ಈ ಗ್ರಾಮದಲ್ಲಿ ಪ್ರತಿದಿನ ಪ್ರತಿಯೊಬ್ಬರು ಒಂದೂವರೆ ಗಂಟೆ ಮೊಬೈಲ್ ಆಫ್ ಮಾಡ್ಬೇಕು, ಏನಿದು ಲಾಜಿಕ್..?
ಈಗಿನ ಮಕ್ಕಳಿಗೆ ಮೊಬೈಲ್ ಇಲ್ಲದೆ ಊಟ ಮಾಡಿಸುವುದೇ ಕಷ್ಟ ಆಗ್ಬೇಟ್ಟಿದೆ. ಹೀಗಿರುವಾಗ ಈ ಹಳ್ಳಿಯೊಂದರಲ್ಲಿ ಪ್ರತಿದಿನ ಪ್ರತಿಯೊಬ್ಬರು ತಮ್ಮ-ತಮ್ಮ ಮೊಬೈಲ್ ಆಫ್ ಮಾಡಿಕೊಳ್ಳಬೇಕು. ಅಚ್ಚರಿ ಎನಿಸಿದರೂ ಸತ್ಯ..
ಸಾಂಗ್ಲಿ (ಮಹಾರಾಷ್ಟ್ರ): ಈಗಿನ ಕಾಲದಲ್ಲಿ ಮೊಬೈಲ್ (Mobile) ಬಳಕೆ ಮಾಡದೆ ಇರುವವರು ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇನ್ನು ಕೆಲವು ಮೊಬೈಲ್ ಗಳನ್ನ ಮಾತನಾಡುವುದಕ್ಕೆ ಬಳಸಿದ್ರೆ, ಇನ್ನುಷ್ಟು ಜನ ಇಂಟೆರ್ ನೆಟ್ನಲ್ಲಿ (Internet) ಗೇಮ್ಸ್ ಆಡಲು ಮತ್ತು ಸಾಮಾಜಿಕ ಜಾಲತಾಣವನ್ನು (Social Media) ಬಳಸಲು ಹೆಚ್ಚಿನ ಸಮಯವನ್ನ ಕೊಡುತ್ತಿದ್ದಾರೆ.
ಸೆಕೆಂಡ್‌ಗಳ ಕಾಲವೂ ಸ್ಮಾರ್ಟ್‌ಫೋನ್ ಬಿಟ್ಟಿರಲಾಗದಷ್ಟು ಇಂಟರ್ನೆಟ್ ಯುಗ ಮನುಷ್ಯರ ಜೀವನವನ್ನು ಆವರಿಸಿಕೊಂಡಿದೆ. ಹೀಗಿರುವಾಗ ಈ ಹಳ್ಳಿಯೊಂದರಲ್ಲಿ ಪ್ರತಿದಿನ ಪ್ರತಿಯೊಬ್ಬರು ಸಂಜೆ ಒಂದುವರೆ ಗಂಟೆ ಕಾಲ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡ್ತಾರೆ.
ಹೌದು…ಅಚ್ಚರಿ ಎನಿಸಿದರೂ ಸತ್ಯ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾತ್ರಿ 7 ಗಂಟೆಯಿಂದ 8.30ರವರೆಗೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ ಎಲ್ಲವೂ ಬಂದ್ ಆಗುತ್ತದೆ. ಅಷ್ಟಕ್ಕೂ ಆಡಳಿತ ವ್ಯವಸ್ಥೆಯಾಗಲಿ ಅಥವಾ ಇತರ ಮೂಲಗಳಿಂದಾಗಲೀ ಬಂದ್ ಆಗುವುದಲ್ಲ. ಸ್ವತಃ ತಾವೇ ಸ್ವಯಂ ಪ್ರೇರಿತರಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೊಬೈಲ್ ಸ್ವಿಚ್ ಆಫ್ ಮಾಡಬೇಕು.
ರಾತ್ರಿ 7 ಗಂಟೆಗೆ ಸರಿಯಾಗಿ ಸೈರನ್ ಮೊಳಗುತ್ತದೆ. ಸೈರನ್ ಮೊಳಗುತ್ತಿದ್ದಂತೆಯೇ ಎಲ್ಲಾ ಮನೆಗಳಲ್ಲಿಯೂ ಮೊಬೈಲ್, ಲ್ಯಾಪ್‌ಟಾಪ್ ಸೇರಿದಂತೆ ಇಂಟರ್ನೆಟ್ ಬಳಕೆ ಮಾಡುವ ಸಾಧನಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಈ ಅವಧಿಯಲ್ಲಿ ಮಕ್ಕಳು, ಯುವಕರು, ಹಿರಿಯರು ಪುಸ್ತಕ ಓದುವುದು, ಹೊಸ ವಿಷಯಗಳ ಕುರಿತು ಮಾತನಾಡುವುದು ಸೇರಿದಂತೆ ಇತರೆ ಒಳ್ಳೆ ಹವ್ಯಾಸ ಬೆಳಕಿಸಿಕೊಳ್ಳಲು ಸೂಚಿಸಲಾಗಿದೆ. ವಿಶೇಷವೆಂದರೆ ಈ ನಿಯಮ ಹೇರಿದ ನಂತರ ಅಲ್ಲಿ ಸಂಬಂಧಗಳೂ ಸುಧಾರಿಸಿವೆ, ಮಕ್ಕಳು ಓದಿನಲ್ಲೂ ಗಮನಾರ್ಹ ಬೆಳವಣಿಗೆ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಷ್ಟಕ್ಕೂ ಪ್ರತಿದಿನ ಕಡ್ಡಾಯವಾಗಿ ಒಂದೂವರೆ ಗಂಟೆ ಫೋನ್ ಆಫ್ ಮಾಡಲು ಪ್ರಮುಖ ಕಾರಣ ಅಲ್ಲಿನ ಮಕ್ಕಳು ಮೊಬೈಲ್ ಬಳಕೆಗೆ ಅಂಟಿಕೊಂಡಿರುವುದು. ಮಕ್ಕಳ ಅತಿಯಾದ ಮೊಬೈಲ್ ಬಳಕೆಯು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊಬೈಲ್ ಬಳಕೆಯಿಂದಾಗಿ ಕಲಿಕೆಯಲ್ಲೂ ಕಳಪೆ ಸಾಧನೆ ತೋರಿಸಿದ ಮಕ್ಕಳನ್ನು ಸರಿ ದಾರಿಗೆ ತರುವುದಕ್ಕೆ ಶಿಕ್ಷಕರು ಹೈರಾಣಾಗಿದ್ದರು. ಕೊನೆಗೆ ಗ್ರಾಮದ ಮುಖ್ಯಸ್ಥರ ಬಳಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಈ ತೀರ್ಮಾನಕ್ಕೆ ಬಂದಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ