14 ಸಾವಿರ ಅಡಿ ಎತ್ತರದಲ್ಲಿ ಹ್ಯಾಂಡ್ಪಂಪ್ ಮೂಲಕ ಸಿಹಿ ನೀರು ಕುಡಿಯುವುದೇ ಅದ್ಭುತ ಅನುಭವ: ಅನುರಾಗ್ ಠಾಕೂರ್
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು 14 ಸಾವಿರ ಅಡಿ ಎತ್ತರದಲ್ಲಿರುವ ಮನಾಲಿ-ಲೇಹ್ ಹೆದ್ದಾರಿಯಲ್ಲಿ ಹ್ಯಾಂಡ್ಪಂಪ್ ಮೂಲಕ ನೀರು ಕುಡಿದಿದ್ದು, ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್(Anurag Singh Thakur) ಅವರು 14 ಸಾವಿರ ಅಡಿ ಎತ್ತರದಲ್ಲಿರುವ ಮನಾಲಿ-ಲೇಹ್ ಹೆದ್ದಾರಿಯಲ್ಲಿ ಹ್ಯಾಂಡ್ಪಂಪ್ ಮೂಲಕ ನೀರು ಕುಡಿದಿದ್ದು, ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 14 ಸಾವಿರ ಅಡಿ ಎತ್ತರದಲ್ಲಿ ಹ್ಯಾಂಡ್ಪಂಪ್ ಮೂಲಕ ನೀರು ಕುಡಿಯುವುದು ಅದ್ಭುತ ಅನುಭವ ಎಂದಿದ್ದಾರೆ. ಈ ಪ್ರದೇಶದ ಮನಾಲಿ ಹಾಗೂ ಲೇಹ್ ಹೆದ್ದಾರಿಯಲ್ಲಿರುವ ಡೆಬ್ರಿಂಗ್ ಗ್ರಾಮದಲ್ಲಿದೆ.ಈ ವಿಡಿಯೋವನ್ನು 11 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 1500ಕ್ಕೂ ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದಾರೆ.
ಅದಕ್ಕೂ ಮುನ್ನ ಅನುರಾಗ್ ಠಾಕೂರ್ ಮಾತನಾಡಿ, ಭಾರತ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು. ಲಡಾಖ್ಗೆ ಎರಡು ದಿನಗಳ ಭೇಟಿಯ ಕೊನೆಯ ದಿನದಂದು ಭಾರತ-ಚೀನಾ ಗಡಿಯ ಸಮೀಪವಿರುವ ಚುಮುರ್ ಪ್ರದೇಶದಲ್ಲಿ ಸೇನೆ ಹಾಗೂ ಟಿಮೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಿದರು.
ಭದ್ರತಾ ಪಡೆಗಳ ಧೈರ್ಯವನ್ನು ಶ್ಲಾಘಿಸಿದ ಠಾಕೂರ್, ಅವರ ಸಂಕಲ್ಪದಿಂದಾಗಿ ದೇಶದ ಗಡಿಗಳು ಭದ್ರವಾಗಿವೆ ಎಂದು ಹೇಳಿದರು. ಸಶಸ್ತ್ರ ಪಡೆಗಳ ಎಲ್ಲಾ ಮೂರು ವಿಭಾಗಗಳನ್ನು ಬಲಪಡಿಸಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು. ದೇಶದ ಒಳಿತಿಗಾಗಿ ಶ್ರಮಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
14000 फ़ीट की ऊँचाई पर मनाली-लेह हाईवे पर ‘डीबरिंग’ गाँव में हैंडपंप चला के मीठा पानी पीना एक अलग अनुभूति दे गया। pic.twitter.com/7tiNhX5lu5
— Anurag Thakur (@ianuragthakur) July 12, 2023
ಠಾಕೂರ್ ಅವರು ಜುಲೈ 14, 15 ಮತ್ತು 16 ರಂದು ಹಮೀರ್‌ಪುರ ಸಂಸದೀಯ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. ಅನುರಾಗ್ ಠಾಕೂರ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಭಾರೀ ಮಳೆಯಿಂದ ಹಾನಿಗೊಳಗಾದ ಜನರನ್ನು ಭೇಟಿ ಮಾಡಲಿದ್ದಾರೆ.
ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಹಮೀರ್‌ಪುರ ಸಂಸದೀಯ ಕ್ಷೇತ್ರದ ಪ್ರವಾಸದಲ್ಲಿ, ನಾನು ಪ್ರವಾಹ ಪೀಡಿತ ಪ್ರದೇಶಗಳನ್ನು ಪರಿಶೀಲಿಸುತ್ತೇನೆ ಮತ್ತು ಮಳೆ ಪೀಡಿತ ಜನರನ್ನು ಭೇಟಿ ಮಾಡುತ್ತೇನೆ ಮತ್ತು ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಪಡೆಯಲು ಪ್ರಯತ್ನಿಸುತ್ತೇನೆ. ಹಿಮಾಚಲದ ಪರಿಸ್ಥಿತಿಯ ಮೇಲೆ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ