ಮೊಬೈಲ್ ವಿಡಿಯೋ ನೋಡಿ 9 ವರ್ಷದ ಬಾಲಕನಿಂದ 3 ವರ್ಷದ ಮಗು ಮೇಲೆ ಅತ್ಯಾಚಾರ!

ಮಹಾರಾಷ್ಟ್ರದ ಪುಣೆಯಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣವನ್ನು ಮೊಬೈಲ್​ನಲ್ಲಿ ನೋಡುತ್ತಿದ್ದ 9 ವರ್ಷದ ಬಾಲಕ ಅದರಲ್ಲಿ ಬರುವ ವಿಡಿಯೋಗಳಿಂದ ಪ್ರಭಾವಿತನಾಗಿ 3 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆ ಮಗು ಆಟವಾಡುವಾಗ ಆ ಬಾಲಕನನ್ನು ಅಣ್ಣ ಎಂದು ಕರೆಯುತ್ತಾ ಆತನ ಹಿಂದೆಯೇ ಓಡಾಡುತ್ತಿತ್ತು.

ಮೊಬೈಲ್ ವಿಡಿಯೋ ನೋಡಿ 9 ವರ್ಷದ ಬಾಲಕನಿಂದ 3 ವರ್ಷದ ಮಗು ಮೇಲೆ ಅತ್ಯಾಚಾರ!
Sexual Assault
Follow us
ಸುಷ್ಮಾ ಚಕ್ರೆ
|

Updated on: Dec 19, 2024 | 9:11 PM

ಪುಣೆ: ಆಘಾತಕಾರಿ ಘಟನೆಯೊಂದರಲ್ಲಿ, ಸಾಮಾಜಿಕ ಮಾಧ್ಯಮದ ಪ್ರಭಾವದಿಂದ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ 9 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಡಿಸೆಂಬರ್ 15ರಂದು ಈ ಘಟನೆ ನಡೆದಿದೆ. ಈ ಆರೋಪದ ಮೇಲೆ 9 ವರ್ಷದ ಬಾಲಕನನ್ನು ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ಆ ಕೋರ್ಟ್​ ಅವನಿಗೆ ಜಾಮೀನು ನೀಡಿತು. ಆತನನ್ನು ಅವನ ಹೆತ್ತವರ ಜೊತೆ ಕಳುಹಿಸಿತು.

ಪುಣೆಯಲ್ಲಿ ಒಂದೇ ಏರಿಯಾದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಹುಡುಗ ಮತ್ತು ಮಗುವಿನ ಕುಟುಂಬಗಳು ಆಪ್ತ ಸಂಬಂಧ ಹೊಂದಿದ್ದವು. ಎರಡೂ ಮನೆಯವರು ಪರಸ್ಪರರ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಇಬ್ಬರೂ ಮನೆಯ ಹೊರಗೆ ಆಟವಾಡುತ್ತಿದ್ದರು. ಆ ಮಗು ಆರೋಪಿ ಹುಡುಗನನ್ನು ದಾದಾ (ಅಣ್ಣ) ಎಂದು ಕರೆಯುತ್ತಿತ್ತು ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸ್ನೇಹಲ್ ಜಾಧವ್ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ಮೊಬೈಲ್ ಕಸಿದುಕೊಂಡಿದ್ದಕ್ಕೆ ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು

ಆ ಹೆಣ್ಣು ಮಗು ತನ್ನ ಮನೆಯ ಬಳಿ ಒಬ್ಬಳೇ ಇದ್ದಾಗ ಲೈಂಗಿಕ ದೌರ್ಜನ್ಯ ನಡೆದಿದ್ದು, ಆಕೆ ತನ್ನ ತಾಯಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ. ತಾಯಿ ಪೊಲೀಸರಿಗೆ ಮಾಹಿತಿ ನೀಡಿದರು. 3ನೇ ತರಗತಿಯ ಬಾಲಕನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆಗೆ ಸಂಬಂಧಿಸಿದ ಕೇಸ್ ದಾಖಲಿಸಲಾಗಿದೆ. ಆತ ಸೋಷಿಯಲ್ ಮೀಡಿಯಾದ ಪ್ರಭಾವದಿಂದ ಈ ರೀತಿ ಮಾಡಿರುವುದಾಗಿ ಒಪ್ಪಿಕೊಮಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ