AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧದ ವಿಪಕ್ಷಗಳ ಅವಿಶ್ವಾಸ ನಿರ್ಣಯ ವಜಾ

ರಾಜ್ಯಸಭಾ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಇಂಡಿಯಾ ಬಣದ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯವನ್ನು ಮೇಲ್ಮನೆಯ ಉಪಾಧ್ಯಕ್ಷ ವಜಾಗೊಳಿಸಿದ್ದಾರೆ. ಜಗದೀಪ್ ಧನಕರ್ ಮೇಲ್ಮನೆಯಲ್ಲಿ ವಿಪಕ್ಷಗಳಿಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ, ಬಿಜೆಪಿ ಪರವಾಗಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತಿತರ ಇಂಡಿಯಾ ಬಣದ ರಾಜ್ಯಸಭಾ ಸದಸ್ಯರು ಜಗದೀಪ್ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು.

ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧದ ವಿಪಕ್ಷಗಳ ಅವಿಶ್ವಾಸ ನಿರ್ಣಯ ವಜಾ
Jagdeep Dhankar (3)
ಸುಷ್ಮಾ ಚಕ್ರೆ
|

Updated on:Dec 19, 2024 | 4:10 PM

Share

ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ. 14 ದಿನಗಳ ನೋಟಿಸ್ ನೀಡಿಲ್ಲ ಮತ್ತು ಜಗದೀಪ್ ಧನಕರ್ ಅವರ ಹೆಸರನ್ನು ಸರಿಯಾಗಿ ಬರೆಯಲಾಗಿಲ್ಲ ಎಂಬ ಕಾರಣಕ್ಕಾಗಿ ವಿಪಕ್ಷಗಳ ಮನವಿಯನ್ನು ತಿರಸ್ಕರಿಸಲಾಗಿದೆ. ರಾಜ್ಯಸಭಾ ಉಪಾಧ್ಯಕ್ಷರು ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ್ದಾರೆ.

ಈ ಕುರಿತು ಎನ್​ಡಿಟಿವಿ ವರದಿ ಮಾಡಿದೆ. ಮೂಲಗಳ ಪ್ರಕಾರ, ರಾಜ್ಯಸಭಾ ಉಪಾಧ್ಯಕ್ಷರ ವಿರುದ್ಧ ನಿರೂಪಣೆಯನ್ನು ರಚಿಸಲು ಜಂಟಿ ಪತ್ರಿಕಾಗೋಷ್ಠಿಯನ್ನು ಸಹ ನಡೆಸಲಾಯಿತು. ಆದರೆ, ಅವಿಶ್ವಾಸ ನಿರ್ಣಯದ ತಿರಸ್ಕಾರಕ್ಕೆ ಕಾರಣಗಳನ್ನು ತಿಳಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ಅಂತಹ ಪ್ರಸ್ತಾವನೆಯನ್ನು ಸಲ್ಲಿಸಲು ಕಡ್ಡಾಯವಾಗಿರುವ 14 ದಿನಗಳ ನೋಟಿಸ್ ನೀಡಲಾಗಿಲ್ಲ ಎಂದು ಹೇಳಿದರು. ಹಾಗೇ, ಜಗದೀಪ್ ಧನಕರ್ ಅವರ ಹೆಸರನ್ನು ಸಹ ಸರಿಯಾಗಿ ಬರೆದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಜಗದೀಪ್ ಧನಕರ್ ಬಿಜೆಪಿ ಸರ್ಕಾರದ ವಕ್ತಾರ; ಅವಿಶ್ವಾಸ ನಿರ್ಣಯಕ್ಕೆ ಮಲ್ಲಿಕಾರ್ಜುನ ಖರ್ಗೆ ಸಮರ್ಥನೆ

ಜಗದೀಪ್ ಧನಕರ್ ಅವರನ್ನು “ಸರ್ಕಾರದ ಅತಿದೊಡ್ಡ ವಕ್ತಾರ” ಎಂದು ಟೀಕಿಸಿದ್ದ ವಿರೋಧ ಪಕ್ಷಗಳು ಜಗದೀಪ್ ಧನಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ರಾಜ್ಯಸಭೆಯ ಕಲಾಪಗಳಿಗೆ ಅಡ್ಡಿಯಾಗಿದ್ದಾರೆ. ಜಗದೀಪ್ ಧನಕರ್ ಅವರ ಕ್ರಮಗಳು ಭಾರತದ ಘನತೆಗೆ ಧಕ್ಕೆ ತಂದಿವೆ ಎಂದು ಆರೋಪಿಸಲಾಗಿತ್ತು.

ಸಂವಿಧಾನದ ಪರಿಚ್ಛೇದ 67(ಬಿ) ಅಡಿಯಲ್ಲಿ ಸಲ್ಲಿಸಲಾದ ಈ ಪ್ರಸ್ತಾವನೆಯನ್ನು ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಸಹ ಬೆಂಬಲಿಸಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Thu, 19 December 24