ಸಿನಿಮಾ ರಂಗದಿಂದ ದೂರ ಇರೋ ಅನುಷ್ಕಾ ಶರ್ಮಾ ಒಟ್ಟು ಆಸ್ತಿ ಎಷ್ಟು ಕೋಟಿ ರೂಪಾಯಿ?
Anushka Sharma: ವಿರಾಟ್ ಕೊಹ್ಲಿಯ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬ ಇಂದು (ಮೇ 1). ವಿರಾಟ್ ಜೊತೆ ಮದುವೆಯಾಗಿ ಮಕ್ಕಳಾದ ಬಳಿಕ ಚಿತ್ರರಂಗದಿಂದ ದೂರಾಗಿಬಿಟ್ಟಿದ್ದಾರೆ ಅನುಷ್ಕಾ ಶರ್ಮಾ. ಹಾಗೆಂದು ಅವರ ಆದಾಯವೇನೂ ಕಡಿಮೆ ಆಗಿಲ್ಲ. ಅನುಷ್ಕಾ ಶರ್ಮಾರ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಮಾಹಿತಿ...

ಅನುಷ್ಕಾ ಶರ್ಮಾ (Anushka Sharma) ಅವರಿಗೆ ಇಂದು (ಮೇ 1) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅನುಷ್ಕಾ ಜನಿಸಿದ್ದು 1988ರಲ್ಲಿ. ಅಂದರೆ ಅವರಿಗೆ ಈಗ 37 ವರ್ಷ. ವಿರಾಟ್ ಕೊಹ್ಲಿ ಅವರು ಸದ್ಯ ಐಪಿಎಲ್ ಕಾರಣಕ್ಕೆ ಬೆಂಗಳೂರಿನಲ್ಲಿ ಇದ್ದಾರೆ. ಬರ್ತ್ಡೇ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಅವರು ಬೆಂಗಳೂರಿಗೆ ಬರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಈ ಮಧ್ಯೆ ಅನುಷ್ಕಾ ಶರ್ಮಾ ಅವರ ನೆಟ್ವರ್ತ್ ಎಷ್ಟು ಎಂಬುದನ್ನು ನೋಡೋಣ. ಅನುಷ್ಕಾ-ವಿರಾಟ್ ಪೈಕಿ ಯಾರು ಹೆಚ್ಚು ಶ್ರೀಮಂತರು ಎಂಬುದನ್ನು ತಿಳಿದುಕೊಳ್ಳೋಣ.
ಅನುಷ್ಕಾ ಶರ್ಮಾ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದರು. 2008ರಲ್ಲಿ ರಿಲೀಸ್ ಆದ ‘ರಬ್ನೆ ಬನಾದಿ ಜೋಡಿ’ ಸಿನಿಮಾದಲ್ಲಿ ಅವರು ಮೊದಲ ಬಾರಿಗೆ ಕಾಣಿಸಿಕೊಂಡರು. ಶಾರುಖ್ ಖಾನ್ ಜೊತೆ ನಟಿಸೋ ಅವಕಾಶ ಅವರಿಗೆ ಸಿಕ್ಕಿತು. ಆ ಬಳಿಕ ‘ಬ್ಯಾಂಡ್ ಬಜಾ ಭಾರತ್’, ‘ಜಬ್ ತಕ್ ಹೇ ಜಾನ್’, ‘ಪಿಕೆ’, ‘ಸುಲ್ತಾನ್’ ರೀತಿಯ ಸಿನಿಮಾಗಳಲ್ಲಿ ಅವರು ನಟಿಸಿದರು. 2018ರಲ್ಲಿ ರಿಲೀಸ್ ಆದ ‘ಜೀರೋ’ ಚಿತ್ರವೇ ಕೊನೆ. ಇದಾದ ಬಳಿಕ ಅನುಷ್ಕಾ ಸಿನಿಮಾ ಮಾಡಲೇ ಇಲ್ಲ. ಅವರ ‘ಚಕ್ದಾ ಎಕ್ಸ್ಪ್ರೆಸ್’ 2022ರಲ್ಲೇ ಶೂಟಿಂಗ್ ಪೂರ್ಣಗೊಳಿಸಿದೆ. ಆದರೆ, ರಿಲೀಸ್ ಆಗಿಲ್ಲ.
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಇಬ್ಬರ ಆಸ್ತಿ ಸೇರಿದರೆ 1300 ಕೋಟಿ ರೂಪಾಯಿ ಆಗಲಿದೆ. 1050 ಕೋಟಿ ರೂಪಾಯಿ ವಿರಾಟ್ ಕೊಹ್ಲಿ ಅವರ ಆಸ್ತಿ ಆದರೆ, 255 ಕೋಟಿ ರೂಪಾಯಿ ಅನುಷ್ಕಾ ಶರ್ಮಾ ಅವರ ಆಸ್ತಿ ಆಗಿದೆ. ಅನುಷ್ಕಾ ಶರ್ಮಾ ಅವರು ನಟನೆ, ಬ್ರ್ಯಾಂಡ್ಗಳ ಪ್ರಚಾರ ಹಾಗೂ ಉದ್ಯಮದಿಂದ ಹಣ ಪಡೆದುಕೊಳ್ಳುತ್ತಾರೆ.
ಇದನ್ನೂ ಓದಿ:3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?
ಅನುಷ್ಕಾ ಶರ್ಮಾ ಅವರು ಜೀವಾ ಹೆಸರಿನಿಂದ ತಮ್ಮದೇ ಉದ್ಯಮ ಹೊಂದಿದ್ದಾರೆ. ಇದರ ಮೂಲಕ ಅವರು ಹಣ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅನುಷ್ಕಾ ಶರ್ಮಾ ಅವರು ನಟನೆಯಿಂದ ದೂರ ಇದ್ದರೂ ಹೆಚ್ಚಿನ ವ್ಯತ್ಯಾಸ ಆಗುತ್ತಿಲ್ಲ. ಇದಲ್ಲದೆ, ಅವರು ಹಲವು ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ಮೊದಲು ಅವರು ಪೂಮಾ ಕಂಪನಿಗೆ ಬ್ರ್ಯಾಂಡ್ ಪ್ರಚಾರದಲ್ಲಿ ಅವರು ಭಾಗಿ ಆಗಿದ್ದರು. ಆದರೆ, ಈಗ ಅವರು ಈ ಕಂಪನಿ ಪ್ರಚಾರದಿಂದ ಹಿಂದೆ ಸರಿದಿದ್ದಾರೆ.
ಅನುಷ್ಕಾ ಶರ್ಮಾ ಅವರು ಮತ್ತೆ ನಟನೆಗೆ ಮರಳಬೇಕು ಎಂಬುದು ಅನೇಕರ ಕೋರಿಕೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಅವರು ಮಕ್ಕಳ ಆರೈಕೆಯಲ್ಲಿ ಇನ್ನು ತೊಡಗಿಕೊಳ್ಳೋ ಸಾಧ್ಯತೆ ಇದೆ. ಅನುಷ್ಕಾ-ವಿರಾಟ್ ದಂಪತಿಗೆ ಅಕಾಯ್ ಹೆಸರಿನ ಮಗ, ವಮಿಕಾ ಹೆಸರಿನ ಮಗಳು ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



