ಅಂಬೇಡ್ಕರ್ ವಿವಾದವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂಸತ್ ಗಲಾಟೆಯನ್ನು ಬಳಸಿಕೊಳ್ಳುತ್ತಿದೆ; ರಾಹುಲ್ ಗಾಂಧಿ ಆರೋಪ

ಬಿಜೆಪಿ ನಾಯಕರು ಡಾ. ಬಿ.ಆರ್​ ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ. ಈ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂಸತ್ ಆವರಣದಲ್ಲಿ ಇಂದು ನಡೆದ ಘಟನೆಯನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಬಿಜೆಪಿ ಸಂಸದರ ಮೇಲೆ ರಾಹುಲ್ ಗಾಂಧಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಅಂಬೇಡ್ಕರ್ ವಿವಾದವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂಸತ್ ಗಲಾಟೆಯನ್ನು ಬಳಸಿಕೊಳ್ಳುತ್ತಿದೆ; ರಾಹುಲ್ ಗಾಂಧಿ ಆರೋಪ
Rahul Gandhi (13)
Follow us
ಸುಷ್ಮಾ ಚಕ್ರೆ
|

Updated on: Dec 19, 2024 | 7:21 PM

ನವದೆಹಲಿ: ಸಂಸತ್​ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಸಂಸತ್ತಿನ ಆವರಣದಲ್ಲಿ ಉಂಟಾದ ಘರ್ಷಣೆಯ ಕುರಿತು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂಸತ್ತಿನಲ್ಲಿ ನಿರ್ಣಾಯಕ ವಿಷಯಗಳನ್ನು ಎತ್ತುವ ವಿರೋಧ ಪಕ್ಷದ ಪ್ರಯತ್ನಗಳಿಗೆ ಆಡಳಿತ ಪಕ್ಷದ ಸಂಸದರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಂಬೇಡ್ಕರ್ ವಿವಾದದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಇಂತಹ ತಂತ್ರಗಳನ್ನು ಬಳಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇಂದು ಸಂಸತ್ ಆವರಣದಲ್ಲಿ ಭಾರೀ ಕೋಲಾಹಲ ಏರ್ಪಟ್ಟಿತು. ಸಂಸತ್ತಿನ ಪ್ರವೇಶದ ಮೆಟ್ಟಿಲುಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮಹಿಳಾ ಸಂಸದೆಯ ಮೇಲೆ ಬಲಪ್ರಯೋಗ ಮಾಡಿದ್ದಾರೆ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಕೇಂದ್ರ ಸಚಿವರಾದ ಜೆ.ಪಿ ನಡ್ಡಾ ಮತ್ತು ಕಿರಣ್ ರಿಜಿಜು ಆರೋಪಿಸಿದ ನಂತರ ಗದ್ದಲದ ನಡುವೆ ರಾಜ್ಯಸಭೆಯ ಕಲಾಪವನ್ನು ಮುಂದೂಡಲಾಯಿತು.

ಇದನ್ನೂ ಓದಿ: ಅಂಬೇಡ್ಕರ್ ವಿವಾದ; ಅಮಿತ್ ಶಾ ವಿರುದ್ಧ ಸಂಸತ್​ನಲ್ಲಿ ವಿಶೇಷ ಹಕ್ಕು ನೋಟಿಸ್ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆ

ಆಡಳಿತ ಪಕ್ಷವು “ಅಂಬೇಡ್ಕರ್ ವಿರೋಧಿ ಮತ್ತು ಸಂವಿಧಾನ ವಿರೋಧಿ” ಸಿದ್ಧಾಂತಕ್ಕೆ ಬದ್ಧವಾಗಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಭಾರತೀಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ತತ್ವಗಳನ್ನು ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ಟೀಕಿಸಿದರು. “ಬಿಜೆಪಿಯ ಕ್ರಮಗಳು ಮತ್ತು ನೀತಿಗಳು ಮೂಲಭೂತವಾಗಿ ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ” ಎಂದು ಅವರು ಟೀಕಿಸಿದರು.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರನ್ನು ಒಳಗೊಂಡ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸಂಸತ್ತಿನಲ್ಲಿ ಅಡ್ಡಿಪಡಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಈ ವಿಷಯದ ಕುರಿತು ಚರ್ಚೆಗಳನ್ನು ಹತ್ತಿಕ್ಕಲು ಮತ್ತು ಅನಗತ್ಯ ವಿವಾದವನ್ನು ಸೃಷ್ಟಿಸಲು ಬಿಜೆಪಿ ಉದ್ದೇಶಪೂರ್ವಕ ಪ್ರಯತ್ನಗಳನ್ನು ಮಾಡಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಆರೋಪಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ತಳ್ಳಿದ್ದರಿಂದ ನನ್ನ ಘನತೆಗೆ ಧಕ್ಕೆಯಾಗಿದೆ; ನಾಗಾಲ್ಯಾಂಡ್‌ನ ಬಿಜೆಪಿ ಸಂಸದೆ ಗಂಭೀರ ಆರೋಪ

ವಿರೋಧ ಪಕ್ಷದ ನಾಯಕರು ಸಂಸತ್ತಿಗೆ ಪ್ರವೇಶಿಸದಂತೆ ಬಿಜೆಪಿ ಸಂಸದರು ಪ್ರಯತ್ನಿಸಿದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯ ಬಳಿ ಸಾಲಿನಲ್ಲಿ ನಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ, ನಮ್ಮ ಪ್ರವೇಶವನ್ನು ತಡೆಯಲು ಬಿಜೆಪಿ ಸಂಸದರು ಮಕರ ದ್ವಾರದಲ್ಲಿ (ಮುಖ್ಯ ದ್ವಾರ) ಕುಳಿತುಕೊಂಡರು. ಅನೇಕ ಪುರುಷ ಸಂಸದರು ತಮ್ಮ ಬಲವನ್ನು ತೋರಿಸಲು ಪ್ರಯತ್ನಿಸುತ್ತಿದ್ದರು. ನಮ್ಮ ಮಹಿಳಾ ಸಂಸದರನ್ನು ಸಹ ಅವರು ನಿಲ್ಲಿಸಿದರು. ನಾನು ಯಾರನ್ನೂ ತಳ್ಳಲು ದೈಹಿಕವಾಗಿ ಸಮರ್ಥನಲ್ಲ. ಆದರೆ, ನನ್ನನ್ನು ತಳ್ಳಲಾಯಿತು. ಇದರಿಂದ ನಾನು ಬ್ಯಾಲೆನ್ಸ್​ ತಪ್ಪಿ ಕೆಳಗೆ ಕುಳಿತುಕೊಂಡೆ. ಆದರೂ ನಾವೇ ದೈಹಿಕ ಹಲ್ಲೆ ಮಾಡಿದ್ದೇವೆಂದು ನಮ್ಮ ಮೇಲೆ ಗಲಾಟೆ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಸಚಿವೆ ವಿರುದ್ಧ ಕೆಟ್ಟ ಪದವನ್ನು ನಾನು ಬಳಸಿಲ್ಲ, ದಾಖಲೆ ನೋಡಿ: ಸಿಟಿ ರವಿ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಬಿಜೆಪಿ ಮುಖಂಡ ಯಾರ ಒತ್ತಾಸೆ ಮೇರೆಗೆ ಸಂಪರ್ಕಿಸಿದರೋ ಗೊತ್ತಿಲ್ಲ: ಕೃಷ್ಣ
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ಮಲ್ಲಿಕಾರ್ಜುನ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ: ಬಸವರಾಜು
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ
ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾ ತೊರೆದ ಅಶ್ವಿನ್​ಗೆ ಅದ್ಧೂರಿ ಸ್ವಾಗತ
ಸಿದ್ದರಾಮಯ್ಯ ಸಹ ಬಂಗಾರಪ್ಪ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ: ಮಧು
ಸಿದ್ದರಾಮಯ್ಯ ಸಹ ಬಂಗಾರಪ್ಪ ಹಾಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ: ಮಧು
ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್
ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಅಪಾಯ ಹೆಚ್ಚು: ಡಾಕ್ಟರ್