Madhya Pradesh: ಮದುವೆಯಾಗು ಎಂದು ಯುವತಿಗೆ ಕಿರುಕುಳ: ಒಪ್ಪದಿದ್ದಕ್ಕೆ ರಸ್ತೆ ಮಧ್ಯೆ ಗುಂಡು ಹಾರಿಸಿದ ರೋಡ್ ರೋಮಿಯೋ

|

Updated on: Apr 27, 2023 | 11:32 AM

ದೀಪಕ್ ರಾಥೋಡ್ ಎಂಬಾತ 22 ವರ್ಷದ ಪೂಜಾ ಎಂಬ ಯುವತಿಯನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ, ಇದರ ಜತೆಗೆ ಕೆಲಸಕ್ಕೆ ಹೋಗುವಾಗ ಹಿಂಬಾಲಿಸಿಕೊಂಡು ಬಂದು, ನನ್ನ ಮದುವೆಯಾಗು ಎಂದು ಕಿರುಕುಳ ನೀಡುತ್ತಿದ್ದ, ಆದರೆ ಪೂಜಾ ಅವರಿಗೆ ಒಪ್ಪಿಗೆ ಇರಲಿಲ್ಲ, ಈ ಕಾರಣಕ್ಕಾಗಿ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ.

Madhya Pradesh: ಮದುವೆಯಾಗು ಎಂದು ಯುವತಿಗೆ ಕಿರುಕುಳ: ಒಪ್ಪದಿದ್ದಕ್ಕೆ ರಸ್ತೆ ಮಧ್ಯೆ ಗುಂಡು ಹಾರಿಸಿದ ರೋಡ್ ರೋಮಿಯೋ
ಸಾಂದರ್ಭಿಕ ಚಿತ್ರ
Follow us on

ಭೋಪಾಲ್: ಯುವತಿಯೊಬ್ಬಳನ್ನು ಹಿಂಬಾಲಿಸಿಕೊಂಡು ಹೋಗಿ ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶ(Madhya Pradesh) ಧಾರ್ ನಗರದ ವಸತಿ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಯುವತಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ದೀಪಕ್ ರಾಥೋಡ್ ಎಂಬಾತ 22 ವರ್ಷದ ಪೂಜಾ ಎಂಬ ಯುವತಿಯನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ, ಇದರ ಜತೆಗೆ ಕೆಲಸಕ್ಕೆ ಹೋಗುವಾಗ ಹಿಂಬಾಲಿಸಿಕೊಂಡು ಬಂದು, ನನ್ನ ಮದುವೆಯಾಗು ಎಂದು ಕಿರುಕುಳ ನೀಡುತ್ತಿದ್ದ, ಆದರೆ ಪೂಜಾ ಅವರಿಗೆ ಒಪ್ಪಿಗೆ ಇರಲಿಲ್ಲ, ಮನೆಯವರಿಗೂ ಈ ವಿಚಾರವನ್ನು ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು.

ಧಾರ್‌ನ ಬ್ರಹ್ಮಕುಂಡ್‌ದಲ್ಲಿ ತನ್ನ ತಾಯಿ ಮತ್ತು ಇಬ್ಬರು ಸಹೋದರಿಯರೊಂದಿಗೆ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪೂಜಾ, ಕೆಲಸಕ್ಕೆ ಹೋಗುತ್ತಿದ್ದಾಗ ರಾಥೋಡ್ ಅವಳನ್ನು ಹಿಂಬಾಲಿಕೊಂಡು ಬಂದು ಮದುವೆ ಮಾಡಿಕೊಳ್ಳವಂತೆ ಮತ್ತೆ ಒತ್ತಾಯಿಸಿದ್ದಾನೆ, ಆದರೆ ಪೂಜಾ ಇದಕ್ಕೆ ಒಪ್ಪದ್ದಿದಾಗ ರಾಥೋಡ್ ರಸ್ತೆ ಮಧ್ಯೆ ಆಕೆಗೆ ಗುಂಡು ಹಾರಿಸಿದ್ದಾನೆ.

ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಈ ವಿಚಾರ ತಿಳಿಸಿದ್ದು, ರಾಥೋಡ್‌ಗಾಗಿ ಶೋಧವನ್ನು ಪ್ರಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಥೋಡ್‌ ಪೂಜಾನನ್ನು ಪ್ರತಿದಿನ ಹಿಂಬಾಲಿಸುತ್ತಿದ್ದ, ಈ ಬಗ್ಗೆ ಆಕೆ ಆತನ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಳು. . ರಾಥೋಡ್‌ ಆಕೆಯ ಕುಟುಂಬ ಮತ್ತು ಸ್ನೇಹಿತರಿಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bihar Crime: ಬಿಹಾರದಲ್ಲೊಂದು ಮರ್ಯಾದಾ ಹತ್ಯೆ: ಪ್ರೀತಿ ವಿಷಯ ತಿಳಿದು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನೇ ಹತ್ಯೆ ಮಾಡಿದ ದಂಪತಿ

ನಂತರ ದಿನದಲ್ಲಿ ಪೊಲೀಸರು ರಾಥೋಡ್ ಅವರನ್ನು ಬ್ರಹ್ಮಕುಂಡ್‌ನಲ್ಲಿರುವ ಅವರ ಮನೆಯಲ್ಲಿ ಪತ್ತೆ ಹಚ್ಚಿ ಬಂಧಿಸಲು ಪ್ರಯತ್ನಿಸಿದರು. ಆದರೆ ರಾಥೋಡ್‌ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದು, ಒಬ್ಬರಿಗೆ ಈ ಕಾರ್ಯಚರಣೆಯಲ್ಲಿ ಗಾಯಗೊಂಡಿದ್ದರು.

ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಕೂಡ ರಾಥೋಡ್‌ ಕಾಲಿಗೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಆತನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ರಾಥೋಡ್ ಅವರ ಮನೆಯನ್ನು ಪೊಲೀಸರು ನೆಲಸಮಗೊಳಿಸಿದ್ದಾರೆ. ನಗರಸಭೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದರು. ಪೂಜಾಳ ಹತ್ಯೆಗೆ ಊರಿನ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಆಕೆಗೆ ನ್ಯಾಯ ಮತ್ತು ರಾಥೋಡ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ