ತಂದೆ ಮೇಲಿನ ವೈಷಮ್ಯಕ್ಕೆ ವ್ಯಕ್ತಿಯೊಬ್ಬ 3 ತಿಂಗಳ ಮಗುವನ್ನು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಘಟನೆ ಸತ್ನಾದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ, ಹನುಮಂತನಗರದ ನಿವಾಸಿ ವೀರೇಂದ್ರ ಚೌಧರಿ ಎಂದು ಗುರುತಿಸಲಾದ ಆರೋಪಿಯು ನವೆಂಬರ್ 6 ರಂದು ದೇವಸ್ಥಾನದ ಬಳಿ ಪೋಷಕರೊಂದಿಗೆ ಮಲಗಿದ್ದ ಶಿಶುವನ್ನು ಅಪಹರಿಸಿ, ಮಗುವನ್ನು ನೆಲಕ್ಕೆ ಎಸೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಶಿಶುವಿನ ತಂದೆ ಪ್ರಿನ್ಸ್ ಪಾಂಡೆ ಅವರು ನವೆಂಬರ್ 7 ರಂದು ಸತ್ನಾದ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ತಾನು ಮತ್ತು ತನ್ನ ಪತ್ನಿ ದೇವಸ್ಥಾನದ ಬಳಿ ಮಲಗಿದ್ದಾಗ ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಕಾಣೆಯಾದ ಮಗುವಿನ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಅವರು ನವೆಂಬರ್ 8 ರಂದು ಪನ್ನಿ ಲಾಲ್ ಚೌಕ್‌ನಲ್ಲಿ ಗೋಣಿಚೀಲದಲ್ಲಿ ಶಿಶುವಿನ ದೇಹವನ್ನು ಪತ್ತೆಹಚ್ಚಿದರು. ಆರೋಪಿಗಳ ಪತ್ತೆಗೆ ತನಿಖೆಯನ್ನು ಪ್ರಾರಂಭಿಸಲಾಯಿತು.
ಮತ್ತಷ್ಟು ಓದಿ: ಮಂಗಳೂರು: ಪತ್ನಿ, ಮಗನನ್ನು ಕೊಂದು ನಂತರ ರೈಲಿಗೆ ತಲೆಕೊಟ್ಟು ಪತಿ ಆತ್ಮಹತ್ಯೆ
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ವೀರೇಂದ್ರ ಚೌಧರಿಯನ್ನು 24 ಗಂಟೆಗಳಲ್ಲಿ ಬಂಧಿಸಿದ್ದು, ಅವರು ಶಿಶುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ತನಗೆ ಪ್ರಿನ್ಸ್ ಪಾಂಡೆ ಜೊತೆ ಕಲಹ ನಡೆಯುತ್ತಿತ್ತು. 20 ದಿನಗಳ ಹಿಂದೆ ಪಾಂಡೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದ ಎಂದು ಅವರು ಹೇಳಿದ್ದಾರೆ. ಚೌಧರಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೊಗಳಿ ನಿದ್ರೆಗೆ ತೊಂದರೆ ಮಾಡಿದ ನಾಯಿಮರಿಗಳನ್ನು ಜೀವಂತವಾಗಿ ಸುಟ್ಟು ಹಾಕಿದ ಮಹಿಳೆಯರು
ಬೀದಿ ಬದಿಯ ನಾಯಿಮರಿಗಳ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರ ವಿರುದ್ಧ ಮೀರತ್‌ನ ಕಂಕೇರಖೇಡಾ ಪ್ರದೇಶದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯರ ಪ್ರಕಾರ, ಅದೇ ನೆರೆಹೊರೆಯ ನಿವಾಸಿಗಳಾದ ಮಹಿಳೆಯರು ನಾಯಿಮರಿಗಳ ಬೊಗಳುವಿಕೆಯಿಂದ ಹತಾಶೆಗೊಂಡಿದ್ದರು. ಅದೇ ಕಾರಣಕ್ಕೆ ನಾಯಿಮರಿಗಳನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅನಿಮಲ್ ಕೇರ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ್ ನೀಡಿದ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಜಿತೇಂದ್ರ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ