ಟೊಮೆಟೊ(Tomato) ಬೆಲೆ ಗಗನಕ್ಕೇರುತ್ತಿದೆ, ಇದರ ನಡುವೆ ಟೊಮೆಟೊ ಬಗ್ಗೆ ಹತ್ತು ಹಲವು ರೀಲ್ಸ್ಗಳು, ಕಥೆಗಳು ಹುಟ್ಟಿಕೊಳ್ಳುತ್ತಿವೆ, ಮನೆಯಲ್ಲಿ ಕೂಡ ತೀರಾ ಅಚ್ಚುಕಟ್ಟಾಗಿ ಹೆಂಗಸರು ಅಡುಗೆ ಮಾಡುತ್ತಿದ್ದಾರೆ, ಇದೆಲ್ಲದರ ನಡುವೆ ಪತ್ನಿಯನ್ನು ಕೇಳದೇ ಟೊಮೆಟೊ ಹಾಕಿ ಅಡುಗೆ ಮಾಡಿದ್ದಕ್ಕೆ ಪತ್ನಿ ಮನೆಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್ನಲ್ಲಿ ನಡೆದಿದೆ. ಟೊಮೆಟೊ ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಟಿಫಿನ್ ಸರ್ವೀಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ಇತ್ತೀಚೆಗೆ ತನ್ನ ಹೆಂಡತಿಯನ್ನು ಕೇಳದೆ ಅಡುಗೆ ಮಾಡುವಾಗ ಎರಡು ಟೊಮೆಟೊಗಳನ್ನು ಬಳಸಿದ್ದರಿಂದ ದಂಪತಿ ನಡುವೆ ಭಾರಿ ಜಗಳವಾಗಿದೆ.
ಮತ್ತಷ್ಟು ಓದಿ: Tomato: ಬೆಲೆ ಏರಿಕೆಯಾದಾಗಿಂದ ಟೊಮೆಟೊವನ್ನು ಕಾಪಾಡಿಕೊಳ್ಳಲು ರೈತರ ಸಾಹಸ: ರಾಜಸ್ಥಾನದಲ್ಲಿ ಒಂದೂವರೆ ಕ್ವಿಂಟಾಲ್ ಕಳ್ಳತನ
ಬರ್ಮನ್ ಪ್ರಕಾರ, ಅವರ ಪತ್ನಿ ಟೊಮೆಟೊ ಬಳಕೆಯ ಬಗ್ಗೆ ತನ್ನನ್ನು ಕೇಳದ ಕಾರಣ ಅಸಮಾಧಾನಗೊಂಡಿದ್ದರು.
ವಾದದ ಬಳಿಕ ತಮ್ಮ ಮಗಳೊಂದಿಗೆ ಮನೆಯನ್ನು ಬಿಡಲು ನಿರ್ಧರಿಸಿದರು. ಅವರು ಅವರನ್ನು ಹುಡುಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ, ಅವರು ಸಹಾಯಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿದರು.
ಸಂಜೀವ್ ಅವರು ಮಾಡುತ್ತಿದ್ದ ಖಾದ್ಯಕ್ಕೆ ಎರಡು ಟೊಮೆಟೊ ಹಾಕಿದ್ದರಿಂದ ವಾಗ್ವಾದ ಶುರುವಾಯಿತು. ಮೂರು ದಿನದಿಂದ ಪತ್ನಿಯೊಂದಿಗೆ ಮಾತನಾಡಿಲ್ಲ, ಎಲ್ಲಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಂಜೀವ್ ಅವರ ಪತ್ನಿಯನ್ನು ಸಂಪರ್ಕಿಸುವುದಾಗಿ ಮತ್ತು ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ