗಳಲ್ಲಿ ಸಂಚಾರ ಸುಲಭವಾಗಲಿದೆ. ಡಿಜಿಟಲ್ ವಿಧಾನದಲ್ಲಿ ಹಣ ಸಂಗ್ರಹಿಸಲಾಗುವುದು. ಕಾಯುವ ಅವಧಿ ಮತ್ತು ಇಂಧನ ಬಳಕೆಯೂ ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳಿದೆ. ‘ಎಂ’ ಮತ್ತು ‘ಎನ್’ ವಿಭಾಗದ ವಾಹನಗಳಿಗೆ ಕೇಂದ್ರ ಸರ್ಕಾರವು ಫಾಸ್ಟ್ಯಾಗ್ ಕಡ್ಡಾಯಗೊಳಿಸಿದೆ. ಜನರ ಪ್ರಯಾಣಕ್ಕೆ ಬಳಸುವ ಕನಿಷ್ಠ 4 ಚಕ್ರಗಳ ಪ್ರಯಾಣಿಕರ ವಾಹನ ‘ಎಂ’ ವಿಭಾಗಕ್ಕೆ ಬರುತ್ತದೆ. 4 ಚಕ್ರಗಳ ಸರಕು ಮತ್ತು ಪ್ರಯಾಣಿಕರ ವಾಹನಗಳು ‘ಎನ್’ ವಿಭಾಗಕ್ಕೆ ಬರುತ್ತವೆ.

ಇದನ್ನೂ ಓದಿ: FASTag ಖರೀದಿಸೋದು ಹೇಗೆ? ಇಲ್ಲಿದೆ ಉತ್ತರ

ನಿತಿನ್​ ಗಡ್ಕರಿ

ಗಡುವು ವಿಸ್ತರಣೆಯಿಲ್ಲ: ನಿತಿನ್ ಗಡ್ಕರಿ

ದೇಶವ್ಯಾಪಿ FASTag ಅನುಷ್ಠಾನಕ್ಕೆ ಗಡುವು ವಿಸ್ತರಣೆ ಮಾಡುವುದಿಲ್ಲ. ಎಲ್ಲ ವಾಹನ ಮಾಲೀಕರು ತಕ್ಷಣ FASTag ಖರೀದಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಫಾಸ್ಟ್ಯಾಗ್​ ಇಂದಿನಿಂದ (ಫೆ.15) ದೇಶವ್ಯಾಪಿ ಕಡ್ಡಾಯವಾಗಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು.

ಟೋಲ್​ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಪೇಮೆಂಟ್ ಮೂಲಕ ಟೋಲ್ ಶುಲ್ಕ ಸಂಗ್ರಹಕ್ಕೆ ನೆರವಾಗುವ FASTag ಬಳಕೆಗೆ ಸರ್ಕಾರ 2016ರಲ್ಲಿ ಅನುಮತಿ ನೀಡಿತ್ತು. ಟ್ಯಾಗ್​ಗಳನ್ನು ಕಡ್ಡಾಯಗೊಳಿಸುವ ಮೂಲಕ ಟೋಲ್​ಪ್ಲಾಜಾಗಳಲ್ಲಿ ವಾಹನಗಳು ತಡೆಯಿಲ್ಲದೆ ಸಾಗುವಂತೆ ಮಾಡಲು ಸರ್ಕಾರ ಮುಂದಾಗಿದೆ.

ಈಗಾಗಲೇ ಎರಡು-ಮೂರು ಸಲ FASTag ಕಡ್ಡಾಯಗೊಳಿಸುವ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಹೀಗಾಗಿ ಮತ್ತೊಮ್ಮೆ ಗಡುವ ವಿಸ್ತರಿಸುವ ಯಾವುದೇ ಆಲೋಚನೆ ಸರ್ಕಾರಕ್ಕಿಲ್ಲ. ಎಲ್ಲರೂ FASTag ಖರೀದಿಸಬೇಕು ಎಂದು ಸಚಿವರು ಸೂಚಿಸಿದರು.

ಕೆಲ ಮಾರ್ಗಗಳಲ್ಲಿ ಶೇ 90ರಷ್ಟು ವಾಹನಗಳು FASTag ಬಳಸುತ್ತಿವೆ. ಕೇವಲ ಶೇ 10ರಷ್ಟು ಜನರು ಈ ವ್ಯವಸ್ಥೆ ಹೊಂದಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಟೋಲ್​ಪ್ಲಾಜಾಗಳಲ್ಲಿಯೂ ಫಾಸ್ಟ್ಯಾಗ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸುಲಲಿತ ಸಂಚಾರಕ್ಕೆ ಜನರು ಫಾಸ್ಟ್ಯಾಗ್ ಖರೀದಿಸಬೇಕು ಎಂದು ಗಡ್ಕರಿ ನುಡಿದರು. ಜನವರಿ 1, 2021ರಿಂದ ಫಾಸ್ಟ್ಯಾಗ್​ ಕಡ್ಡಾಯವಾಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ನಂತರದ ದಿನಗಳಲ್ಲಿ ಫಾಸ್ಟ್ಯಾಗ್​ ಜಾರಿ ಗಡುವನ್ನು ಫೆ.15ಕ್ಕೆ ವಿಸ್ತರಿಸಲಾಯಿತು.

ಇನ್ನಷ್ಟು…

FASTag ಮಾಡಿಸಿಲ್ಲವೇ? ಹಾಗಾದ್ರೆ ಇನ್ನೂ ತಡ ಮಾಡಬೇಡಿ.. ಯಾಕೆ ಗೊತ್ತಾ?

NICE FASTag: ನೈಸ್ ರಸ್ತೆಗೂ ಬಂತು ಫಾಸ್ಟ್ಯಾಗ್; ಟೋಲ್ ಕಿರಿಕಿರಿಯಿಂದ ಮುಕ್ತಿ

Published On - 8:04 pm, Sun, 14 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್