ಇಂದೋರ್​-ಋಷಿಕೇಶ: ಎರಡು ರೈಲಿನೊಳಗೆ ಮಹಿಳೆಯ ದೇಹದ ತುಂಡರಿಸಿದ ಭಾಗಗಳು ಪತ್ತೆ

ಇಂದೋರ್ ಹಾಗೂ ಋಷಿಕೇಶಕ್ಕೆ ಹೊರಟಿದ್ದ ಎರಡು ರೈಲುಗಳಲ್ಲಿ ಮಹಿಳೆಯರ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿದೆ.ಆರೋಪಿಗಳು ಒಬ್ಬರಲ್ಲ ಒಬ್ಬರಿಗಿಂತ ಹೆಚ್ಚು ಇರಬಹುದು ಎನ್ನುವ ಅನುಮಾನವೂ ಇದೆ. ಪೊಲೀಸರ ಪ್ರಕಾರ, ಅಪರಾಧ ಮಾಡಿದ ನಂತರ ಆರೋಪಿಗಳು ಪ್ಲಾಟ್‌ಫಾರ್ಮ್ ಸಂಖ್ಯೆ 5 ರಿಂದ ರೈಲನ್ನು ಹಿಡಿದು ಅಲ್ಲಿಂದ ಪರಾರಿಯಾಗಿದ್ದಾರೆ.

ಇಂದೋರ್​-ಋಷಿಕೇಶ: ಎರಡು ರೈಲಿನೊಳಗೆ ಮಹಿಳೆಯ ದೇಹದ ತುಂಡರಿಸಿದ ಭಾಗಗಳು ಪತ್ತೆ
ರೈಲು ನಿಲ್ದಾಣ
Follow us
|

Updated on:Jun 13, 2024 | 10:08 AM

ಎರಡು ಪ್ರತ್ಯೇಕ ರೈಲುಗಳಲ್ಲಿ ಮಹಿಳೆಯ ತುಂಡರಿಸಿದ ದೇಹದ ಆರು ಭಾಗಗಳು ಪತ್ತೆಯಾಗಿವೆ. ಎರಡು ರಾಜ್ಯಗಳ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ನಿರತರಾಗಿದ್ದಾರೆ. ಆದರೆ ಇದೀಗ ಮತ್ತೊಂದು ರೈಲು ಕೂಡ ಈ ಕೊಲೆ ರಹಸ್ಯದೊಳಗೆ ಪ್ರವೇಶಿಸಿದೆ. ಆರೋಪಿಗಳು ಒಬ್ಬರಲ್ಲ ಒಬ್ಬರಿಗಿಂತ ಹೆಚ್ಚು ಇರಬಹುದು ಎನ್ನುವ ಅನುಮಾನವೂ ಇದೆ. ಪೊಲೀಸರ ಪ್ರಕಾರ, ಅಪರಾಧ ಮಾಡಿದ ನಂತರ ಆರೋಪಿಗಳು ಪ್ಲಾಟ್‌ಫಾರ್ಮ್ ಸಂಖ್ಯೆ 5 ರಿಂದ ರೈಲನ್ನು ಹಿಡಿದು ಅಲ್ಲಿಂದ ಪರಾರಿಯಾಗಿದ್ದಾರೆ.

ಟ್ರಾಲಿ ಬ್ಯಾಗ್‌ಗೆ ಹ್ಯಾಂಡಲ್ ಇಲ್ಲದ ಕಾರಣ ಆರೋಪಿಗಳ ಸಂಖ್ಯೆ ಹೆಚ್ಚಿದೆ ಎಂದು ನಂಬಲಾಗಿದೆ. ಹ್ಯಾಂಡಲ್ ಇಲ್ಲದೆ ಅದನ್ನು ಒಬ್ಬರಿ ಸುಲಭವಾಗಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಮಹಿಳೆಯ ಮಾನವ ದೇಹದ ಭಾಗಗಳನ್ನು ಟ್ರಾಲಿ ಬ್ಯಾಗ್ ಮತ್ತು ಎರಡು ಗೋಣಿಚೀಲಗಳಲ್ಲಿ ಹಾಕಿ ರೈಲುಗಳ ಬೋಗಿಗಳಲ್ಲಿ ಇರಿಸಲಾಗಿತ್ತು.

ಎರಡು ರೈಲಿನಲ್ಲಿ ಶವದ ಭಾಗಗಳನ್ನು ಇರಿಸಿ ನಂತರ ನಂತರ ಐದನೇ ಸಂಖ್ಯೆಯ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದ ಮೂರನೇ ರೈಲಿನಿಂದ ಪರಾರಿಯಾಗಿದ್ದಾರೆ. ಪ್ರಕರಣದ ಆರೋಪಿಗಳ ಗುರುತು ಬಹಿರಂಗಪಡಿಸುವವರಿಗೆ 10,000 ರೂಪಾಯಿ ಬಹುಮಾನ ನೀಡುವುದಾಗಿ ರೈಲ್ವೆ ಪೊಲೀಸರು ಘೋಷಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಮಲ್ಲೇಶ್ವರಂ ರೈಲ್ವೆ ಟ್ರ್ಯಾಕ್​ ಬಳಿ ವ್ಯಕ್ತಿಯ ಶವ ಪತ್ತೆ

ಶನಿವಾರ ರಾತ್ರಿ, ಮೊವ್‌ನಿಂದ ನಾಗ್ಡಾ ಮೂಲಕ ಇಂದೋರ್‌ಗೆ ಹಿಂದಿರುಗುತ್ತಿದ್ದ ರೈಲಿನಲ್ಲಿ ಟ್ರಾಲಿ ಬ್ಯಾಗ್ ಮತ್ತು ಗೋಣಿಚೀಲದಲ್ಲಿ ತುಂಡಾದ ಮಹಿಳೆ ಶವ ಪತ್ತೆಯಾಗಿತ್ತು.

ಇಲ್ಲಿನ ರಿಷಿಕೇಶ ಎಕ್ಸ್‌ಪ್ರೆಸ್‌ನಲ್ಲಿ ಆರೋಪಿಗಳು ಗೋಣಿಚೀಲ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಎರಡು ದಿನಗಳಿಂದ ಇಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಶೋಧಿಸಲಾಗುತ್ತಿದೆ. ಕೆಲವು ಕಡೆ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:08 am, Thu, 13 June 24