AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato: ಪತ್ನಿಯನ್ನು ಕೇಳದೇ ಟೊಮೆಟೊ ಹಾಕಿ ಅಡುಗೆ ಮಾಡಿದ ಪತಿ, ಕೋಪಗೊಂಡು ಮನೆಬಿಟ್ಟು ಹೋದ ಒಡತಿ

ಟೊಮೆಟೊ(Tomato) ಬೆಲೆ ಗಗನಕ್ಕೇರುತ್ತಿದೆ, ಇದರ ನಡುವೆ ಟೊಮೆಟೊ ಬಗ್ಗೆ ಹತ್ತು ಹಲವು ರೀಲ್ಸ್​ಗಳು, ಕಥೆಗಳು ಹುಟ್ಟಿಕೊಳ್ಳುತ್ತಿವೆ, ಮನೆಯಲ್ಲಿ ಕೂಡ ತೀರಾ ಅಚ್ಚುಕಟ್ಟಾಗಿ ಹೆಂಗಸರು ಅಡುಗೆ ಮಾಡುತ್ತಿದ್ದಾರೆ.

Tomato: ಪತ್ನಿಯನ್ನು ಕೇಳದೇ ಟೊಮೆಟೊ ಹಾಕಿ ಅಡುಗೆ ಮಾಡಿದ ಪತಿ, ಕೋಪಗೊಂಡು ಮನೆಬಿಟ್ಟು ಹೋದ ಒಡತಿ
ಪತಿ-ಪತ್ನಿImage Credit source: India Today
ನಯನಾ ರಾಜೀವ್
|

Updated on: Jul 13, 2023 | 10:40 AM

Share

ಟೊಮೆಟೊ(Tomato) ಬೆಲೆ ಗಗನಕ್ಕೇರುತ್ತಿದೆ, ಇದರ ನಡುವೆ ಟೊಮೆಟೊ ಬಗ್ಗೆ ಹತ್ತು ಹಲವು ರೀಲ್ಸ್​ಗಳು, ಕಥೆಗಳು ಹುಟ್ಟಿಕೊಳ್ಳುತ್ತಿವೆ, ಮನೆಯಲ್ಲಿ ಕೂಡ ತೀರಾ ಅಚ್ಚುಕಟ್ಟಾಗಿ ಹೆಂಗಸರು ಅಡುಗೆ ಮಾಡುತ್ತಿದ್ದಾರೆ, ಇದೆಲ್ಲದರ ನಡುವೆ ಪತ್ನಿಯನ್ನು ಕೇಳದೇ ಟೊಮೆಟೊ ಹಾಕಿ ಅಡುಗೆ ಮಾಡಿದ್ದಕ್ಕೆ ಪತ್ನಿ ಮನೆಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್​ನಲ್ಲಿ ನಡೆದಿದೆ. ಟೊಮೆಟೊ ಪತಿ-ಪತ್ನಿಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ಟಿಫಿನ್ ಸರ್ವೀಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ಇತ್ತೀಚೆಗೆ ತನ್ನ ಹೆಂಡತಿಯನ್ನು ಕೇಳದೆ ಅಡುಗೆ ಮಾಡುವಾಗ ಎರಡು ಟೊಮೆಟೊಗಳನ್ನು ಬಳಸಿದ್ದರಿಂದ ದಂಪತಿ ನಡುವೆ ಭಾರಿ ಜಗಳವಾಗಿದೆ.

ಮತ್ತಷ್ಟು ಓದಿ: Tomato: ಬೆಲೆ ಏರಿಕೆಯಾದಾಗಿಂದ ಟೊಮೆಟೊವನ್ನು ಕಾಪಾಡಿಕೊಳ್ಳಲು ರೈತರ ಸಾಹಸ: ರಾಜಸ್ಥಾನದಲ್ಲಿ ಒಂದೂವರೆ ಕ್ವಿಂಟಾಲ್ ಕಳ್ಳತನ

ಬರ್ಮನ್ ಪ್ರಕಾರ, ಅವರ ಪತ್ನಿ ಟೊಮೆಟೊ ಬಳಕೆಯ ಬಗ್ಗೆ ತನ್ನನ್ನು ಕೇಳದ ಕಾರಣ ಅಸಮಾಧಾನಗೊಂಡಿದ್ದರು. ವಾದದ ಬಳಿಕ ತಮ್ಮ ಮಗಳೊಂದಿಗೆ ಮನೆಯನ್ನು ಬಿಡಲು ನಿರ್ಧರಿಸಿದರು. ಅವರು ಅವರನ್ನು ಹುಡುಕಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ, ಅವರು ಸಹಾಯಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿದರು.

ಸಂಜೀವ್ ಅವರು ಮಾಡುತ್ತಿದ್ದ ಖಾದ್ಯಕ್ಕೆ ಎರಡು ಟೊಮೆಟೊ ಹಾಕಿದ್ದರಿಂದ ವಾಗ್ವಾದ ಶುರುವಾಯಿತು. ಮೂರು ದಿನದಿಂದ ಪತ್ನಿಯೊಂದಿಗೆ ಮಾತನಾಡಿಲ್ಲ, ಎಲ್ಲಿದ್ದಾಳೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. ಸಂಜೀವ್ ಅವರ ಪತ್ನಿಯನ್ನು ಸಂಪರ್ಕಿಸುವುದಾಗಿ ಮತ್ತು ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ?
ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ?