ರಾಹುಲ್ ಗಾಂಧಿ ತಳ್ಳಿದ್ದರಿಂದ ನನ್ನ ಘನತೆಗೆ ಧಕ್ಕೆಯಾಗಿದೆ; ನಾಗಾಲ್ಯಾಂಡ್‌ನ ಬಿಜೆಪಿ ಸಂಸದೆ ಗಂಭೀರ ಆರೋಪ
ಕಾಂಗ್ರೆಸ್ ಸಂಸದ ನನ್ನ ಹತ್ತಿರ ಬಂದು, ಜೋರಾಗಿ ಜಗಳವಾಡುತ್ತಾ ಮೈಮುಟ್ಟಿ ತಳ್ಳಿದ್ದಾರೆ. ಅವರ ಅನುಚಿತ ವರ್ತನೆಯಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ರಾಜ್ಯಸಭಾ ಅಧ್ಯಕ್ಷರು ನನಗೆ ರಕ್ಷಣೆ ಒದಗಿಸಬೇಕು ಎಂದು ಬಿಜೆಪಿಯ ನಾಗಾಲ್ಯಾಂಡ್ ರಾಜ್ಯಸಭಾ ಸದಸ್ಯೆ ಫಾಂಗ್ನಾನ್ ಕೊನ್ಯಾಕ್ ಗಂಭೀರ ಆರೋಪ ಮಾಡಿದ್ದಾರೆ. ಈ ಮೊದಲು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಳ್ಳಿದ್ದರಿಂದ ನನಗೆ ಗಾಯವಾಗಿದೆ ಎಂದು ಆರೋಪಿಸಿದ್ದರು.
ನವದೆಹಲಿ: ಈ ಬಾರಿಯ ಚಳಿಗಾಲದ ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ಪೀಠಗಳ ಮೇಲೆ ದಾಳಿ ಮಾಡುವ ಮೂಲಕ ಹಲವಾರು ವಿವಾದಗಳೊಂದಿಗೆ ಮುಕ್ತಾಯಗೊಳ್ಳುತ್ತಿದೆ. ರಾಹುಲ್ ಗಾಂಧಿ ತನ್ನ ಜೊತೆ ಅನುಚಿತವಾಗಿ ವರ್ತನೆ ಮಾಡಿದ್ದು, ತನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿಯ ಮಹಿಳಾ ಸಂಸದೆ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯಸಭಾ ಅಧ್ಯಕ್ಷರಿಗೆ ದೂರನ್ನೂ ನೀಡಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನ ಆವರಣದಲ್ಲಿ ತನ್ನೊಂದಿಗೆ ಅನುಚಿತ ವರ್ತನೆ ಮಾಡಿದ್ದಾರೆ ಎಂದು ನಾಗಾಲ್ಯಾಂಡ್‌ನ ಬಿಜೆಪಿ ಸಂಸದೆ ಫಾಂಗ್ನಾನ್ ಕೊನ್ಯಾಕ್ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಇಬ್ಬರು ಬಿಜೆಪಿಯ ಸಂಸದರಿಗೆ ಗಾಯಗಳನ್ನು ಉಂಟುಮಾಡಿದ್ದಾರೆ ಎಂದು ಆರೋಪಿಸಿದ ವರದಿಗಳು ಹೊರಬಂದ ಕೆಲವೇ ಗಂಟೆಗಳ ನಂತರ ಈ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧದ ವಿಪಕ್ಷಗಳ ಅವಿಶ್ವಾಸ ನಿರ್ಣಯ ವಜಾ
ನಾಗಾಲ್ಯಾಂಡ್‌ನಿಂದ ರಾಜ್ಯಸಭೆಗೆ ಚುನಾಯಿತರಾದ ಮೊದಲ ಮಹಿಳೆ ಫಾಂಗ್ನಾನ್ ಕೊನ್ಯಾಕ್, ರಾಹುಲ್ ಗಾಂಧಿ ಅವರು ಸಂಸತ್ತಿನ ಪ್ರವೇಶದ್ವಾರದ ಬಳಿ ನನ್ನ ಬಳಿ ಬಂದು, ಜಗಳವಾಡಿದ್ದಾರೆ. ಈ ವೇಳೆ ಮೈ ಮುಟ್ಟಿ ಅನುಚಿತ ವರ್ತನೆ ತೋರಿದ್ದಾರೆ. ಇದರಿಂದ ನನಗೆ ಮುಜುಗರವಾಗಿದೆ ಮತ್ತು ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
Rajya Sabha MP S Phangnon Konyak writes to the Chairman Rajya Sabha alleging misbehaviour by Congress MP and LoP Rahul Gandhi with her.
“My dignity and self-esteem has been deeply hurt by LoP Rahul Gandhi,” she writes in the letter to Chairman Rajya Sabha. pic.twitter.com/zPOI5FeR6d
— ANI (@ANI) December 19, 2024
ಸಂಸತ್ ಭವನದ ಮಕರ ದ್ವಾರದ ಮೆಟ್ಟಿಲುಗಳ ಬಳಿ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರಕ್ಕೆ ಮಾರ್ಗವನ್ನು ರಚಿಸಿದಾಗ ತಾನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ ಎಂದು ನಾಗಾಲ್ಯಾಂಡ್ ಸಂಸದೆ ಹೇಳಿದ್ದಾರೆ. ಆಗ ಇದ್ದಕ್ಕಿದ್ದಂತೆ, ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ಪಕ್ಷದ ಸದಸ್ಯರು ನನ್ನ ಮುಂದೆ ಬಂದರು. ಅವರಿಗಾಗಿ ಒಂದು ಮಾರ್ಗವನ್ನು ರಚಿಸಲಾಗಿದ್ದರೂ ಬೇಕೆಂದೇ ನನ್ನೆದುರು ಬಂದು ಅನುಚಿತವಾಗಿ ವರ್ತಿಸಿದರು ಎಂದು ದೂರಿನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಭಾರತೀಯ ಮೀನುಗಾರರ ಬಂಧನದ ಬಗ್ಗೆ ಚರ್ಚಿಸಲು ಸಚಿವ ಜೈಶಂಕರ್ಗೆ ಪತ್ರ ಬರೆದ ರಾಹುಲ್ ಗಾಂಧಿ
ಈ ಎಲ್ಲ ಗದ್ದಲದ ನಡುವೆಯೇ ರಾಜ್ಯಸಭೆ ಕಲಾಪವನ್ನು 1 ದಿನದ ಮಟ್ಟಿಗೆ ಮುಂದೂಡಲಾಯಿತು. ಸಂಸತ್ತಿನ ಪ್ರವೇಶದ ಮೆಟ್ಟಿಲುಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮಹಿಳಾ ಸಂಸದರ ವಿರುದ್ಧ ಬಲಪ್ರಯೋಗ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಕಿರಣ್ ರಿಜಿಜು ಆರೋಪಿಸಿದ ನಂತರ ಗದ್ದಲದ ನಡುವೆ ರಾಜ್ಯಸಭೆಯ ಕಲಾಪವನ್ನು ಗುರುವಾರ ದಿನಕ್ಕೆ ಮುಂದೂಡಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Thu, 19 December 24