ಅತ್ಯಾಚಾರ ಯತ್ನ ವಿಫಲವಾದ ಬಳಿಕ ಮಹಿಳೆಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಎರಡು ರೈಲುಗಳಲ್ಲಿ ಭಾಗಗಳನ್ನು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ 60 ವರ್ಷದ ವ್ಯಕ್ತಿಯನ್ನು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲಾಗಿದೆ.
ಜೂನ್ 6 ರಂದು ರೈಲ್ವೆ ನಿಲ್ದಾಣದಲ್ಲಿ ಕುಳಿತಿದ್ದಾಗ ಆರೋಪಿ ಕಮಲೇಶ್ ಪಟೇಲ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಜೂನ್ 6ರಂದು ಪತಿಯೊಂದಿಗೆ ಜಗಳವಾಡಿದ ಬಳಿಕ ಮನೆ ಬಿಟ್ಟು ಬಂದಿದ್ದಳು, ಮಹಿಳೆ ಮಥುರಾಗೆ ಹೋಗಲು ಉಜ್ಜಯಿನಿ ನಿಲ್ದಾಣದಲ್ಲಿ ಕುಳಿತಿದ್ದಾಗ ಪಟೇಲ್ ಆಕೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದ ಬಳಿಕ ನಿದ್ರೆ ಮಾತ್ರೆ ಬೆರೆಸಿ ಆಹಾರವನ್ನು ಕೊಟ್ಟಿದ್ದ.
ಬಳಿಕ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದ, ಆಕೆ ಕೂಡಲೇ ಎಚ್ಚರಗೊಂಡುಯ ಕಿರುಚಾಡಲು ಶುರು ಮಾಡಿದ್ದಳು. ಪಟೇಲ್ ಮೊದಲು ಕತ್ತು ಹಿಸುಕಿ ಕೊಲೆ ಮಾಡಿ, ದೇಹವನ್ನು ತುಂಡುಗಳಾಗಿ ಕತ್ತರಿಸಿ ಇಂದೋರ್-ನಾಗ್ಡಾ ಮತ್ತು ಇಂದೋರ್ ಡೆಹ್ರಾಡೂನ್ ಪ್ಯಾಸೆಂಜರ್ ರೈಲುಗಳಲ್ಲಿ ಇರಿಸಿದ್ದ.
ಮತ್ತಷ್ಟು ಓದಿ:
ಇಂದೋರ್-ಋಷಿಕೇಶ: ಎರಡು ರೈಲಿನೊಳಗೆ ಮಹಿಳೆಯ ದೇಹದ ತುಂಡರಿಸಿದ ಭಾಗಗಳು ಪತ್ತೆ
37 ವರ್ಷದ ಮಹಿಳೆಯ ಕೈಗಳು ಹಾಗೂ ಕಾಲುಗಳು ಜೂನ್ 10ರಂದು ಉತ್ತರಾಖಂಡದ ಋಷಿಕೇಶದ ರೈಲಿನಲ್ಲಿ ಪತ್ತೆಯಾಗಿದ್ದರೆ, ಉಳಿದ ದೇಹದ ಭಾಗಗಳು ಜೂನ್ 9ರಂದು ಇಂದೋರ್ ರೈಲಿನಿಂದ ಹೊರತೆಗೆಯಲಾಯಿತು.
ಜೂನ್ 12ರಂದು ರತ್ಲಾಮ್ ಜಿಲ್ಲೆಯ ಬಿಲ್ಪಾಂಕ್ ಪೊಲೀಸ್ ಠಾಣೆಯಲ್ಲಿ ಆಕೆಯ ಸಂಬಂಧಿಕರು ಕಾಣೆಯಾದ ದೂರನ್ನು ದಾಖಲಿಸಿದ್ದರು. ಪಟೇಲ್ನನ್ನು ಉಜ್ಜಿಯಿನಿಯಲ್ಲಿ ಬಂಧಿಸಲಾಗಿದ್ದು, ಅಪರಾಧಕ್ಕೆ ಬಳಸಿದ ಚಾಕುವನ್ನು ಇತರೆ ಸಾಕ್ಷ್ಯಗಳೊಂದಿಗೆ ವಶಪಡಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ