ತಡವಾಗಿ ಬಂದಿದ್ದಕ್ಕೆ ಬೈದ ಪ್ರಿನ್ಸಿಪಾಲ್​ಗೆ ಟಾಯ್ಲೆಟ್​ನಲ್ಲಿ ಶೂಟ್ ಮಾಡಿ ಕೊಂದ ವಿದ್ಯಾರ್ಥಿ!

|

Updated on: Dec 06, 2024 | 9:29 PM

ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲೆಯ ವಿದ್ಯಾರ್ಥಿಯೊಬ್ಬ ತಮ್ಮ ಪ್ರಾಂಶುಪಾಲರನ್ನು ಟಾಯ್ಲೆಟ್​ ರೂಂನಲ್ಲಿ ಶೂಟ್ ಮಾಡಿ ಕೊಂದು ಪರಾರಿಯಾಗಿದ್ದಾನೆ. ಶಾಲೆಯ ವಾಶ್ ರೂಂ ಒಳಗೆ ಪ್ರಾಂಶುಪಾಲರ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದನ್ನು ನೋಡಿದ ಬೇರೆ ವಿದ್ಯಾರ್ಥಿಗಳು ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ.

ತಡವಾಗಿ ಬಂದಿದ್ದಕ್ಕೆ ಬೈದ ಪ್ರಿನ್ಸಿಪಾಲ್​ಗೆ ಟಾಯ್ಲೆಟ್​ನಲ್ಲಿ ಶೂಟ್ ಮಾಡಿ ಕೊಂದ ವಿದ್ಯಾರ್ಥಿ!
ಸಾಂದರ್ಭಿಕ ಚಿತ್ರ
Follow us on

ಛತ್ತರ್‌ಪುರ: ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಇಂದು ಆಘಾತಕಾರಿ ಘಟನೆಯೊಂದು ನಡೆದಿದ್ದು, ಶಾಲೆಯ ಶೌಚಾಲಯದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಾಲೆಯ ಪ್ರಾಂಶುಪಾಲರನ್ನು ಗುಂಡಿಕ್ಕಿ ಕೊಂದಿದ್ದಾನೆ. ಪ್ರಾಂಶುಪಾಲರ ತಲೆಗೆ ಗುಂಡು ತಗುಲಿದ್ದು, ಬಳಿಕ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಧಮೋರಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಮತ್ತು ಪ್ರಾಂಶುಪಾಲರು ಒಂದೇ ಸಮಯದಲ್ಲಿ ಶಾಲೆಯ ವಾಶ್ ರೂಂ ಒಳಗೆ ಇದ್ದರು. ಮಧ್ಯಾಹ್ನ 1.30ರ ಸುಮಾರಿಗೆ ವಾಶ್‌ರೂಮ್ ಪ್ರವೇಶದ್ವಾರದಲ್ಲಿ ವಿದ್ಯಾರ್ಥಿಯು ಇದ್ದಕ್ಕಿದ್ದಂತೆ ಪಿಸ್ತೂಲ್ ತೆಗೆದುಕೊಂಡು ಪ್ರಾಂಶುಪಾಲರ ಮೇಲೆ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ: ಜೋಡಿ ಕೊಲೆಗೆ ಬೆಚ್ಚಿಬಿದ್ದ ಬೆಳಗಾವಿ: ಪ್ರೀತಿಗೆ ಅಡ್ಡಬಂದ ಪ್ರೇಯಸಿಯ ತಾಯಿ, ಮಗನ ಹತ್ಯೆ

ಬೆಳಗ್ಗೆ ಶಾಲೆಗೆ ತಡವಾಗಿ ಬಂದಿದ್ದಕ್ಕೆ ಆ ವಿದ್ಯಾರ್ಥಿಗೆ ಪ್ರಿನ್ಸಿಪಾಲ್ ಶಿಕ್ಷೆ ನೀಡಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಆತ ಶೂಟ್ ಮಾಡಿ ಕೊಂದು, ಸ್ಕೂಟರ್​​ನಲ್ಲಿ ಪರಾರಿಯಾಗಿದ್ದಾನೆ. ಶಾಲೆಯ ವಾಶ್ ರೂಂ ಪ್ರವೇಶದ್ವಾರದಲ್ಲಿ ಪ್ರಾಂಶುಪಾಲರ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅಲ್ಲದೆ, ಕೊಂದ ನಂತರ, ಆರೋಪಿ ವಿದ್ಯಾರ್ಥಿಯು ಅದೇ ಶಾಲೆಯಲ್ಲಿ ಓದುತ್ತಿದ್ದ ಗೆಳೆಯನೊಂದಿಗೆ ಪ್ರಿನ್ಸಿಪಾಲ್​ ಸ್ಕೂಟರ್‌ನಲ್ಲಿಯೇ ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿ ವಿದ್ಯಾರ್ಥಿ ಪಿಯುಸಿ ಓದುತ್ತಿದ್ದು, ಮೃತ ಪ್ರಾಂಶುಪಾಲರನ್ನು ಎಸ್‌ಕೆ ಸಕ್ಸೇನಾ (55) ಎಂದು ಗುರುತಿಸಲಾಗಿದೆ. ಅವರು ಕಳೆದ ಐದು ವರ್ಷಗಳಿಂದ ಧಮೋರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ