ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ

|

Updated on: Mar 15, 2024 | 8:38 PM

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗೆ ಅನುಮತಿ ನಿರಾಕರಿಸಿದ ತಮಿಳುನಾಡು ಪೊಲೀಸ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಬಿಜೆಪಿ ಘಟಕವು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ರೋಡ್‌ಶೋಗೆ ಅನುಮತಿ ನೀಡಿದೆ. ಮಾರ್ಚ್ 18ರಂದು ಕೊಯಮತ್ತೂರಿನಲ್ಲಿ ಮೋದಿ ರೋಡ್ ಶೋ ನಡೆಯಲಿದೆ.

ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ
ನರೇಂದ್ರ ಮೋದಿ
Follow us on

ಚೆನ್ನೈ ಮಾರ್ಚ್ 15: ಮಾರ್ಚ್ 18 ರಂದು ಕೊಯಮತ್ತೂರಿನಲ್ಲಿ (Coimbatore) ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರೋಡ್‌ ಶೋಗೆ ಭದ್ರತಾ ಅಪಾಯ ಸೇರಿದಂತೆ ವಿವಿಧ ಕಾರಣಗಳನ್ನು ಉಲ್ಲೇಖಿಸಿ ತಮಿಳುನಾಡು (Tamil nadu) ಸರ್ಕಾರ ಅನುಮತಿ ನಿರಾಕರಿಸಿದ ನಂತರ ಇಂದು (ಶುಕ್ರವಾರ) ಮದ್ರಾಸ್ ಹೈಕೋರ್ಟ್ ರೋಡ್ ಶೋಗೆ ಅನುಮತಿ ನೀಡಿದೆ. ಪೊಲೀಸ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಬಿಜೆಪಿ ಘಟಕವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ರೋಡ್‌ಶೋಗೆ ಅನುಮತಿ ನೀಡಿದೆ. 2024 ರ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಶುಕ್ರವಾರ ಹೈದರಾಬಾದ್‌ನಲ್ಲಿ ಮೋದಿ ರೋಡ್ ಶೋ ನಡೆಯಲಿದ್ದು, ಸೋಮವಾರ ಕೊಯಮತ್ತೂರಿನಲ್ಲಿ ಅವರು 4-ಕಿಮೀ ರೋಡ್‌ಶೋ ನಡೆಸಲಿದ್ದಾರೆ.

ತಮಿಳುನಾಡು ಪೊಲೀಸರು ರೋಡ್ ಶೋಗೆ ಅನುಮತಿ ನಿರಾಕರಿಸಿದ್ದೇಕೆ?

ಕೊಯಮತ್ತೂರು ಬಿಜೆಪಿ ಜಿಲ್ಲಾಧ್ಯಕ್ಷ ಜೆ ರಮೇಶ್ ಕುಮಾರ್ ಅವರು ಸಲ್ಲಿಸಿರುವ ಅರ್ಜಿಯ ಪ್ರಕಾರ, ಕೊಯಮತ್ತೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಶಾಂತಿ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗವನ್ನು ಉಲ್ಲೇಖಿಸಿ ರೋಡ್‌ಶೋ ಅರ್ಜಿಯನ್ನು ತಿರಸ್ಕರಿಸಲಾಗಿದೆ. “ಈ ಆದೇಶವು ಅನಿಯಂತ್ರಿತವಾಗಿದೆ ಮತ್ತು ಭಾರತದ ಸಂವಿಧಾನದ 19 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ನಿರಾಕರಣೆಯಲ್ಲಿ ಹೇಳಲಾದ ಕಾರಣಗಳು ಸಮಂಜಸವಲ್ಲ ಮತ್ತು ರೋಡ್ ಶೋ ನಡೆಸಲು ವಿಧಿಸಲಾದ ಯಾವುದೇ ಷರತ್ತುಗಳನ್ನು ಪಾಲಿಸಲು ಅವರು ಸಿದ್ಧರಿದ್ದರೂ ರಾಜಕೀಯ ಕಾರಣಗಳಿಂದಾಗಿಯೇ ಪೊಲೀಸರು ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಡಿಎಂಕೆ ಪಕ್ಷ ತಮಿಳುನಾಡಿನ ಭವಿಷ್ಯ ಮತ್ತು ಸಂಸ್ಕೃತಿಯ ಶತ್ರು: ಮೋದಿ

ಕೊಯಮತ್ತೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಯಾಕೆ?

ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ರೋಡ್ ಶೋ ನಡೆಸಲಾಗುವುದು. ಕೊಯಮತ್ತೂರಿನ ಜನರಿಗೆ ಪ್ರಧಾನಮಂತ್ರಿಯವರು ಪ್ರಾರಂಭಿಸಿದ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರ ಲಾಭ ವರ್ಗಾವಣೆಯ ಮೂಲಕ ಅವುಗಳನ್ನು ಪಡೆದುಕೊಳ್ಳುವಂತೆ ಒತ್ತಾಯಿಸಲು, ತಮಿಳುನಾಡಿನಲ್ಲಿ ಇತ್ತೀಚಿನ ಅಪಾಯಕಾರಿ ಮಾದಕವಸ್ತು ಕಳ್ಳಸಾಗಣೆಯ ಘಟನೆಗಳ ಹಿನ್ನಲೆಯಲ್ಲಿ ಡ್ರಗ್ಸ್ ಬೇಡ ಎನ್ನುವ ಅಭಿಯಾನದ ಭಾಗವಾಗಿ ಈ ರೋಡ್ ಶೋ ನಡೆಸಲಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Fri, 15 March 24