
ಭೋಪಾಲ್, ಮೇ 01: ಮನೆಯವರನ್ನೆಲ್ಲಾ ಒಪ್ಪಿಸಿ ತಾನು ಇಷ್ಟಪಟ್ಟವನನ್ನು ಮದುವೆ(Marriage)ಯಾಗಿದ್ದ ಯುವತಿಯ ಮೇಲೆ ಮದುವೆಯಾಗಿ ಮೂರೇ ದಿನಕ್ಕೆ ಮೈದುನ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಈ ವರ್ಷದ ಜನವರಿಯಲ್ಲಿ ಆಕೆಯ ಮದುವೆಯಾಗಿತ್ತು. ಮೂರೇ ದಿನಕ್ಕೆ ಆಕೆಯ ಗಂಡನ ಅಣ್ಣನೇ ಅತ್ಯಾಚಾರವೆಸಗಿದ್ದಾನೆ.
ಬೆರಾಸಿಯಾ ಪೊಲೀಸರು ಮೈದುನ, ಮಹಿಳೆಯ ಪತಿ ಹಾಗೂ ಇಬ್ಬರು ಸಂಬಂಧಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನನ್ನು ಬಂಧಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಗಳ ಪ್ರಕಾರ 20 ವರ್ಷದ ಮಹಿಳೆ ಜನವರಿಯಲ್ಲಿ tಆನು ಇಷ್ಟಪಟ್ಟ ಹುಡುಗನೊಂದಿಗೆ ಪ್ರೇಮ ವಿವಾಹವಾಗಿದ್ದರು.
ಮದುವೆಯಾದ ಮೂರು ದಿನಗಳ ನಂತರ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಪತಿಯ ಅಣ್ಣ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳೆ ಘಟನೆಯ ಬಗ್ಗೆ ತನ್ನ ಪತಿ ಮತ್ತು ಅತ್ತೆಗೆ ತಿಳಿಸಿದ್ದಳು ಆದರೆ ಇಬ್ಬರೂ ನಂಬಲು ನಿರಾಕರಿಸಿ ಮೌನವಾಗಿರಲು ಕೇಳಿಕೊಂಡರು. ಆದರೆ, ಆರೋಪಿ ಕೆಲವು ತಿಂಗಳ ನಂತರ ಮತ್ತೆ ಆಕೆಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ.
ಮತ್ತಷ್ಟು ಓದಿ: ಹೀಗೂ ಉಂಟೇ! ಗಂಡ ಗಡ್ಡ ಶೇವ್ ಮಾಡಿಲ್ಲ ಎಂದು ಮೈದುನನ ಜತೆ ಓಡಿ ಹೋದ ಮಹಿಳೆ
ಮಹಿಳೆ ತನ್ನ ಗಂಡನ ಮನೆಯಿಂದ ಓಡಿಹೋಗಿ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಇನ್ನೊಂದು ಘಟನೆಯಲ್ಲಿ, ಸುಖಿ ಸೆವಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ವಿಧವೆಯೊಬ್ಬರಿಗೆ ಮದುವೆಯಾಗುವ ಭರವಸೆ ನೀಡಿ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
27 ವರ್ಷದ ಮಹಿಳೆ ತನ್ನ ಪತಿ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಅರವಿಂದ್ ಜೈನ್ ತನಗೆ ಮದುವೆ ಭರವಸೆ ನೀಡಿದ್ದರು ಎಂದು ಆಕೆ ಹೇಳಿದ್ದಾಳೆ. ಏಪ್ರಿಲ್ 19ರಂದು ಆಕೆಯ ಹಣೆಗೆ ಸಿಂಧೂರವಿಟ್ಟು ನೀನೇ ನನ್ನ ಹೆಂಡತಿ ಎಂದು ಕರೆದೊಯ್ದು, 10 ದಿನಗಳ ಕಾಲ ಆಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Thu, 1 May 25