ಕಾಂಗ್ರೆಸ್ ನಾಯಕರ ದಿಗ್ವಿಜಯ ಸಿಂಗ್ ಅವರ ಎಸ್ಯುವಿ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿರುವ ಘಟನೆ ಮಧ್ಯಪ್ರದೇಶದ ರಾಜ್ಗಢದಲ್ಲಿ ನಡೆದಿದೆ. ಇದೀಗ ಅಪಘಾತದ ವಿಡಿಯೋ ವೈರಲ್ ಆಗಿದೆ. ಕಾರಿಗೆ ಡಿಕ್ಕಿಯಾದ ನಂತರ ಬೈಕ್ ಸವಾರ ಹಾರಿ ಪಿಲ್ಲರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿವೆ. ಘಟನೆಯ ನಂತರ ದಿಗ್ವಿಜಯ್ ಸಿಂಗ್ ಕಾರಿನಿಂದ ಕೆಳಗಿಳಿದು ಗಾಯಗೊಂಡ ಯುವಕನನ್ನು ಜಿರಾಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಯುವಕನನ್ನು ಭೇಟಿ ಮಾಡಲು ದಿಗ್ವಿಜಯ್ ಸಿಂಗ್ ಸ್ವತಃ ಜಿರಾಪುರ್ ಆಸ್ಪತ್ರೆಗೆ ಬಂದಿದ್ದರು, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಭೋಪಾಲ್‌ಗೆ ಕಳುಹಿಸಲಾಗಿದೆ.
ಘಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ದಿಗ್ವಿಜಯ್ ಸಿಂಗ್, ಈ ಘಟನೆ ಜಿರಾಪುರದಲ್ಲಿ ನಡೆದಿದೆ, ಆದರೆ ದೇವರ ದಯೆಯಿಂದ ಯುವಕನಿಗೆ ಹೆಚ್ಚು ಗಾಯವಾಗಿಲ್ಲ. ಅವರನ್ನು ಚಿಕಿತ್ಸೆಗಾಗಿ ಭೋಪಾಲ್‌ಗೆ ಕಳುಹಿಸಲಾಗಿದೆ.
ಸಾಕಷ್ಟು ಜನಸಂದಣಿ ಇತ್ತು, ಅದೇ ವೇಳೆಗೆ ಬೈಕ್ ಸವಾರ ಏಕಾಏಕಿ ಕಾರಿನ ಮುಂದೆ ಬಂದಿದ್ದಾನೆ. ಚಾಲಕ ನಿಯಂತ್ರಣ ತಪ್ಪಿ ಗುದ್ದಿದ್ದಾರೆ, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಮತ್ತಷ್ಟು ಓದಿ: ಮಂಡ್ಯ: ಎರಡು ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರ ಸಾವು
ಗಾಯಾಳುಗಳ ಚಿಕಿತ್ಸೆಗೆ ಸಂಪೂರ್ಣ ವ್ಯವಸ್ಥೆ ಮಾಡುವುದಾಗಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಬೈಕ್ ಚಾಲಕ ಬೆಂಗಾವಲು ಪಡೆಯ ಮುಂದೆ ಬಂದರು
ವಾಸ್ತವವಾಗಿ, ದಿಗ್ವಿಜಯ್ ಸಿಂಗ್ ಅವರು ಗುರುವಾರ ಒಂದು ದಿನದ ಪ್ರವಾಸಕ್ಕೆಂದು ರಾಜ್‌ಗಢ ತಲುಪಿದ್ದರು, ಅಲ್ಲಿಂದ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಕಾಶ್ ಪುರೋಹಿತ್ ಅವರ ಮನೆಗೆ ಕೊಡಕ್ಯಾ ಗ್ರಾಮಕ್ಕೆ ತೆರಳಿ ಸಾಂತ್ವನ ಹೇಳಿದರು.
ಸ್ವಲ್ಪ ಹೊತ್ತಿನ ನಂತರ ಅವರು ತಮ್ಮ ಕಪ್ಪು ಬಣ್ಣದ ಕಾರಿನಲ್ಲಿ ರಾಜಗಢಕ್ಕೆ ಹೊರಟರು.
Senior Congress leader and former Chief Minister of #MadhyaPradesh Digvijay Singh’s vehicle hit a motorcyclist in Rajgarh, the condition of the injured youth is stable. pic.twitter.com/4ztbmPnglY
— Siraj Noorani (@sirajnoorani) March 9, 2023
ಅದೇ ಸಮಯದಲ್ಲಿ ಜಿರಾಪುರ ಬಳಿಯ ವಿಜಯ್ ಕಾನ್ವೆಂಟ್ ಶಾಲೆಯ ಮುಂದೆ ಇವರ ಬೆಂಗಾವಲು ವಾಹನ ಹೊರಡುತ್ತಿದ್ದಾಗ ಏಕಾಏಕಿ ಬೈಕ್ ಸವಾರನೊಬ್ಬ ಬೆಂಗಾವಲು ವಾಹನದ ಮುಂದೆ ಬಂದಿದ್ದಾನೆ, ವೇಗವಾಗಿ ಬಂದ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು.
ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿದ ನಂತರ ವೈದ್ಯರು ಆತನನ್ನು ಭೋಪಾಲ್‌ಗೆ ಕಳುಹಿಸಿದ್ದಾರೆ. ವ್ಯಕ್ತಿಯ ದೂರಿನ ಮೇರೆಗೆ ಪೊಲೀಸರು ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಿಕೊಂಡು ಕಾರನ್ನು ವಶಪಡಿಸಿಕೊಂಡಿದ್ದಾರೆ