ಆರೆಸ್ಸೆಸ್ ನಿಷೇಧ, ಮುಸ್ಲಿಮರಿಗೆ ಮೀಸಲಾತಿ ಸೇರಿದಂತೆ ಉಲಮಾ ಮಂಡಳಿಯಿಂದ 17 ಬೇಡಿಕೆಗಳು; ಇಲ್ಲಿದೆ ಪಟ್ಟಿ

Ulema board conditional support for MVA alliance: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಂವಿಎ ಮೈತ್ರಿಕೂಟಕ್ಕೆ ಷರತ್ತುಬದ್ಧ ಬೆಂಬಲ ನೀಡಲು ಅಖಿಲ ಭಾರತ ಉಲೇಮಾ ಬೋರ್ಡ್ ನಿರ್ಧರಿಸಿದೆ. ಮೂರು ಮೈತ್ರಿ ಪಕ್ಷಗಳ ನಾಯಕರಿಗೆ ಪತ್ರದ ಮೂಲಕ ಬೆಂಬಲದ ನಿರ್ಧಾರ ತಿಳಿಸಿರುವ ಬೋರ್ಡ್, 17 ಬೇಡಿಕೆಗಳನ್ನೂ ಮುಂದಿಟ್ಟಿದೆ. ಆರೆಸ್ಸೆಸ್ ನಿಷೇಧ, ಮುಸ್ಲಿಮರಿಗೆ ಮೀಸಲಾತಿ, ನೇಮಕಾತಿಯಲ್ಲಿ ಮುಸ್ಲಿಮರಿಗೆ ಆದ್ಯತೆ ಇತ್ಯಾದಿ ಬೇಡಿಕೆಗಳಿವೆ.

ಆರೆಸ್ಸೆಸ್ ನಿಷೇಧ, ಮುಸ್ಲಿಮರಿಗೆ ಮೀಸಲಾತಿ ಸೇರಿದಂತೆ ಉಲಮಾ ಮಂಡಳಿಯಿಂದ 17 ಬೇಡಿಕೆಗಳು; ಇಲ್ಲಿದೆ ಪಟ್ಟಿ
ಮುಸ್ಲಿಂ ಮತದಾರರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 10, 2024 | 5:48 PM

ಮುಂಬೈ, ನವೆಂಬರ್ 10: ಅಖಿಲ ಭಾರತ ಉಲಮಾ ಬೋರ್ಡ್ (Ulama Board) ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎನ್​ಸಿಪಿ, ಶಿವಸೇನಾ ಪಕ್ಷಗಳ ಮಹಾ ವಿಕಾಶ್ ಆಘಾಡಿ (ಎಂವಿಎ) ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾಗಿದೆ. ಆದರೆ, ಈ ಹೆಜ್ಜೆ ಇಡಲು ಹಲವು ಷರತ್ತುಗಳನ್ನೂ ಅದು ಮುಂದಿಟ್ಟಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎನ್​ಸಿಪಿ ಮುಖ್ಯಸ್ತ ಶರದ್ ಪವಾರ್ ಮತ್ತು ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವರಿಗೆ ಉಲಮಾ ಬೋರ್ಡ್ ಪತ್ರ ಬರೆದು, ತನ್ನ ನೆರವನ್ನು ಘೋಷಿಸಿದೆಯಾದರೂ, ಅದು ಷರತ್ತುಬದ್ಧ ಬೆಂಬಲ ಎಂದು ಸ್ಪಷ್ಟಪಡಿಸಿದೆ. ಆರೆಸ್ಸೆಸ್ ನಿಷೇಧಿಸಬೇಕು, ವಕ್ಫ್ ಮಸೂದೆಯನ್ನು ವಿರೋಧಿಸಬೇಕು. ಮಹಾರಾಷ್ಟ್ರದ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು. ಅತಿಕ್ರಮಗೊಂಡ ವಕ್ಫ್ ಆಸ್ತಿಗಳನ್ನು ಮರಳು ಕ್ರಮ ತೆಗೆದುಕೊಳ್ಳಬೇಕು ಎಂಬಿತ್ಯಾದಿ 17 ಬೇಡಿಕೆಗಳನ್ನು ಉಲೇಮಾ ಮಂಡಳಿ ಮುಂದಿಟ್ಟಿದೆ.

ಎಂವಿಎ ಮೈತ್ರಿಕೂಟಕ್ಕೆ ಉಲಮಾ ಬೋರ್ಡ್ ಇಟ್ಟಿರುವ ಪ್ರಮುಖ ಬೇಡಿಕೆಗಳಿವು…

  1. ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಬೇಕು
  2. ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮುಸ್ಲಿಮರಿಗೆ ಶೇ. 10 ಮೀಸಲಾತಿ ನೀಡಬೇಕು.
  3. ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಅತಿಕ್ರಮಗೊಂಡಿರುವ ವಕ್ಫ್ ಆಸ್ತಿಗಳನ್ನು ಮರಳಿ ಕೊಡಲಾಗುವಂತೆ ಕಾನೂನು ರೂಪಿಸಬೇಕು.
  4. ಮಹಾರಾಷ್ಟ್ರ ವಕ್ಫ್ ಬೋರ್ಡ್​ಗೆ 1,000 ಕೋಟಿ ರೂ ಹಣ ಒದಗಿಸಬೇಕು.
  5. ಮಹಾರಾಷ್ಟ್ರ ರಾಜ್ಯದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಮುಸ್ಲಿಮರಿಗೆ ಆದ್ಯತೆ ಕೊಡಬೇಕು.
  6. ಎಂವಿಎ ಸರ್ಕಾರ ರಚನೆಯಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು.
  7. ಬಿಜೆಪಿ ನಾಯಕ ನಿತೇಶ್ ರಾಣೆ ಮತ್ತು ರಾಮಗಿರಿ ಮಹಾರಾಜ್ ಅವರನ್ನು ಕೂಡಲೇ ಬಂಧಿಸಬೇಕು.
  8. ಪ್ರಚೋದನಕಾರಿ ಹೇಳಿಕೆ ನೀಡಿ ಬಂಧಿತರಾಗಿರುವ ಮೌಲಾನ ಸಲ್ಮಾನ್ ಅಝೇರಿ ಅವರನ್ನು ಬಿಡುಗಡೆ ಮಾಡಬೇಕು.
  9. 2012ರಿಂದ 2024ರವರೆಗೆ ಗಲಭೆ ಪ್ರಕರಣಗಳಲ್ಲಿ ಬಂಧಿತರಾಗಿರುವ ಅಮಾಯಕ ಮುಸ್ಲಿಮರನ್ನು ಬಿಡುಗಡೆ ಮಾಡಬೇಕು.
  10. ಮಹಾರಾಷ್ಟ್ರ ಮಸೀದಿಗಳ ಇಮಾಮರು ಮತ್ತು ಮೌಲಾನಗಳಿಗೆ ಮಾಸಿಕ 15,000 ರೂ ಸಂಭಾವನೆ ನೀಡಬೇಕು.
  11. ಅಧಿಕಾರಕ್ಕೆ ಬಂದ ಬಳಿಕ ಅಖಿಲ ಭಾರತ ಉಲಮಾ ಮಂಡಳಿಯ ಮುಫ್ತಿ ಮೌಲಾನ, ಅಲೀಮ್ ಹಫೀಜ್ ಮಸೀದಿಯ ಇಮಾಮರನ್ನು ಸರ್ಕಾರದ ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು.
  12. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯದ 50 ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು.
  13. ಮಹಾರಾಷ್ಟ್ರ ರಾಜ್ಯ ವಕ್ಫ್ ಬೋರ್ಡ್​ನಲ್ಲಿ 500 ಉದ್ಯೋಗಿಗಳ ನೇಮಕಾತಿ ಆಗಬೇಕು.
  14. ಪ್ರವಾದಿ ಮೊಹಮ್ಮದ್ ಅವರನ್ನು ಅವಹೇಳನ ಮಾಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
  15. ಮಹಾರಾಷ್ಟ್ರದ 48 ಜಿಲ್ಲೆಗಳಲ್ಲಿ ಎಂವಿಎ ಪರವಾಗಿ ಪ್ರಚಾರ ಮಾಡಲು ಉಲಮಾ ಮಂಡಳಿಗೆ ಅಗತ್ಯವಾಗಿರುವ ಸಾಮಗ್ರಿಗಳನ್ನು ಒದಗಿಸಬೇಕು.

ಇದನ್ನೂ ಓದಿ: Maharashtra Assembly Election: ಮಹಾರಾಷ್ಟ್ರ ಚುನಾವಣೆ: ಮಹಾ ವಿಕಾಸ್ ಅಘಾಡಿ ಜತೆ ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್

ಮಹಾರಾಷ್ಟ್ರದಲ್ಲಿ ಮುಸ್ಲಿಮ್ ಬಾಹುಳ್ಯ ಎಷ್ಟು?

ಮಹಾರಾಷ್ಟ್ರದಲ್ಲಿ ಮುಸ್ಲಿಮ್ ಜನಸಂಖ್ಯೆ 1.3 ಕೋಟಿಯಷ್ಟಿದೆ. ಆ ದೈತ್ಯರಾಜ್ಯದಲ್ಲಿ ಒಟ್ಟು 11.24 ಕೋಟಿ ಜನಸಂಖ್ಯೆ ಇದ್ದು ಮುಸ್ಲಿಮರ ಪ್ರಮಾಣ ಶೇ. 11.56ರಷ್ಟಿದೆ. ಕುತೂಹಲ ಎಂದರೆ ಅಲ್ಲಿನ 288 ವಿಧಾನಸಭಾ ಕ್ಷೇತ್ರಗಳ ಪೈಕಿ 38ರಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಶೇ. 20ರಷ್ಟಿದೆ. 9 ಕ್ಷೇತ್ರದಲ್ಲಿ ಇವರ ಬಾಹುಳ್ಯ ಶೇ. 40ಕ್ಕಿಂತಲೂ ಹೆಚ್ಚಿದೆ. ಮುಂಬೈನ 10 ಕ್ಷೇತ್ರಗಳಲ್ಲಿ ಶೇ. 25ಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ.

ನವೆಂಬರ್ 20ರಂದು ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ಆಗುತ್ತಿದೆ. ನವೆಂಬರ್ 23ರಂದು ಮತ ಎಣಿಕೆಯಾಗಿ ಫಲಿತಾಂಶ ಹೊರಬರಲಿದೆ. ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದ್ದು, ನಿಕಟ ಪೈಪೋಟಿ ಇರುವ ಸಾಧ್ಯತೆ ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Sun, 10 November 24

ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಥಾರ್​ ಖರೀದಿಸಿದ ಖುಷಿಗೆ ಮಹೀಂದ್ರಾ ಶೋರೂಂನಲ್ಲಿ ಗುಂಡು ಹಾರಿಸಿದ ಯುವಕ!
ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಚೈತ್ರಾ ಕುಂದಾಪುರ ಎಷ್ಟು ಚಾಲಾಕಿ ಅಂತ ತಿಳಿಯೋಕೆ ಈ ವಿಡಿಯೋ ನೋಡಿ..
ಚಿನ್ನ ಖರೀದಿಸಿದರೆ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗುತ್ತಾ?
ಚಿನ್ನ ಖರೀದಿಸಿದರೆ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗುತ್ತಾ?
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ವೈಲ್ಡ್ ಕಾರ್ಡ್​ ಸ್ಪರ್ಧಿ ಶೋಭಾ ಶೆಟ್ಟಿಗೆ ಆರಂಭದಲ್ಲೇ ಆಘಾತ; ಬಿದ್ದ ನಟಿ
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್
ಶಿವಣ್ಣನ ‘ಭೈರತಿ ರಣಗಲ್’ ಸಿನಿಮಾ ನೋಡಲು ಬಂದ ದುನಿಯಾ ವಿಜಯ್