ಕ್ರೈಸ್ತ ಧರ್ಮದವರನ್ನು ಮದುವೆ ಆದ ಪ್ರೀತಿ ಜಿಂಟಾ ಮಕ್ಕಳು ಪಾಲಿಸುವ ಧರ್ಮ ಯಾವುದು?
Preity Zinta: ಪ್ರೀತಿ ಜಿಂಟಾ ತಮ್ಮ ಮಕ್ಕಳ ಧರ್ಮವನ್ನು ಬಹಿರಂಗಪಡಿಸಿದ್ದಾರೆ. ಅವರ ಪತಿ ನಾಸ್ತಿಕರಾಗಿದ್ದರೂ, ಅವರು ತಮ್ಮ ಮಕ್ಕಳಿಗೆ ಹಿಂದೂ ಸಂಸ್ಕೃತಿಯನ್ನು ಕಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಜಕೀಯ ಪ್ರವೇಶದ ವದಂತಿಗಳನ್ನು ಅವರು ನಿರಾಕರಿಸಿದ್ದಾರೆ. ವಿದೇಶದಲ್ಲಿ ವಾಸಿಸಿದ ನಂತರ ಭಾರತದ ಮಹತ್ವವನ್ನು ಅವರು ಇನ್ನಷ್ಟು ಅರ್ಥಮಾಡಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ.

ನಟಿ ಪ್ರೀತಿ ಜಿಂಟಾ (preity zinta) ತಮ್ಮ ದಿಟ್ಟ ಸ್ವಭಾವಕ್ಕೆ ಹೆಸರುವಾಸಿ ಆದವರು. ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರ ಪ್ರಶ್ನೆಗೆ ಉತ್ತರಿಸುವಾಗ, ಪ್ರೀತಿ ತನ್ನ ಮಕ್ಕಳ ಧರ್ಮದ ಬಗ್ಗೆ ಮಾತನಾಡಿದರು. ತನ್ನ ಮಕ್ಕಳು ಯಾವ ಧರ್ಮವನ್ನು ಅನುಸರಿಸುತ್ತಾರೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಈ ರೀತಿಯ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡಲು ಪ್ರೀತಿ ಇಷ್ಟಪಡೋದಿಲ್ಲ. ಆದಾಗ್ಯೂ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಅವರು ಏನಂದ್ರು ನೀವೇ ಕೇಳಿ.
ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸುವಾಗ, ನಟಿ ಪ್ರೀತಿ ಜಿಂಟಾ ತಮ್ಮ ಮಕ್ಕಳ ಬಗ್ಗೆ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿದರು. ಪ್ರೀತಿ 2016 ರಲ್ಲಿ ಜೀನ್ ಗುಡೆನಫ್ ಅವರನ್ನು ವಿವಾಹವಾದರು. 2021ರಲ್ಲಿ ಸರೊಗಸಿ ಮೂಲಕ ಅವಳಿ ಮಕ್ಕಳಿಗೆ ತಾಯಿಯಾದರು. ಪ್ರೀತಿ ಹಿಂದು ಮತ್ತು ಅವರ ಪತಿ ಕ್ರೈಸ್ತ ಧರ್ಮದವರು. ಹೀಗಾಗಿ, ಅವರ ಮಕ್ಕಳು ಯಾವ ಧರ್ಮ ಅನುಸರಿಸುತ್ತಾರೆ ಎನ್ನುವ ಪ್ರಶ್ನೆ ಮೂಡೋದು ಸಹಜ.
‘ಕ್ಷಮಿಸಿ, ಆದರೆ ನಾನು ಇದರ ಬಗ್ಗೆ ಇದ್ದಕ್ಕಿದ್ದಂತೆ ಮಾತನಾಡುತ್ತಿದ್ದೇನೆ.’ ಈ ಪ್ರಶ್ನೆ ನನಗೆ ಪಿಟಿಎಸ್‌ಡಿ (ಆಘಾತದ ನಂತರದ ಒತ್ತಡದ ಅಸ್ವಸ್ಥತೆ) ತರುತ್ತದೆ. ತಾಯಿಯಾಗಿ ವಿದೇಶದಲ್ಲಿ ವಾಸಿಸಿದ ನಂತರ, ನನ್ನ ಮಕ್ಕಳು ತಾವು ಅರ್ಧ ಭಾರತೀಯರು ಎಂಬುದನ್ನು ಮರೆಯದಂತೆ ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಪ್ರಿಯಾಂಶ್ ಶತಕ ಸಿಡಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಪ್ರೀತಿ ಜಿಂಟಾ; ವಿಡಿಯೋ
‘ನನ್ನ ಪತಿ ನಾಸ್ತಿಕರಾಗಿರುವುದರಿಂದ, ನಾವು ನಮ್ಮ ಮಕ್ಕಳಿಗೆ ಹಿಂದೂ ಸಂಸ್ಕೃತಿಯ ಬಗ್ಗೆ ಕಲಿಸುತ್ತಿದ್ದೇವೆ. ದುರದೃಷ್ಟವಶಾತ್, ನಾನು ಈ ಬಗ್ಗೆ ನಿರಂತರವಾಗಿ ಟೀಕೆಗಳನ್ನು ಎದುರಿಸುತ್ತೇನೆ ಮತ್ತು ಪ್ರತಿ ಬಾರಿ ನನ್ನ ಆಯ್ಕೆಗಳು ರಾಜಕೀಯಗೊಂಡಾಗ, ಈ ಸಣ್ಣ ಸಂತೋಷವನ್ನು ನನ್ನಿಂದ ಕಸಿದುಕೊಳ್ಳಲಾಗುತ್ತದೆ. ನಾನು ಯಾರೆಂಬುದಕ್ಕೆ ಅಥವಾ ನನ್ನ ಮಕ್ಕಳಿಗೆ ಅವರ ಧರ್ಮದ ಬಗ್ಗೆ ಕಲಿಸುವಲ್ಲಿ ನನಗಿರುವ ಹೆಮ್ಮೆಗೆ ನಾನು ನಿರಂತರವಾಗಿ ಉತ್ತರಿಸಬೇಕೆಂದು ನನಗೆ ಅನಿಸುತ್ತದೆ’ ಎಂದು ಅವರು ಹೇಳಿದರು.
ಪ್ರೀತಿ ಜಿಂಟಾ ರಾಜಕೀಯ ಪ್ರವೇಶಿಸಿ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದಕ್ಕೂ ಅವರು ಸ್ಪಷ್ಟ ಉತ್ತರ ನೀಡಿದ್ದಾಳೆ. ‘ಸಾಮಾಜಿಕ ಮಾಧ್ಯಮದಲ್ಲಿರುವ ಜನರ ಸಮಸ್ಯೆ ಅದೇ, ಎಲ್ಲರೂ ಇತರರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ದೇವಾಲಯಗಳಿಗೆ ಹೋಗುವುದು, ಮಹಾಕುಂಭಕ್ಕೆ ಹೋಗುವುದು ಮತ್ತು ನಾನು ಯಾರು, ನನ್ನ ಗುರುತು ಏನು ಎಂಬುದರ ಬಗ್ಗೆ ಹೆಮ್ಮೆಪಡುವುದು, ನಾನು ರಾಜಕೀಯ ಅಥವಾ ಬಿಜೆಪಿಯನ್ನು ಪ್ರವೇಶಿಸುತ್ತೇನೆ ಎಂದು ಅರ್ಥವಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಭಾರತದ ಹೊರಗೆ ವಾಸಿಸಿದ ನಂತರ, ನನ್ನ ತಾಯ್ನಾಡಿನ ನಿಜವಾದ ಮಹತ್ವವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ಎಲ್ಲರಂತೆ, ನಾನು ಈಗ ಭಾರತ ಮತ್ತು ಭಾರತೀಯ ವಿಷಯಗಳನ್ನು ಹೆಚ್ಚು ಮೆಚ್ಚುತ್ತೇನೆ’ ಎಂದು ಅವರು ಈ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



