ದಿನನಿತ್ಯ ಅತ್ಯಾಚಾರದ ಸಾಕಷ್ಟು ಘಟನೆಗಳು ಬೆಳಕಿಗೆ ಬರುತ್ತಿವೆ, ಕೆಲವು ಹೆಣ್ಣುಮಕ್ಕಳು ಗಂಡಸರನ್ನು ನಂಬಿ ಮೋಸ ಹೋಗುತ್ತಿದ್ದರೆ ಇನ್ನೂ ಕೆಲವು ಹೆಣ್ಣುಮಕ್ಕಳದ್ದು ಏನೂ ತಪ್ಪಿಲ್ಲದಿದ್ದರೂ ಜೀವನ ಹಾಳಾಗುತ್ತಿದೆ. ಹಾಗೆಯೇ ಮದುವೆಯಾಗುವುದಾಗಿ ನಂಬಿಸಿ ಅತ್ತಿಗೆಯ ಸಹೋದರಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಆಕೆ ಗರ್ಭಿಣಿಯಾದ ಬಳಿಕ ನಡು ನೀರಿನಲ್ಲಿ ಕೈಬಿಟ್ಟು ಹೋಗಿದ್ದಾನೆ. ಆಕೆಗೆ ಮೊದಲೇ ಮದುವೆಯಾಗಿತ್ತು, ಪತಿಗೆ ವಿಚ್ಛೇದನ ನೀಡುವಂತೆ ಒತ್ತಡ ಹೇರುತ್ತಿದ್ದ. ನಂತರ ಮದುವೆಯಾಗುತ್ತೇನೆಂದು ಹೇಳಿ 4 ತಿಂಗಳುಗಳ ಕಾಳ ನಿರಂತರ ಶೋಷಣೆ ಮಾಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪೊಲೀಸರ ಸಹಾಯ ಪಡೆದರೆ ಮಗಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ, ಗ್ವಾಲಿಯರ್‌ನ ಜನಕ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರ್ ಕಾಲೋನಿಯಲ್ಲಿ ಈ ಘಟನೆ ವರದಿಯಾಗಿದೆ. ಕೊನೆಗೆ ಸಂತ್ರಸ್ತೆ ಬುಧವಾರ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ಪತಿಯೊಂದಿಗೆ ಮನಸ್ತಾಪ ಶುರುವಾಗಿತ್ತು, ಈ ವೇಳೆ ಅಕ್ಕನ ಮೈದುನ ರಮ್ಲಖಾನ್ ಖಾತಿಕ್ ಆಕೆಯ ಮನೆಗೆ ಬರತೊಡಗಿದ್ದ. ಆಕೆಯ ನಂಬಿಕೆಯನ್ನು ಗೆದ್ದು ಪತಿಗೆ ವಿಚ್ಛೇದನ ನೀಡುವಂತೆ ಒತ್ತಡ ಹೇರಿದ್ದ. ಒಂದು ದಿನ ಆರೋಪಿ ಖತಿಕ್ ತನ್ನ ಮನೆಗೆ ಬಂದಿದ್ದಾಗಿ ಮಹಿಳೆ ಹೇಳಿದ್ದಾಳೆ. ಆಕೆ ಒಬ್ಬಳೇ ಇರುವುದನ್ನು ಕಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮತ್ತಷ್ಟು ಓದಿ:
ಮೊಬೈಲ್ ವಿಡಿಯೋ ನೋಡಿ 9 ವರ್ಷದ ಬಾಲಕನಿಂದ 3 ವರ್ಷದ ಮಗು ಮೇಲೆ ಅತ್ಯಾಚಾರ!
ಮಹಿಳೆ ವಿರೋಧಿಸಿದಾಗ, ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ಇದು ವರ್ಷಗಳ ಕಾಲ ಮುಂದುವರೆಯಿತು ಮತ್ತು ಬಲಿಪಶು ಗರ್ಭಿಣಿಯಾದಳು. ಅವಳು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಸಂತ್ರಸ್ತೆ ಆರೋಪಿಯನ್ನು ಮದುವೆಯಾಗುವಂತೆ ಒತ್ತಾಯಿಸಿದಾಗ ಆತ ಸಾರಾಸಗಟಾಗಿ ನಿರಾಕರಿಸಿ, ತಮ್ಮ ಅಪ್ರಾಪ್ತ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದ ಕೋಪಗೊಂಡ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ