Madhya Pradesh: 40 ಮಕ್ಕಳಿದ್ದ ಶಾಲಾ ಬಸ್ ಅಪಘಾತ, 1 ಮಗು ಸಾವು

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 27, 2022 | 12:52 PM

40 ಮಕ್ಕಳಿದ್ದ ಶಾಲಾ ಬಸ್ ಮಧ್ಯಪ್ರದೇಶದ ಸಾಗರ್‌ನ ರಹತ್‌ಗಢದಲ್ಲಿ ಅಪಘಾತಕ್ಕೀಡಾಗಿದೆ. ಒಂದು ಮಗು ಸಾವನ್ನಪ್ಪಿದೆ.

Madhya Pradesh: 40 ಮಕ್ಕಳಿದ್ದ ಶಾಲಾ ಬಸ್ ಅಪಘಾತ, 1 ಮಗು ಸಾವು
Madhya Pradesh
Follow us on

ಮಧ್ಯಪ್ರದೇಶ: 40 ಮಕ್ಕಳಿದ್ದ ಶಾಲಾ ಬಸ್ ಮಧ್ಯಪ್ರದೇಶದ ಸಾಗರ್‌ನ ರಹತ್‌ಗಢದಲ್ಲಿ ಅಪಘಾತಕ್ಕೀಡಾಗಿದೆ. ಒಂದು ಮಗು ಸಾವನ್ನಪ್ಪಿದೆ. ಎಎನ್‌ಐ ವರದಿ ಮಾಡಿರುವಂತೆ ಉಳಿದ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಸಾಗರ್ ಕಲೆಕ್ಟರ್ ದೀಪಕ್ ಆರ್ಯ ಹೇಳಿದ್ದಾರೆ.

40 ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್ ಅಪಘಾತಕ್ಕೀಡಾಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ಸಾಗರ್‌ನ ರಹತ್‌ಗಢದಲ್ಲಿ ನಡೆದಿದೆ. ಸಾಗರದ ಜಿಲ್ಲಾಧಿಕಾರಿ ದೀಪಕ್ ಆರ್ಯ ಪ್ರಕಾರ, ಉಳಿದ ಎಲ್ಲಾ ಮಕ್ಕಳು ಸುರಕ್ಷಿತವಾಗಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಪ್ರಕಾರ, ಅಪಘಾತ ಸಂಭವಿಸಿದಾಗ ಶಾಲಾ ಬಸ್‌ನ ಚಾಲಕ ಬಸ್ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದನು. ಇದೀಗ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಮವಾರ ಮಹಾರಾಷ್ಟ್ರದ ಅಂಬರನಾಥದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಅಂಬರನಾಥ್ ರೋಟರಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಮಿನಿ ಸ್ಕೂಲ್ ಬಸ್ ಪಲ್ಟಿಯಾಗಿದೆ. ಶಾಲಾ ಬಸ್ ಪಲ್ಟಿಯಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಪಲ್ಟಿಯಾಗಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್, ಸ್ಥಳೀಯರು ಮತ್ತು ಸುತ್ತಮುತ್ತಲಿನ ಜನರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಲ್ಟಿಯಾದ ಬಸ್‌ನಿಂದ ಮಕ್ಕಳನ್ನು ರಕ್ಷಿಸಿದ್ದರಿಂದ ಯಾವುದೇ ಹೆಚ್ಚಿನ ಗಾಯಗಳು ವರದಿಯಾಗಿಲ್ಲ.

 

 

 

Published On - 12:01 pm, Tue, 27 September 22